ಸಾಂಸ್ಕೃತಿಕ-ಕ್ರೀಡೆಯಲ್ಲಿ ಸಾಧನೆಗೈದ ಶಾಲೆ

ಲೋಕದರ್ಶನ ವರದಿ

ಮುಗಳಖೋಡ 04: ಸನ್ 2004-05 ರಲ್ಲಿ ಶ್ರೀ ಮುರಘರಾಜೇಂದ್ರ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಮುಗಳಖೋಡ-ಜಿಡಗಾ ಮಠದ ಅಧಿಪತಿಯಾಗಿರುವ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ಕೃಪಾ ಆಶೀರ್ವಾದದೊಂದಿಗೆ ಆದರ್ಶ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯು 24 ವಿದ್ಯಾರ್ಥಿಗಳಿಂದ ಚಾಲನೆಯಾಗಿ ಇದಿಗ 510 ವಿದ್ಯಾರ್ಥಿಗಳನ್ನು ಹೊಂದಿ ಹೆಮ್ಮರವಾಗಿ ಬೆಳೆದಿದೆ.

    ಆದರ್ಶ ಶಿಕ್ಷಣ ಸಂಸ್ಥೆಯು 2004-05ನೇ ಸಾಲಿನಲ್ಲಿ ಎಸ್.ಜಿ.ಜಂಬಗಿ ಅವರ ಅಧ್ಯಕ್ಷತೆಯಲ್ಲಿ ಮುಗಳಖೋಡ ಮಠದ ಮುಂಭಾಗದಲ್ಲಿ ದೀಪಸ್ತಂಬದ ಹತ್ತಿರ ಮಠದ ವಸತಿ ಭವನದಲ್ಲಿ 24 ವಿದ್ಯಾರ್ಥಿಗಳು ಮತ್ತು 2ಜನ ಶಿಕ್ಷಕರಿಂದ ಆರಂಭವಾಯಿತು ನಂತರ 2011-12ನೇ ಸಾಲಿನಲ್ಲಿ ಸಪ್ತಸಾಗರ ಅವರ ತೋಟದಲ್ಲಿ ವರ್ಗಾವಣೆ ಮಾಡಿ ಇಲ್ಲಿ 6 ಸ್ವತಃ ಕೊಠಡಿಗಳಲ್ಲಿ 10 ಜನ ಶಿಕ್ಷಕರಿಂದ 240 ವಿದ್ಯಾರ್ಥಿಗಳಿಗೆ ಶಿಕ್ಷಣ ದೊರೆಯಲಾರಂಭಿಸಿತು. 

    ಇದೀಗ ವರ್ಷಗಳು ಕಳೆದಂತೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಾ ಇಂದಿನವರೆಗೆ ಅಂದರೆ 2018-19ನೇ ಸಾಲಿನಲ್ಲಿ ಸ್ವತಃ 13 ಕೊಠಡಿಗಳು, 16 ಜನ ನೂರಿತ ಶಿಕ್ಷಕರು ಮತ್ತು 496 ವಿದ್ಯಾರ್ಥಿಗಳನ್ನು ಹೊಂದಿದು ಶಾಲೆಯ ಹೆಮ್ಮೆಯಾಗಿದೆ. 

ಸದ್ಯದಲ್ಲಿ ಪ್ರಧಾನ ಗುರುಗಳಾದ ಅಜೀತ ತೇರದಾಳ ಅವರ ಮಾರ್ಗದರ್ಶನದಲ್ಲಿ  ಶಾಲೆಯಲ್ಲಿ ವಿದ್ಯಾರ್ಥಿಗಳ ಹಲವಾರು ರೀತಿಯ ಸಾಧನೆಗಳು ಕಾಣಸಿಗುತ್ತವೆ. ಸನ್ 2004ರಿಂದ ಇಲ್ಲಿಯವರೆಗೆ ಕ್ವಿಜ್, ರಸಪ್ರಶ್ನೆ ಕಾರ್ಯಕ್ರಮಗಳಲ್ಲಿ ತಾಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟಗಳಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಪಡೆದುಕೊಂಡಿದೆ.

ಅದೇ ರೀತಿ ಸತತ್ 4 ವರ್ಷಗಳಲ್ಲಿ ಕರ್ನಾಟಕ ರಾಜ್ಯದ ಪ್ರತಿಷ್ಠಿತ ಮೂಡಭೀದರಿಯ ಆಳ್ವಾಸ ಶಾಲೆಗೆ ಇಲ್ಲಿಯವರೆಗೆ ಈ ಶಾಲೆಯ 28 ಜನ ವಿದ್ಯಾರ್ಥಿಗಳು  ಆಯ್ಕೆಯಾಗಿರುವುದು ಶಾಲೆಯ ಸಾಧನೆಯನ್ನು ತೋರಿಸಿಕೊಡುತ್ತದೆ.

ಕ್ರೀಡಾ ಸಾಧನೆ: ಸನ್ 2017-18ನೇ ಸಾಲಿನಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ಕಬಡ್ಡಿಯಲ್ಲಿ ಬಾಲಕ ಮತ್ತು ಬಾಲಕಿಯರ ತಂಡ ವಲಯ ತಾಲೂಕು, ಜಿಲ್ಲಾ ಮಟ್ಟದಲ್ಲಿ ಗೆದ್ಧು ವಿಭಾಗದ ಮಟ್ಟಕ್ಕೆ ಆಯ್ಕೆಯಾಗಿ ಸಾಧನೆಗೈದ ವಿದ್ಯಾರ್ಥಿಗಳನ್ನು ಶಾಲೆಯಲ್ಲಿ ಕಾಣಬಹುದು. ಅದೇ ರೀತಿಯಾಗಿ 2017ನೇ ಸತೀಶ ಸುಗರ್ಸ ಅವಾಡ್ರ್ಸನ ಕಬ್ಬಡ್ಡಿಯಲ್ಲಿ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದು ಕೊಂಡಿರುತ್ತಾರೆ. ಸನ್ 2018-19ನೇ ಸಾಲಿನಲ್ಲಿ ಬಾಲಕ ಬಾಲಕಿಯರ ಕಬ್ಬಡ್ಡಿ ತಂಡವು ತಾಲೂಕು ಮಟ್ಟದಿಂದ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. 

ಪಟ್ಟಣದ ಬೇರೆ ಬೇರೆ ಬೇರೆ ಶಾಲೆಗಳಲ್ಲಿ ನಡೆದಿರುವ ಹಲವಾರು ರೀತಿಯ ಸ್ಪರ್ಧೆಗಳಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ಪ್ರತಿಸಲ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿರುತ್ತಾರೆ. 

2010-11ನೇ ಸಾಲಿನಲ್ಲಿ ಪ್ರತಿವರ್ಷ ಪ್ರತಿಭಾ ಕಾರಂಜಿಯಲ್ಲಿ ಸಂಗೀತ ಕಂಠಪಾಠ, ಕ್ಲೇಮ್ ಮಾಡಲಿಂಗ ಮತ್ತು ಇನ್ನೂ ಅನೇಕ ಸ್ಪರ್ಧೆಗಳಲ್ಲಿ ಸಾಧನೆಗೈದು 13-14ನೇ ಸಾಲಿನಲ್ಲಿ ಕಂಠಪಾಠ ಸ್ಪರ್ಧೆಯಲ್ಲಿ ಕನ್ನಡ ಇಂಗ್ಲೀಷ ವಿಭಾಗದಲ್ಲಿ ಜಿಲ್ಲಾ ಮಟ್ಟದಲ್ಲಿ ಕ್ರಮವಾಗಿ ಪ್ರಥಮ ದ್ವಿತೀಯ ಸ್ಥಾನಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ಶಾಲೆಯ ಸಾಧನೆ ತೊರುತ್ತದೆ.

ಇದೀಗ ಶಾಲೆಯ ಮುಂಭಾಗದಲ್ಲಿ ವಿಶಾಲವಾದ ಆವರಣ, ಸುತ್ತಮುತ್ತ ಗಿಡಮರಗಳಿದ್ದು ಹಸಿರುಮಯ ಮತ್ತು ಶಾಂತಮಯವಾದ ವಾತಾವರಣ  ಇರುವದರಿಂದ ಈ ಶಾಲೆಯ ಮಕ್ಕಳಿಗೆ ಓದಲು ತುಂಬಾ ಸಹಾಯಕಾರಿಯಾಗಿರುವುದನ್ನು ಕಾಣಬಹುದು. ಕುಡಿಯುವ ನೀರಿನ ಟ್ಯಾಂಕ್ ಮತ್ತು ಸ್ವಚ್ಚಮಯವಾದ ಶೌಚಾಲಯಗಳನ್ನು ಈ ಶಾಲೆ ಹೊಂದಿರುವುದನ್ನು ನೊಡಬಹುದು. ಇಂತಹ ಶಾಲೆ ಇಂದು ಮುಗಳಖೋಡ ಪಟ್ಟಣದಲ್ಲಿ ಹೆಮ್ಮರವಾಗಿ ಬೆಳೆದು ನಿಂತು ತನ್ನ ಛಾಪನ್ನು ಮೂಡಿಸಿದೆ. ಇಂದು ಈ ಶಾಲೆ 15ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ.