ದಿ.11 ರಂದು ಸವಿತಾ ಮಹರ್ಷಿ ಜಯಂತಿ ಆಚರಣೆ: ಅಂದು ಗದಗ ಜಿಲ್ಲೆಯ ಎಲ್ಲ ಕ್ಷೌರದಂಗಡಿಗಳು ಬಂದ್

Savita Maharshi Jayanti celebration on 11th: All barbershops in Gadag district closed on that day

ಗದಗ 02: ಗದಗ ಜಿಲ್ಲಾ ಸವಿತಾ ಸಮಾಜದ ಜನರಲ್ ಸಭೆಯು ಜಿಲ್ಲಾಧ್ಶಕ್ಷರಾದ ಕೃಷ್ಣಾ ಎಚ್ ಹಡಪದ ಅವರ ಅಧ್ಶಕ್ಷತೆಯಲ್ಲಿ ಹಾಗೂ ಅವಳಿ ನಗರದ 5.ಐದು (ದೈವ) ಸಮಾಜದ ಅಧ್ಯಕ್ಷರುಗಳು ಮತ್ತು ಗುರು ಹಿರಿಯರ ಉಪಸ್ತಿತಿಯಲ್ಲಿ ಜರುಗಿತು.       

ಸಭೆಯಲ್ಲಿ ದಿ.11ರಂದು ಮಂಗಳವಾರ ರಂದು ಮಧ್ಯಾನ 12:10.ಕ್ಕೆ ಸ್ಥಳ ನಗರದ ಡಿ.ಸಿ ಮಿಲ್ಲ ಹತ್ತಿರ ಡಾ" ಬಾಬು ಜಗಜೀವನರಾಂ ಕಲ್ಯಾಣ ಮಂಟಪದಲ್ಲಿ ಸವಿತಾ ಮಹರ್ಷಿ ಜಯಂತಿ ಆಚರಣೆ ಸಮಾರಂಭವು  ಅದ್ದೂರಿಯಾಗಿ ಸಡಗರ ಸಂಭ್ರಮದಿಂದ ಭಕ್ತಿಪೂರ್ವಕವಾಗಿ ಆಚರಣೆ ಮಾಡಲು ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿ ನಿರ್ಧರಿಸಲಾಯಿತು.     

ಅಂದು ಸ್ವಯಂ ಪ್ರೇರಿತವಾಗಿ ಗದಗ ಜಿಲ್ಲೆಯ ಸವಿತಾ ಸಮಾಜದ ಎಲ್ಲ ಕ್ಷೌರದಂಗಡಿಗಳು ಬಂದ್ ಮಾಡಲು ನಿರ್ದಾರ ಮಾಡಿದ ಗದಗ ಬೆಟಗೇರಿ ಅವಳಿ ನಗರದ ಐದು ದೈವದ  ಅಧ್ಶಕ್ಷರುಗಳಿಗೆ ಪದಾಧೀಕಾರಿಗಳಿಗೆ ಹಿರಿಯರಿಗೆ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಶಕ್ಷರಾದ ಕೃಷ್ಣಾ ಎಚ್ ಹಡಪದ ಅವರು ಸಭೆಯಲ್ಲೆ ಸ್ವಯಂ ಪ್ರೇರಿತವಾಗಿ ಕ್ಷೌರದಂಗಡಿಗಳು ಬಂದ್ ಮಾಡಿ ಸಮಾರಂಭದ ಯಶಸ್ವಿಗೆ ಹಾಗೂ ಸಮಾಜಕ್ಕೆ ಶಕ್ತಿ ತುಂಬುವಂತಹ ನಿರ್ಧಾರವನ್ನು ಶ್ಲಾಘಿಸಿ ಮಾತನಾಡಿ ಅಂದಿನ ಕಾರ್ಯಕ್ರಮದಲ್ಲಿ ಹಿರಿಯರು ಹಾಗೂ ಕಾನೂನು ಸಚೀವರಾದ ಎಚ್ ಕೆ ಪಾಟೀಲ ಅವರು ಹಿರಿಯರಾದ ಡಿ.ಆರ್ ಪಾಟೀಲ ಅವರು ರಾಜ್ಯ ಸವಿತಾ ಸಮಾಜದ ರಾಜ್ಯ ಕಾರ್ಯಾಧ್ಯಕ್ಷರಾದ ಎಸ್ ಕೀರಣಕುಮಾರ ಅವರು ಹಾಗೂ ಬೆಂಗಳೂರಿನ ಸ್ಪೀನ್ ಸೇವಾ ಪ್ರತಿಷ್ಠಾಣದ ಮಾಲೀಕರಾದ ನಾಮದೇವ ನಾಗರಾಜ ಅವರು ಸೇರಿದಂತೆ ಹತ್ತಾರು ರಾಜ್ಯ ನಾಯಕರುಗಳು ಹಾಗೂ ಸ್ಥಳಿಯ ಹೆಸರಾಂತ ಅನೇಕ ರಾಜಕಾರಣಿಗಳು ವಿವಿಧ ಸಮುದಾಯದ ಅಧ್ಯಕ್ಷರುಗಳು ಮುಖಂಡರು ನಾಯಕರುಗಳು ಪ್ರಶಸ್ತಿ ಪುಸ್ಕೃತರು ಮತ್ತು ರಾಜ್ಯದ ಹತ್ತು ಜಿಲ್ಲೆಯ ಸವಿತಾ ಸಮಾಜದ ಜಿಲ್ಲಾಧ್ಯಕ್ಷರುಗಳು ಪ್ರಮುಖ ಮುಖಂಡರು ಭಾಗವಹಿಸುತ್ತಿದ್ದಾರೆ.     

ಸಭೆಯಲ್ಲಿ ಹಿರಿಯರಾದ ಹನಮಂತಪ್ಪ ರಾಂಪೂರ ಯಲ್ಲಪ್ಪ ನಾವ್ಹಿ (ಸಿಗ್ಲಿ) ಬಾಲರಾಜ ಕೊಟೇಕಲ್ಲ ರಮೇಶ ರಾಂಪೂರ ಜಂಮ್ಮಣ್ಣ ಕಡಮೂರ ಕುರಮುರ್ತಿ ಬಾರಬಾರ ರಾಜು ಮಾನೆ ಪಾಂಡು ಕಾಳೆ ದೀಪಕ ಮಾನೆ ಪರಶುರಾಮ ಬಳ್ಳಾರಿ ಜಿಲ್ಲಾ ಪ್ರ.ಕಾರ್ಯದರ್ಶಿ ಮಂಜುನಾಥ ಮಾನೆ. ಖಜಾಂಚಿ ಅರೂಣ ರಾಂಪೂರ ಬಸುವರಾಜ ಗೌಡರ ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಅಧ್ಶಕ್ಷರಾದ ಪರಶುರಾಮ ಕೊಟೇಕಲ್ಲ ಮತ್ತು ಶಿರಹಟ್ಟಿ ತಾಲ್ಲೂಕ ಅಧ್ಶಕ್ಷರಾದ ನಾಗರಾಜ ಬಾರಬರ್ ಮುಂಡರಗಿ ತಾಲ್ಲೂಕ  ಅಧ್ಶಕ್ಷರಾದ ಗೊವೀಂದರಾಜ ಕರ್ನೂಲ ನರಗುಂದ ತಾಲ್ಲೂಕ ಅಧ್ಯಕ್ಷರಾದ ಶ್ರೀನಿವಾಸ ಕರ್ನೂಲ ಉಪಾಧ್ಯಕ್ಷ ಸಂದೀಪ ಬಾಲಗುಡ್ಡ ಸವಿತಾ ಮಹರ್ಷಿ ಜಯಂತಿ ಉತ್ಸವ ಸಮಿತಿ ಅಧ್ಶಕ್ಷರಾದ ನವೀನ ಕೊಟೇಕಲ್ಲ ಉಪಾಧ್ಶಕ್ಷರಾದ ವಿಜಯ ಬುದೂರ ಹಾಗೂ ಪ್ರಮುಖ ಸದಶ್ಯರುಗಳು ಹಾಗೂ ಗದಗ ಜಿಲ್ಲೆಗೆ ಸಂಬಂಧಿಸಿದ ಸವಿತಾ ಹಾಗೂ ಮರಾಠ ಸಮಾಜಗಳ ಅಧ್ಶಕ್ಷರುಗಳು ಪದಾಧೀಕಾರಿಗಳು ಗುರು ಹಿರಿಯರು ಯುವ ನಾಯಕರು ಉಪಸ್ಥಿತರಿದ್ದರು.