ಸವಿತಾ ಮಹರ್ಷಿ ಜಯಂತಿ


ಲೋಕದರ್ಶನ ವರದಿ 

ಗದಗ 07: ಗದಗ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಗದಗ ಜಿಲ್ಲಾ ಮತ್ತು ತಾಲ್ಲೂಕು ಸವಿತಾ ಸಮಾಜ ವತಿಯಿಂದ ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದಿನಾಂಕ-08ರಂದು ಬೆಳಿಗ್ಗೆ 10ಗಂಟೆಗೆ ಮಾನ್ಯ ಗದಗ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸವಿತಾ ಮಹರ್ಷಿ ಜಯಂತಿಯನ್ನು ಕೋವಿಡ್ 3ನೇ ಅಲೆಯ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಅಂದರೆ ಸವಿತಾ ಮಹರ್ಷಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಗುವುದು 

     ಈ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಮತ್ತು ತಾಲ್ಲೂಕು ಸವಿತಾ ಸಮಾಜದ ಸಮಸ್ತ ಬಾಂದವರುಗಳು ಗುರು ಹಿರಿಯರು ಭಾಗವಹಿಸಿ ಯಶಸ್ವಿಗೊಳಿಸಬೇಕು ತದನಂತರ ಮಧ್ಶಾನ 12:15ಕ್ಕೆ ಗದಗನಲ್ಲಿರುವ ರಾಜ್ಶದ ಪ್ರಥಮ ಸವಿತಾ ಮಹರ್ಷಿ ವೃತ್ತಕ್ಕೆ ತೆರಳಿ ವೃತ್ತಕ್ಕೆ ಮಾಲಾರ್ಫಣೆ ಮಾಡುವ ಮೂಲಕ ಶ್ರೀ ಸವಿತಾ ಮಹರ್ಷಿಗಳ ಕೃಪೆಗೆ ಪಾತ್ರರಾಗಲು ಗದಗ ಬೆಟಗೇರಿಯ 5 ದೈವದ ಬಾಂಧವರು ಅಧ್ಶಕ್ಷರುಗಳು, ಪದಾಧಿಕಾರಿಗಳು ಹಾಗೂ ಗದಗ ಜಿಲ್ಲೆಯ ಎಲ್ಲ ತಾಲ್ಲೂಕಿನ ಅಧ್ಶಕ್ಷರುಗಳು ಪದಾಧಿಕಾರಿಗಳು ಸಮಸ್ತ ಸವಿತಾ ಸಮಾಜದ ಬಾಂದವರುಗಳು ತಮ್ಮ ಸ್ವಯಂ ಪ್ರೇರಣೆಯಿಂದ ವೈಯಕ್ತಿಕ ಕೆಲಸಗಳು ಬದಿಗಿಟ್ಟು ಬೆಳಿಗ್ಗೆ 11-00 ಘಂಟೆಗೆ ಗದಗ ಜಿಲ್ಲಾಡಳಿತದಿಂದ ಜರುಗುವ ಶ್ರೀ ಸವಿತಾ ಮಹರ್ಷಿ ಜಯಂತಿ ಆಚರಣೆ ಪೂಜಾ ಕಾರ್ಯಾಮದ ಸರಿಯಾದ ಸಮಯದಲ್ಲಿ ಭಾಗವಹಿಸಿ ಸವಿತಾ ಮಹರ್ಷಿ ಜಯಂತಿ ಪೂಜಾ ಕಾರ್ಯವು ಯಶಸ್ವಿಗೊಳಿಸಬೆಕೇಂದು ಗದಗ ಜಿಲ್ಲೆಯ ಸಮಸ್ತ ಸವಿತಾ ಸಮಾಜದ ಬಾಂದವರಲ್ಲಿ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಶಕ್ಷರಾದ ಕೃಷ್ಣಾ ಎಚ್ ಹಡಪದ ಹಾಗೂ ಜಿಲ್ಲಾ ಪದಾಧಿಕಾರಿಗಳು ಪ್ರಕಟಣೆ ಮುಲಕ ವಿನಂತಿಸಿದ್ದಾರೆ.