ಇಬ್ಬರು ಮನೆ ಕಳ್ಳತನ ಮಾಡಿದ ಆರೋಪಿ ಬಂಧನ
ಮುಂಡಗೋಡ 12: ಪಟ್ಟಣದ ಭಾರತನಗರದ ಅರ್ಜುನ್‌ಸಿಂಗ್ ನಂದುಸಿಂಗ್ ಠಾಕೋರ ಎಂಬುವರ ಮನೆಯಲ್ಲಿ ಕಳ್ಳತನವಾಗಿತ್ತು.
ಮನೆಯಲ್ಲಿ ಯಾರು ಇಲ್ಲದಿದ್ದಾಗ ಕಿಟಕಿ ಮುರಿದು ಕಳ್ಳತನ ಮಾಡಿ ಪರಾರಿಯಾದ ಆರೋಪಿಗಳನ್ನು ಇಲ್ಲಿನ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಪಟ್ಟಣದ ಚೇತನ ನರೇಶ ಪಾರ್ಗೆ (23ವರ್ಷ) ಸಾ. ಸುಭಾಸನಗರ ಮುಂಡಗೋಡ. ವಿನಾಯಕ ಕರಿಯಪ್ಪ ಭೋವಿವಡ್ಡರ (23ವರ್ಷ) ಸಾ?ಸುಭಾಸನಗರ ಆರೋಪಿ ಬಂಧಿತ ಈತನಿಂದ 10 ಗ್ರಾಂ ಬಂಗಾರದ ಚೈನ್-01, ಅಂದಾಜು ಮೊತ್ತ 52,000/-ರೂ, 2. 5 ಗ್ರಾಂ ಬಂಗಾರದ ಉಂಗುರ-01 ಅಂದಾಜು ಮೊತ್ತ 20,500/-ರೂ, ರಿಯಲ್ ಮೀ ಪೋನ್-01 ಅಂದಾಜು ಮೊತ್ತ 19,000/-ರೂ, ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣವನ್ನು ಭೇದಿಸಲು ನಾರಾಯಣ ಎಮ್. ಐ.ಪಿ.ಎಸ್. ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರಕನ್ನಡ ಕಾರವಾರ, ಸಿ.ಟಿ ಜಯಕುಮಾರ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕಾರವಾರ, ಜಗದೀಶ ಎಮ್ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕಾರವಾರ, ಗಣೇಶ ಕೆ,ಎಲ್ ಡಿ.ಎಸ್.ಪಿ ಶಿರಸಿ ರವರ ಮಾರ್ಗದರ್ಶನದಲ್ಲಿ ರಂಗನಾಥ ನೀಲಮ್ಮನವರ ಪೊಲೀಸ ನೀರೀಕ್ಷಕರು ರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದರು, ಸಿ ಪಿ ಐ ರಂಗನಾಥ ನೀಲಮ್ಮನವರ ಪೊಲೀಸ ನೀರೀಕ್ಷಕರು ಮುಂಡಗೋಡ ಪಿ.ಎಸ್.ಐ.ಹನಮಂತ ಕುಡಗುಂಟಿ ಹಾಗೂ ಸಿಬ್ಬಂದಿಗಳಾದ ಕೊಟೇಶ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ, ಮಹಾಂತೇಶ, ತಿರುಪತಿ ಚೌಡಣ್ಣನವರ, ಮುಂಡಗೋಡ ಪೊಲೀಸ್ ಠಾಣೆ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಇವರುಗಳಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಕಾರವಾರ ರವರು ಪ್ರಶಂಸಿಸಿ ಶ್ಲಾಘನೆ ವ್ಯಕ್ತಪಡಿಸಿರುತ್ತಾರೆ.