ಮುರಗೋಡ ಪಟ್ಟಣವನ್ನು ತಾಲೂಕು ಕೇಂದ್ರ ಎಂದು ಘೋಷಿಸಲು ಆಗ್ರಹಿಸಿ

ಮುರಗೋಡ ಪಟ್ಟಣವನ್ನು ತಾಲೂಕು ಕೇಂದ್ರ ಎಂದು ಘೋಷಿಸಲು ಆಗ್ರಹಿಸಿ 

ಯರಗಟ್ಟಿ: ಸಮೀಪದ ಮುರಗೋಡ ಪಟ್ಟಣವನ್ನು ತಾಲೂಕು ಕೇಂದ್ರ ಎಂದು ಘೋಷಿಸಲು ಆಗ್ರಹಿಸಿ ಕರವೇ ಹಾಗೂ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.ಮುರಗೋಡ ತಾಲೂಕು ಹೋರಾಟ ಸಮಿತಿಯ ಯುವ ಘಟಕದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕನ್ನಡಪರ ದಲಿತಪರ ಮತ್ತು ರೈತಪರ ಸೇರಿದಂತೆ ಅನೇಕ ಸಂಘಟನೆಗಳು ಭಾಗವಹಿಸಿದ್ದವು.ಪಟ್ಟಣದ ಮಹಾಂತೇಶ್ವರ ವೃತ್ತದಲ್ಲಿ ಜಮಾಯಿಸಿದ ಸಾವಿರಕ್ಕೂ ಹೆಚ್ಚು ಜನ ಹೋರಾಟಗಾರರು ಸರ್ಕಾರದ ವಿಳಂಬ ಧೋರಣೆಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು.ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ, ನಾವು 42 ವರ್ಷಗಳಿಂದ ಹೋರಾಟ ಮಾಡುತ್ತಾ ಮುರಗೋಡ ತಾಲೂಕು ಎಂದು ಘೋಷಣೆ ಮಾಡಲು ಒತ್ತಾಯಿಸುತ್ತಿದ್ದೇವೆ. ಈಗ ಕರವೇ ಘಟಕದ ನೇತೃತ್ವದಲ್ಲಿ ಹೋರಾಟ ಆರಂಭಿಸಿದ್ದು ಶೀಘ್ರದಲ್ಲಿ ಮುರಗೋಡ ತಾಲೂಕು ಎಂದು ಘೋಷಿಸದಿದ್ದಲ್ಲಿ ಬೆಳಗಾವಿವರೆಗೆ ಪಾದಯಾತ್ರೆ ನಡೆಸಿ ಜೊತೆಗೆ ಅಧಿವೇಶನದಲ್ಲಿಯೇ ವಿಧಾನಸೌಧ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ ಕರವೇ ಅಧ್ಯಕ್ಷ ಉದಯಕುಮಾರ ಚಿಕ್ಕಣ್ಣವರ ಆಗ್ರಹಿಸಿದರು.ಪ್ರತಿಭಟನೆಯಿಂದ ಕೆಳಹೊತ್ತು ರಸ್ತೆ ತಡೆದ ಪರಿಣಾಮ ಟ್ರಾಫಿಕ್ ಜಾಮ್ ಆಯ್ತು ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಯಿತು.ಈ ವೇಳೆ ಮುರಗೋಡ ಶ್ರೀಮಠದ ಪೂಜ್ಯ ನೀಲಕಂಠ ಮಹಾಸ್ವಾಮಿಗಳು ಸವದತ್ತಿ ತಹಶಿಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ,ತಾಲೂಕ ಆರೋಗ್ಯ ಅಧಿಕಾರಿ ಶ್ರೀಪಾದ್ ಸಬನೆಸ್,ಬೈಲಹೊಂಗಲ ಲೋಕೋಪಯೋಗಿ ಇಲಾಖೆಯ ಎಇಇ ಬಸವರಾಜ ಹಾಲಗಿ, ಸವದತ್ತಿ ಸಿಪಿಐ ಧರ್ಮಾಕರ ಧರ್ಮಟ್ಟಿ, ಮುರಗೋಡ ತಹಶಿಲ್ದಾರ ಡಿ. ಬಿ. ಅಲ್ಲಯ್ಯನವರಮಠ, ಪಿ.ಡಿ.ಓ ಆರ್‌. ಎಲ್‌. ಬಾಗಿಲದ ಇನ್ನೂ ಹಲವಾರು ತಾಲೂಕು ಮಟ್ಟದ ಅಧಿಕಾರಿಗಳು ಈ ಹೋರಾಟದ ಸ್ಥಳಕ್ಕೆ ಬೇಟಿ ನೀಡಿ ಮನವಿಯನ್ನು ಸ್ವೀಕರಿಸಿದರು.ಈ ಸಂದರ್ಭದಲ್ಲಿ ಭೀಮಶಿ ಕಿವಡಿ, ಕಿರಣ ಸಂಪಗಾಂವ, ಶೇಖರ ಸಣ್ಣಕಲ್ಲ, ಗೀರೀಶ ಆಳಾಜ, ಯುಸುಫ್ ಬಾಗೇವಾಡಿ, ದೀಪಕ ಬಾಳಿಕಾಯಿ, ಆದಿತ್ಯಾ ಬಾಳಿಕಾಯಿ, ಮುತ್ತು ಚಿಣ್ಣನ್ನವರ, ಮಲ್ಲು ಮಲ್ಲಕಾಜನವರ, ನಾಗರಾಜ ಹುಡೇದ, ಪ್ರಕಾಶ ಮನವಳ್ಳಿ, ಮಹಾಂತೇಶ ದೊಡ್ಡವಾಡ, ಮಹಾಂತೇಶ ಬಡಿಗೇರ, ಸಾಧಿಕ್ ಸೂಣದೋಳಿ, ಸಾದ್ ಕಿತ್ತೂರು ಸೇರಿದಂತೆ ಹಲವಾರು ಕರವೇ ಕಾರ್ಯಕರ್ತರು ಇದ್ದರು.