ಕ್ಷಮೆ ಯಾಚಿಸಿದ ಸಚಿವ ಜಮೀರ್

ಮೈಸೂರು 12: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಕರಿಯಣ್ಣ ಎಂದು ಕರೆದಿದ್ದ ಸಚಿವ ಜಮೀರ್ ಅಹಮ್ಮದ್ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ.

ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ ಜಮೀರ್ 'ನನ್ನ ಮಾತಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ' ಎಂದಿದ್ದಾರೆ. 'ನಾನು ಕುಮಾರಸ್ವಾಮಿ ಅವರನ್ನು ಕರಿಯಣ್ಣ ಎಂದು ಕರೆದದ್ದು ಇದೇ ಮೊದಲೇನಲ್ಲ. ಪ್ರೀತಿಯಿಂದ ಅವರನ್ನು ಹಾಗೇ ಹಲವು ಸಲ ಕರೆದಿದ್ದೇನೆ. ಅವರೂ ನನ್ನನ್ನು ಕುಳ್ಳ ಎಂದು ಕರೆದಿದ್ದಾರೆ. ಆದರೆ ಚುನಾವಣೆ ಕಾರಣಕ್ಕೆ ಇದನ್ನು ವಿವಾದ ಮಾಡಲಾಗುತ್ತಿದೆ' ಎಂದರು.