ಕಾರ್ಮಿಕರಿಗೆ ಮತದಾನ ದಿನದಂದು ವೇತನ ಸಹಿತ ರಜೆಯನ್ನು ಕಡ್ಡಾಯವಾಗಿ ನೀಡಲು ಅಧಿಕಾರಿ : ಶ್ರೀಶೈಲ್ ಸೋಮನಕಟ್ಟಿ

ಕಾರ್ಮಿಕರಿಗೆ ಮತದಾನ ದಿನದಂದು ವೇತನ ಸಹಿತ ರಜೆಯನ್ನು ಕಡ್ಡಾಯವಾಗಿ ನೀಡಲು ಅಧಿಕಾರಿ : ಶ್ರೀಶೈಲ್ ಸೋಮನಕಟ್ಟಿ   


ಹಾವೇರಿ 12 :ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತದಾನದ ದಿನದಂದು ಆ ಕ್ಷೇತ್ರದ ಮತದಾರರು ಮತದಾನ ಮಾಡಲು ಅನುಕೂಲವಾಗುವಂತೆ ನ.13 ರಂದು  ಪ್ರಜಾ ಪ್ರತಿನಿಧಿ ಕಾಯ್ದೆ- 1951 ರ ಕಲಂ 135 (ಬಿ) ಹಾಗೂ ಕರ್ನಾಟಕ ಓಧ್ಯೋಗಿಕ  ಸಂಸ್ಥೆಗಳ (ರಾಷ್ಟೀಯ ಹಾಗೂ ಹಬ್ಬದ ರಜಾ ದಿನಗಳು) ಕಾಯ್ದೆ-1963 ಕಲಂ 3-ಎ ಪ್ರಕಾರ ಉದ್ಯೋಗದಾತರು ಅಥವಾ ಮಾಲಿಕರು ತಮ್ಮ ಕಾರ್ಮಿಕರಿಗೆ ಮತದಾನ ದಿನದಂದು ವೇತನ ಸಹಿತ ರಜೆಯನ್ನು ಮಂಜೂರು ಮಾಡುವುದು ಕಡ್ಡಾಯವಾಗಿದೆ ಎಂದು ಪ್ರಭಾರಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಶ್ರೀಶೈಲ್ ಸೋಮನಕಟ್ಟಿ  ತಿಳಿಸಿದ್ದಾರೆ.  

ಶಿಗ್ಗಾಂವಿ ಮತ ಕ್ಷೇತ್ರಗಳ ಎಲ್ಲಾ ಖಾಸಗಿ ಸಂಸ್ಥೆಗಳಲ್ಲಿ ವ್ಯವಹಾರಿಕ ಸಂಸ್ಥೆಗಳಲ್ಲಿ, ಕಾರ್ಖಾನೆಗಳಲ್ಲಿ ಮತ್ತು ಸಂಘ ಸಂಸ್ಥೆಗಳಲ್ಲಿ ಖಾಯಂ ಅಥವಾ ದಿನಗೂಲಿ ಮೇಲೆ  ಕಾರ್ಯ ನಿರ್ವಹಿಸುತ್ತಿರುವ  ಎಲ್ಲಾ ಕಾರ್ಮಿಕರಿಗೆ ಮತದಾನ ದಿನದಂದು ವೇತನ ಸಹಿತ ರಜೆಯನ್ನು ಕಡ್ಡಾಯವಾಗಿ ನೀಡಲು ಅಧಿಕಾರಿಗಳು ತಿಳಿಸಿದ್ದಾರೆ.