ಬೀದಿನಾಯಿಗಳ ಹಾವಳಿಗೆ ಬೆಚ್ಚಿದ ಗ್ರಾಮೀಣ ಜನತೆ ಶ್ವಾನಗಳ ಕಾಟಕ್ಕೆ ಮನೆಯಿಂದ ಹೊರಬರಲು ಭಯ
ಮಾಂಜರಿ 09: ಚಿಕ್ಕೋಡಿ ತಾಲೂಕಿನ ಗ್ರಾಮೀಣ ಭಾಗದ ಅನೇಕ ಹಳ್ಳಿಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು ನಾಯಿ ಕಡಿತದ ಪ್ರಕರಣಗಳು ದಾಖಲಾಗಿಲ್ಲವಾದರೂ ವಾಹನ ಸವಾರರು ಬಿದ್ದು ಪೆಟ್ಟು ಮಾಡಿಕೊಂಡಿರುವ ಅನೇಕ ಘಟನೆಗಳು ನಡೆದಿವೆ. ಮಕ್ಕಳು, ಮಹಿಳೆಯರು, ವೃದ್ಧರು ಬೀದಿ ನಾಯಿಗಳ ಹಾವಳಿಯಿಂದ ಭಯದಿಂ ದಲೇ ತಿರುಗಾಡುವಂತಹ ಪರಿಸ್ಥಿತಿ ಎದುರಾಗಿದೆ.
ಗ್ರಾಮೀಣ ಭಾಗದ ಅನೇಕ ಹಳ್ಳಿಗಳಲ್ಲಿ ಮತ್ತು ರಸ್ತೆ ಸೇರಿದಂತೆ ಅನೇಕ ಕಡೆಗಳಲ್ಲಿ ಗುಂಪು-ಗುಂಪಾಗಿ ನಾಯಿಗಳು ಪ್ರತ್ಯಕ್ಷವಾಗಿ ದ್ದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ದ್ವಿಚಕ್ರ ವಾಹನ ಸವಾರರು, ಪತ್ರಿಕೆಗಳ ವಿತರಕರು, ಹಾಲು ಮಾರುವರು ಭಯದಿಂದಲೇ ಕಾರ್ಯನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಕು ನಾಯಿ, ಬೆಕ್ಕುಗಳನ್ನು ಬೀದಿನಾಯಿಗಳು ಕಚ್ಚಿ ಕೊಂದುಹಾಕಿವೆ. ಚಂದುರ ಗ್ರಾಮದ ನಿವಾಸಿ ದೇಸಾಯಿ ಅವರು ಸಾಕಿದ ಬೆಕ್ಕು ಬೀದಿ ನಾಯಿಗಳ ದಾಳಿಗೆ ಬಲಿಯಾಗಿದೆ. ಶಾಲಾ ಮಕ್ಕಳ ಮೇಲೆ ದಾಳಿ ನಡೆಸಲು ಬಂದ ನಾಯಿಗಳನ್ನು ಸ್ಥಳೀಯರು ರಕ್ಷಿಸಿದ ಅನೇಕ ಉದಾಹರಣೆಗಳಿವೆ. ಬೀದಿನಾಯಿಗಳ ಹಾವಳಿಗೆ ಸೂಕ್ತ ಕ್ರಮ ಜರುಗಿಸುವಂತೆ ಗ್ರಾಮ ಪಂಚಾಯಿತಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಗ್ರಾಮೀಣ ಭಾಗದ ಅನೇಕ ಹಳ್ಳಿಗಳ ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರಿ ಸ್ಥಾನ ಪೈಪೋಟಿಯಿಂದ ಅಧಿಕಾರಿಯ ನಿಯೋಜ ನೆಯಾಗಿ ಗ್ರಾಮದದ ಜನತೆ ಹಾಗೂ ಸಿಬ್ಬಂದಿ ನಿಟ್ಟುಸಿರು ಬಿಡುವಂತಾಗಿದೆ. ಗ್ರಾಮದಲ್ಲಿ ಕಸ ವಿಲೇವಾರಿ, ಕುಡಿಯುವ ನೀರು ಸರಬರಾಜು, ಬೀದೀದೀಪ, ರಸ್ತೆಗಳು, ಕಾಲುವೆಗಳ, ಯುಜಿಡಿ ನಿರ್ವಹಣೆ ಮುಂತಾದ ಅಗತ್ಯ ಕ್ರಮಗಳ ಜೊತೆಗೆ ಬೀದಿನಾಯಿಗಳ ಹಾವಳಿ ತಪ್ಪಿಸುವ ಕೆಲಸವಾಗಬೇಕಿದೆ. ತಾಲೂಕಿನ ಅನೇಕ ಗ್ರಾಮದಲ್ಲಿ ಬೀದಿನಾಯಿಗಳ ಹಾವಳಿ
ಬಗ್ಗೆ ಗ್ರಾಮಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆಯಲಾಗಿದೆ. ಸಿಬ್ಬಂದಿ ಸಭೆ ಕರೆದು ಚರ್ಚೆ ನಡೆಸಲಾಗಿದ್ದು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಆತಂಕ ಪಡಬೇಕಾಗಿಲ್ಲ ಬೀದಿನಾಯಿಗಳ ಹಾವಳಿ ಮಾತ್ರವಲ್ಲದೇ ಬೀಡಾಡಿ ದನಗಳು, ಕತ್ತೆ, ಹಾಗೂ ಹಂದಿ ಸಾಕಾಣಿಕೆ ಮಾಡುವವರಿಗೂ ಸೂಕ್ತವಾದ ನಿರ್ದೇಶನ ನೀಡಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಜರುಗಿಸಲಾಗುವುದು. ವಿರೂಪಾಕ್ಷ ಪೋತದಾರ್ ಗ್ರಾಮ ಅಭಿವೃದ್ಧಿ ಅಧಿಕಾರಿಗಳು ಮಾಂಜರಿ
ಗ್ರಾಮದಲ್ಲಿ ದಲ್ಲಿ ಚಿಕನ್, ಎಗ್ ರೈಸ್ ಅಂಗಡಿಗಳು ಹೆಚ್ಚಾದ ಪರಿಣಾಮ ಬೀದಿನಾಯಿಗಳ ಸಂಖ್ಯೆಯು ಹೆಚ್ಚಾಗಿದೆ. ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದರಿಂದ ನಾಯಿಗಳ ವಾಸಕ್ಕೆ ಅನುಕೂಲಕರ ವಾತಾವರ್ಣ ನಿರ್ಮಾಣವಾಗಿದೆ. ಬಾಲಕರು, ವೃದ್ಧರು, ಮಹಿಳೆಯರು ಭಯದಿಂದಲೇ ಸಂಚರಿಸುವ ಪರಿಸ್ಥಿತಿ ಇದೆ. ಈ ಬಗ್ಗೆ ಹಿಂದಿನ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು ಆದರೆ ಯಾವ ಪ್ರಯೋ ಜನವಾಗಿಲ್ಲ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತು ಅನಾಹುತಗಳು ನಡೆಯುವ ಮುನ್ನವೆ ಸೂಕ್ತ ಕ್ರಮ ಜರುಗಿಸಬೇಕು ಬಾಬಾಸಾಹೇಬ್ ಸದಲಗೆ ಗ್ರಾಮಸ್ಥ ಮಾಂಜರಿ