ಗದಗ ಜಿಲ್ಲೆಯ ಗೃಹರಕ್ಷಕ ದಳದಿಂದ ಮಹಾರಾಷ್ಟ್ರದಲ್ಲಿ ಕನಕದಾಸರ ಜಯಂತಿ ಆಚರಣೆ
ಗದಗ ಜಿಲ್ಲೆಯ ಗೃಹರಕ್ಷಕ ದಳದಿಂದ ಮಹಾರಾಷ್ಟ್ರದಲ್ಲಿ ಕನಕದಾಸರ ಜಯಂತಿ ಆಚರಣೆ
ಗದಗ 19 : ಜಾತಿ ವ್ಯವಸ್ಥೆಯನ್ನು ದೂರೀಕರಿಸಿ ಸಮಾನತೆಯನ್ನು ಸಾರಿದ ದಾಸಶ್ರೇಷ್ಠ ಭಕ್ತ ಕನಕದಾಸರು ಕನ್ನಡ ಸಾಹಿತ್ಯಕ್ಕೆ ಮಹಾನ ಕೀರ್ತನೆಗಳ ಕೊಡುಗೆ ನೀಡಿದ್ದಾರೆ ಎಂದು ಗ್ರಹರಕ್ಷಕ ದಳದ ಗದಗ ಜಿಲ್ಲಾ ಬೋಧಕರಾದ ಕಿರಣಕುಮಾರ ಅವರು ಹೇಳಿದರು.
ಮಹಾರಾಷ್ಟ್ರದ ದಾರೋಶಿ ಜಿಲ್ಲೆಯಲ್ಲಿ ಗದಗ ಜಿಲ್ಲೆಯ ನರೇಗಲ್ ಗೃಹರಕ್ಷಕ ಘಟಕದಿಂದ ಹಾಗೂ ಗದಗ ಜಿಲ್ಲಾ ಘಟಕದಿಂದ ಹಮ್ಮಿಕೊಂಡ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ದಾಸ ಶ್ರೇಷ್ಠ ಕನಕದಾಸರು ಬರಿ ಕನ್ನಡ ಸಾಹಿತ್ಯಕ್ಕೆ ಅಲ್ಲದೆ, ಮನುಕುಲದ ಒಳಿತಿಗಾಗಿ ಸಾಮರಸ್ಯ, ಭೇದ-ಭಾವ, ಉಚ್ಚ- ನೀಚ, ಮೇಲು-ಕೀಳು ಎಂಬ ತಾರತಮ್ಯವನ್ನು ಹೋಗಲಾಡಿಸಲು 16ನೇ ಶತಮಾನದಲ್ಲಿ ಶ್ರೇಷ್ಠತೆ ಮೆರೆದು ಸಾಹಿತ್ಯದ ಮೂಲಕ ಜನರ ಮನ ತಲುಪಿ ಸಾಹಿತ್ಯಕ ಲೋಕವನ್ನು ಶ್ರೀಮಂತಗೊಳಿಸಿ ಸುಮಾರು 316 ಕೃತಿಗಳನ್ನು ರಚಿಸಿದ್ದಾರೆ. ಇವರ ಕೃತಿಗಳಲ್ಲಿ ಜನತೆಯ ಮೌಡ್ಯ, ಕಂಧಾಚಾರ, ಪೊಳ್ಳು ನಂಬಿಕೆ, ವರ್ಣ ವ್ಯವಸ್ಥೆಯನ್ನು ಖಂಡಿಸಿದ್ದಾರಲ್ಲದೆ ದೈವಭಕ್ತಿ, ಜೀವನದರ್ಶನ, ಸಮಾಜ ವಿಮರ್ಶೆ, ಲೋಕಾನುಭವಗಳ ಭಾವಗಳು ಕಾವ್ಯಾತ್ಮಕವಾಗಿ ಹೊರಹೊಮ್ಮಿದೆ ಎಂದರು. ಈ ಕಾರ್ಯಕ್ರಮದಲ್ಲಿ ಗೃಹರಕ್ಷಕ ಜಗದೀಶ ಬಂಡಿವಡ್ಡರ ಮಾತನಾಡಿ, ಕನ್ನಡದ ಕಂಪು ಮಹಾರಾಷ್ಟ್ರದಲ್ಲಿ ಮೂಡಿಸಿ ಸಾಮರಸವೇ ಜೀವನ, ಸಮಬಾಳು-ಸಮಪಾಲು ಎಂದು ಹೇಳಿದ ಅವರು ಪ್ರತಿಯೊಬ್ಬ ವ್ಯಕ್ತಿಯಲ್ಲಿ ಶ್ರೇಷ್ಠತೆ ಇರುತ್ತದೆ ಆದ್ದರಿಂದ ಭಾವ್ಯಕ್ಯತೆ ಕಾಣಬಹುದು. ಕನಕದಾಸರ ಮೋಹನ ತರಂಗಿಣಿ, ನಳ ಚರಿತ್ರೆ, ರಾಮಧ್ಯಾನ ಚರಿತೆ, ಹರಿಭಕ್ತಸಾರ ಇತ್ಯಾದಿ ಕೃತಿಗಳಿವೆ, ಇವುಗಳಲ್ಲಿ ನಳಚರಿತ್ರೆ ಭಾಮಿನಿ ಷಟ್ಪದಿಯಲ್ಲಿದ್ದು, 9 ಸಂಧಿಗಳು 480 ಪದ್ಯಗಳು ಇವೆ. ನಳ ದಮಯಂತಿಯರ ಚಿರಂತನ ಪ್ರೇಮದ ಚಿತ್ರಣ ಕಾವ್ಯದ ಜೀವನವಾಗಿದೆ ಎಂದು ಹೇಳಿದರು.
ಗದಗ ಜಿಲ್ಲೆಯ ನರೇಗಲ್ ಗೃಹರಕ್ಷಕ ದಳ ಘಟಕದ ಸುಮಾರು 25ಕ್ಕೂ ಹೆಚ್ಚು ಗೃಹರಕ್ಷಕರು ಮತ್ತು ಗದಗ ಜಿಲ್ಲೆಯಿಂದ 400 ಗ್ರಹರಕ್ಷಕರು ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ಬಂದೋಬಸ್ತಗಾಗಿ ಕರ್ನಾಟಕದಿಂದ ತೆರಳಿ ಅಲ್ಲಿ ಕನಕದಾಸರ ಜಯಂತಿಯನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಪರಶುರಾಮ ಸಾಬಳೆ, ಪಿ.ಕೆ. ಹಡಪದ, ವೀರುಪಾಕ್ಷ ಇಟಗಿ, ಎಸ್.ವಿ. ಮುಶಿಗೇರಿ, ಎಂ.ಬಿ. ಕಡೆತೋಟದ, ತೌಫಿಕ್ ಮುಲ್ಲಾ, ಎಸ್.ಬಿ. ಮಡಿವಾಳರ, ಬಿ.ಬಿ. ನೆಲ್ಲೂರ, ಎಸ್.ಐ. ತಳವಾರ, ಚನ್ನಪ್ಪ ಕೊಪ್ಪದ, ಎಂ.ಕೆ.ಅರಮನಿ, ಬಸವರಾಜ ಕರಡಿ, ಮಂಜು ಸಾಬಳೆ, ಹೊಸಮನಿ, ಎನ್. ಎಸ್. ತಳವಾರ, ವಿ.ಎಸ್.ಲಕ್ಷ್ಮೇಶ್ವರ, ಕೆ.ಬಿ.ಹಾಳಕೇರಿ, ಅರುಣ, ವೀರ್ಪ ಇಟಗಿ, ಸೇರಿದಂತೆ ಮುಂತಾದ ಗ್ರಹರಕ್ಷಕರು ಉಪಸ್ಥಿತರಿದ್ದರು.
ಶರಣಪ್ಪ ಕೊಂಡಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಶರಣಪ್ಪ ಬೇಲೇರಿ ನಿರೂಪಿಸಿದರು. ಸಂಗಪ್ಪ ಕುರಿ ವಂದಿಸಿದರು.