ಬ್ಯಾಡಗಿ18: ಅಂತಾರಾಷ್ಟ್ರೀಯ ಮಾರುಕಟ್ಟೆ ಎಂಬ ಕಾರಣದಿಂದ ಬ್ಯಾಡಗಿಯಲ್ಲಿರುವ ಶೀತಲಗೃಹಗಳಲ್ಲಿ ಒಣ ಮೆಣಸಿನಕಾಯಿ ಚೀಲಗಳನ್ನು ಸಂಗ್ರಹಿಸಿಡಲು ರೈತರಿಗೆ ಅವಕಾಶ ನೀಡಲಾಗಿದೆ. ಆದರೆ ಸಕರ್ಾರದ ಮಾರ್ಗಸೂಚಿಯನ್ನು ಧಿಕ್ಕರಿಸಿದ್ರೆ ತಾಲೂಕಾ ಆಡಳಿತದಿಂದ ನೀಡಿರುವ ವಿನಾಯ್ತಿಯನ್ನು ಹಿಂಪಡೆಯಲಾಗುವುದು ಎಂದು ತಹಶೀಲ್ದಾರ ಶರಣಮ್ಮ ಕಾರಿ ಎಚ್ಚರಿಸಿದ್ದಾರೆ.
ಶುಕ್ರವಾರ ಪಟ್ಟಣದ ಎಪಿಎಂಸಿ ಕಾಯರ್ಾಲಯದ ಸಭಾಭವನದಲ್ಲಿ ತಾಲೂಕಾ ಆಡಳಿತ, ಆರೋಗ್ಯ ಇಲಾಖೆ, ವರ್ತಕರ ಸಂಘ ಹಾಗೂ ಎಪಿಎಂಸಿ ಆಡಳಿತ ಮಂಡಳಿಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು ಶೀತಲಗೃಹಗಳ ಮಾಲೀಕರು, ದಲಾಲರು ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಬೇಜವಾಬ್ದಾರಿಯಿಂದ ವತರ್ಿಸುತ್ತಿರುವುದು ಸರಿಯಲ್ಲ, ಇವರ ಧೋರಣೆ ಹೀಗೆ ಮುಂದುವರೆದರೆ ರೈತರ ಹಿತದೃಷ್ಟಿಯಿಂದ ಈಗಾಗಲೇ ನೀಡಿರುವ ವಿನಾಯ್ತಿಯನ್ನು ರದ್ದುಪಡಿಸಿ ಕಟ್ಟುನಿಟ್ಟಿನ ಕ್ರಮ ವಹಿಸುವುದಾಗಿ ತಿಳಿಸಿದರು.
ವರ್ತಕರ ಸಂಘದ ಅಧ್ಯಕ್ಷರಾದ ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ರೈತರ ಹಿತದೃಷ್ಟಿಯಿಂದ ಶೀತಲಗೃಹಗಳಲ್ಲಿ ಮೆಣಸಿನಕಾಯಿ ಚೀಲಗಳನ್ನು ಸಂಗ್ರಹಿಸಿಡಲು ತಾಲೂಕಾ ಆಡಳಿತ ಪರವಾನಿಗೆ ನೀಡಿದೆ.
ಆದರೆ ಮಾರುಕಟ್ಟೆಗೆ ಕೊರೋನಾ ವೈರಸ್ ಸೋಂಕಿತ ಪ್ರದೇಶದಿಂದ ರೈತರು ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆಯನ್ನು ವಹಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಶೀತಲಗೃಹಗಳಲ್ಲಿ ಮೆಣಸಿನಕಾಯಿ ಚೀಲಗಳನ್ನು ಸಂಗ್ರಹಿಸಿಡಲು ತರುತ್ತಿರುವುದನ್ನು ಸ್ಥಗಿತಗೊಳಿಸಬೇಕು ಎಂದು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ತಹಶೀಲ್ದಾರ ಹಾಗೂ ಎಪಿಎಂಸಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ಸಭೆಯಲ್ಲಿ ಎಪಿಎಂಸಿ ಅಧ್ಯಕ್ಷ ಕೆ. ಎಸ್. ನಾಯ್ಕರ್, ಎಸ್. ಆರ್. ಪಾಟೀಲ, ಡಾ. ಪುಟ್ಟರಾಜ, ನಿದರ್ೆಶಕರುಗಳಾದ ವೀರಭದ್ರಪ್ಪ ಗೊಡಚಿ, ಡಿ. ಬಿ. ತೋಟದ, ವಿಜಯ ಮಾಳಗಿ, ವನಿತಾ ಗುತ್ತಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.