ಸ್ಮಶಾನದಲ್ಲಿ ನೂತನ ಕಾರಿಗೆ ಚಾಲನೆ ನೀಡಿದ ಸತೀಶ ಜಾರಕಿಹೊಳಿ

ಬೆಳಗಾವಿ : ಇಲ್ಲಿನ ಸದಾಶಿವನಗರದ ಸ್ಮಶಾನ ಭೂಮಿಯಲ್ಲಿ ಕೆಪಿಸಿಸಿ ಕಾಯರ್ಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರ ನೂತನ ವಾಹನದ ಚಾಲನೆ ಸಮಾರಂಭ ನಡೆಯಿತು. ಮೌಢ್ಯಗಳನ್ನು ಕಿತ್ತೊಗೆದು ವೈಚಾರಿಕೆ ಪ್ರಜ್ಞೆ ಬೆಳೆಸುವ ಉದ್ದೇಶದಿಂದ ಸ್ಮಶಾನ ಭೂಮಿಯಿಂದ ನೂತನ ವಾಹನಕ್ಕೆ ಚಾಲನೆ ನೀಡಲಾಯಿತು. ಮಾನವ ಬಂಧುತ್ವ ವೇದಿಕೆ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ದಲಿತ ಮುಖಂಡರು, ಪ್ರಗತಿಪರ ಚಿಂತಕರು ಪಾಲ್ಗೊಂಡಿದ್ದರು.

ಹೊಸ ವಾಹನ ಕೊಂಡಾಗ ದೇವಸ್ಥಾನಗಳಿಗೆ ಹೋಗಿ ಪೂಜೆ ಸಲ್ಲಿಸುವುದು ರೂಢಿಯಲ್ಲಿದೆ. ಆದರೆ ಕೆಪಿಸಿಸಿ ಕಾಯರ್ಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರ ನೂತನ ವಾಹನದ ಚಾಲನೆ ಸಮಾರಂಭ ಸದಾಶಿವನಗರದ ಸ್ಮಶಾನ ಭೂಮಿಯಲ್ಲಿ ಸೋಮವಾರ ನಡೆಯಿತು. ವಿವಿಧ ಮಠಾಧೀಶರು, ದಲಿತ ಮುಖಂಡರು, ಪ್ರಗತಿಪರ ಚಿಂತಕರು ಪಾಲ್ಗೊಂಡು ಬುದ್ಧ, ಬಸವ, ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಮೌಢ್ಯ ಮುಕ್ತ ಕನರ್ಾಟಕದ ಸಂದೇಶ ನೀಡಿದರು. ಶಾಸಕ ಸತೀಶ ಜಾರಕಿಹೊಳಿ ಉಪಸ್ಥಿತಿಯಲ್ಲಿ ಹೂವಿನಿಂದ ಅಲಂಕರಿಸಿದ ಕಾರಿನ ಮೇಲೆ ಮಠಾಧೀಶರು ಹೂ ಸುರಿದು ವಾಹನಕ್ಕೆ ಚಾಲನೆ ನೀಡಿದರು. ಇದೇ ವೇಳೆಯಲ್ಲಿ ಬಸವಣ್ಣನವರ ವಚನ ಹಾಡಿ ಶುಭ ಹಾರೈಸಿದರು.

ಸಂದರ್ಭದಲ್ಲಿ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಆಶ್ಪುಶ್ರತೆ ಈಗ ಹಳೆಯದಾಯಿತು. ಜಗತ್ತಿಗೆ ಕೊರೋನಾ ಸೋಂಕು ಬಂದ ನಂತರ ಹೊಸ ಆಶ್ಪ್ರುಶ್ರತೆ ಆರಂಭವಾಗಿದೆ. 'ಪ್ರಕೃತಿಯೇ ಘನ, ಗಗನ ಲಿಂಗವು, ಜಗವೇ ಕೂಡಲಸಂಗಮ' ಎಂದು ಬಸವಣ್ಣನವರು ಹೇಳುತ್ತಾರೆ. ಅಜ್ಞಾನದ ಕಡೆ ಇರುವ ಮುಖವನ್ನು ಹೊರಳಿಸಬೇಕು. ವಿಜ್ಞಾನದ ಕಡೆ ನಡೆಯಬೇಕು. ಬುದ್ಧ ಬೀಜವಾದರೆ, ಬಸವಣ್ಣನವರು ಮರ, ಅಂಬೇಡ್ಕರ್ ಮರದ ಫಲ. ಸತೀಶ ಜಾರಕಿಹೊಳಿ ಫಲವನ್ನು ಹಂಚುವ ಧೀರ ಎಂದು ಹೊಗಳಿದರು.

ಅಥಣಿ ಮೋಟಗಿಮಠದ ಚನ್ನಬಸವ ಸ್ವಾಮೀಜಿ ಮಾತನಾಡಿ, ಸ್ಮಶಾನದಿಂದ ಹೊಸ ವಾಹನಕ್ಕೆ ಚಾಲನೆ ನೀಡಿ ಇದೇನು ಹೊಸ ಸಂಪ್ರದಾಯ ಹುಟ್ಟು ಹಾಕುತ್ತಿದ್ದಾರೆ ಎನ್ನಬೇಡಿ, ಇಂತಹ ಕ್ರಮದ ಹಿಂದಿರುವ ಧ್ಯೇಯವನ್ನು ಆಲೋಚಿಸಿ. ಆತ್ಮಸ್ಥೈರ್ಯದಿಂದ ಬದುಕುವುದನ್ನು ಕಲಿಯೋಣ ಎಂದರು. ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ ಮಾತನಾಡಿ, ಪೂಜೆ ಹೆಸರಿನಲ್ಲಿ ಗಂಟೆ ಜಾಗಟೆ ಬಾರಿಸುವುದರಿಂದ ಏನೂ ಪ್ರಯೋಜನವಿಲ್ಲ. ದೇವಸ್ಥಾನ, ಮಸೀದಿ, ಚಚರ್್ ಹೆಸರಿನಲ್ಲಿ ಯುವಕರ ಕೈಗೆ ಧರ್ಮದ ಧ್ವಜ ನೀಡಿ ಜಗಳ ಹಚ್ಚಬೇಡಿ. ಯುವಕರ ಕೈಗೆ ಕಾಯಕದ ಧ್ವಜ ನೀಡಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೆಪಿಸಿಸಿ ಕಾಯರ್ಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ, ದೇವಸ್ಥಾನಗಳಲ್ಲಿ ಪೂಜೆ ಮಾಡಿಸುವುದು ರೂಢಿ ಇರಬಹುದು. ಆದರೆ ಸ್ಮಶಾನ ಬೇರೆಯಲ್ಲ, ದೇವಸ್ಥಾನ ಬೇರೆಯಲ್ಲ ಎನ್ನುವುದು ನಮ್ಮ ನಿಲುವು. ಶೋಷಣೆ ಮುಕ್ತ ಸಮಾಜ ನಿಮರ್ಾಣ ಆಗಬೇಕು ಎಂಬುದು ನಮ್ಮ ಧ್ಯೇಯ. ಬಗ್ಗೆ ಜಾಗೃತಿ ಮೂಡಿಸಲು ಹೊಸ ಕಾರಿಗೆ ಸ್ಮಶಾನದಲ್ಲಿ ಚಾಲನೆ ನೀಡಿದ್ದೇವೆ ಎಂದರು.

ಸಂದರ್ಭದಲ್ಲಿ ಗುಬ್ಬಲಗುಡ್ಡದ ಮಲ್ಲಿಕಾಜರ್ುನ ಸ್ವಾಮೀಜಿ, ಕವಲಗುಡ್ಡದ ಅಮರೇಶ್ವರ ಮಹಾರಾಜರು, ಚಿಕ್ಕಲದಿನ್ನಿಯ ಅದೃಶ್ಯ ಶಿವಾಚಾರ್ಯ ಸ್ವಾಮೀಜಿ, ಬೆಳಗಾವಿ ಬಸವಮಂಟಪದ ಪ್ರಭುಲಿಂಗ ಸ್ವಾಮೀಜಿ, ಶಿವಾಪುರದ ಕಾಡಸಿದ್ದೇಶ್ವರ ಸ್ವಾಮೀಜಿ ಮತ್ತಿತರರು ಇದ್ದರು. ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.