ಸರ್ವಜ್ಞ ವಿದ್ಯಾಪೀಠದಲ್ಲಿ ಸಾವಿತ್ರಿಬಾಯಿ ಪುಲೆ ಜಯಂತಿ ಆಚರಣೆ

Savitribai Pule Jayanti Celebration at Sarvajna Vidyapeeth

ಸರ್ವಜ್ಞ ವಿದ್ಯಾಪೀಠದಲ್ಲಿ ಸಾವಿತ್ರಿಬಾಯಿ ಪುಲೆ ಜಯಂತಿ ಆಚರಣೆ

ತಾಳಿಕೋಟಿ 03: ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ  ಭಾರತದ ಮೋದಲ ಮಹಿಳಾ ಶಿಕ್ಕಕಿ ಸಾವಿತ್ರಿಬಾಯಿ ಪುಲೆರವರ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ  ಸಂಸ್ಥಾಪಕ ಅಧ್ಯಕ್ಷ  ಸಿದ್ದನಗೌಡ ಮಂಗಳೂರ ಅವರು ಮಾತನಾಡಿ ಸಾವಿತ್ರಿಬಾಯಿ ಪುಲೆರವರು ಬಾಲ್ಯದಲ್ಲಿ ಜ್ಯೋತಿಬಾ ಪುಲೆ ಅವರನ್ನು ಮದುವೆ ಮಾಡಿಕೊಂಡರು ಮಹಿಳೆಯರು ವಿದ್ಯಾವಂತರಾಗಬೇಕು ಕೆವಲ ಅಡುಗೆ ಮನೆಗೆ ಸಿಮೀತರಾಗದೆ  ಉತ್ತಮ ಸಮಾಜವನ್ನು ನಿರ್ಮಾಣ ಮಾಡುವಂತರಾಗಬೇಕು. ಸಾವಿತ್ರಿಬಾಯಿ ಪುಲೆ ರವರು ಅಧ್ಯಯನ ಮಾಡುವಂತಹ ಸಂದರ್ಭದಲ್ಲಿ ಕಿಡಗೇಡಿಗಳು ಶಾಲೆಗೆ ಹೊಗಲು ಬಿಡುತ್ತಿರಲಿಲ್ಲಾ  ಅವರಿಗೆ ಮಣ್ಣು ರಾಡಿಯನ್ನು ಎರಚುತ್ತಿದ್ದರು ಅಂತಹ ಸಂಧರ್ಭದಲ್ಲಿ ಅವರು ಎದೆಗುಂದದೆ ಸಮಾಜದಲ್ಲಿ ಏನಾದರು ಸಾದಿಸಬೇಕು ಎಂಬ ಛಲದಿಂದ ಶಾಲೆಗೆ ಹೋಗುತ್ತಿದ್ದರು ಕಿಡಗೇಡಿಗಳು  ರಾಡಿ ಎರಚಿದರೆ ಸೀರೆಯನ್ನು ಬದಲಿಸಿಕೊಳ್ಳಲು ತಮ್ಮ ಕೈಚೀಲದಲ್ಲಿ ಇನ್ನೋಂದು ಸೀರೆಯನ್ನು ತಗೆದುಕೊಂಡು ಹೋಗುತ್ತಿದ್ದರು. ಮುಂದೆ ಅವರು  ಮಹಿಳೆಯರು ಶಿಕ್ಷಣದಿಂದ ವಂಚಿತರಾಗಬಾರದೆಂದು ಅವರಿಗಾಗಿಯೇ ವಸತಿ ಶಾಲೆಗಳನ್ನು ಪ್ರಾರಂಭಿಸಿ ಶಿಕ್ಷಣಕ್ಕಾಗಿ ಕ್ರಾಂತಿಯನ್ನು ಮೂಡಿಸಿ ಮಹಿಳೆಯರು ಶಿಕ್ಷಣ ಪಡೆಯುವಲ್ಲಿ ಸಬಲರು ಎಂದು ತೋರಿಸಿಕೊಟ್ಟರು ಎಂದರು.  

ಕಾರ್ಯಕ್ರಮದಲ್ಲಿ ಮುಖ್ಯಗುರುಗಳಾದ ಸಂತೋಷ ಪವಾರ.ಶಿಕ್ಷಕರಾದ ರಾಜು ಜವಳಗೇರಿ, ದೈಹಿಕ ಶಿಕ್ಷಕರಾದ  ಬಸವರಾಜ  ಚಳ್ಳಗಿ,ಶಾಂತಗೌಡ ಬಿರಾದಾರ,ಭೀಮನಗೌಡ ಸಾಸನೂರ,ರಸೂಲಸಾ ತುರಕಣಗೇರಿ, ರವಿಕುಮಾರ ಮಲ್ಲಾಬಾದಿ,ಬಸವರಾಜ ಸವದತದತ್ತಿ ,ಮೌಲಾಲಿ ವಾಲಿಕಾರ, ಸಿದ್ದನಗೌಡ ಮೂದನೂರು, ಶರಣಗೌಡ ಕಾಚಾಪುರ. ಸಿದ್ದನಗೌಡ ಚೌದರಿ, ಸಂಜುಕುಮಾರ ಭಜಂತ್ರಿ,ರಮೇಶ ಪಾಸೋಡಿ, ರೂಪಾ ಪಾಟೀಲ, ಶಿವಲೀಲಾ  ಚುಂಚನೂರ,ಲಕ್ಷ್ಮಿ ಚುಂಚುರ, ದೇವಿಂದ್ರ ಗುಳೆದ,ಅನಿತಾ ಚೌದ್ರಿ, ಅಂಬುಜಾ ಹಜೇರಿ,ರಾಜಬಿ ಬಿದರಿ,ಕಲ್ಪನಾ ಹಜೇರಿ, ನಾಗರತ್ನ ಮೈಲೇಶ್ವರ, ಹೇಮಾ ಕೊಡೆಕಲ್, ನಾಗಶ್ರೀ ನಾಯಕ, ಮೇಘಾ ಪಾಟೀಲ, ಮುಬಿನ ಮುರಾಳ, ತನುಶ್ರೀ ಮಹೇಂದ್ರಕರ,ಸರ್ವ ಗುರು ಬಳಗದವರು ಮತ್ತು  ವಿದ್ಯಾರ್ಥಿಗಳು ಉಪಸ್ಥಿತರಿದ್ದರು.