ಸಂಯುಕ್ತ ಹೋರಾಟ ಕರ್ನಾಟಕದ ಧಾರವಾಡ ಜಿಲ್ಲಾ ನೂತನ ಸಂಘಟನಾ ಸಮಿತಿ ಆಯ್ಕೆ

Sanyukta Struggle Election of new Organizing Committee of Dharwad district of Karnataka


  ಸಂಯುಕ್ತ ಹೋರಾಟ ಕರ್ನಾಟಕದ ಧಾರವಾಡ ಜಿಲ್ಲಾ  ನೂತನ  ಸಂಘಟನಾ ಸಮಿತಿ ಆಯ್ಕೆ

ಸಂಯುಕ್ತ ಹೋರಾಟ ಕರ್ನಾಟಕ  ಧಾರವಾಡ ಜಿಲ್ಲಾ ಸಂಘಟನಾ ಸಮಿತಿ ವತಿಯಿಂದ ಇಂದು ನಗರದ ಸಾಹಿತ್ಯ ಭವನದಲ್ಲಿ  ರೈತರ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ಖಾತ್ರಿಪಡಿಸಲು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಧಾರವಾಡ ಜಿಲ್ಲಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು.ಸಮಾವೇಶದ ಅಧ್ಯಕ್ಷತೆಯನ್ನು ಬಿ ಐ ಈಳಗೇರ, ಶಂಕರ ಅಂಬಲಿ, ದೀಪಾ ಧಾರವಾಡ ವಹಿಸಿದ್ದರು. 

 ಈ ಸಂದರ್ಭದಲ್ಲಿ ನೂತನ ಧಾರವಾಡ ಜಿಲ್ಲಾ ಸಂಘಟನಾ ಸಮಿತಿ ಆಯ್ಕೆ ಮಾಡಲಾಯಿತು. 

 ಗೌರವ ಸಲಹೆಗಾರರು , ಎಸ್ ಆರ್ ಹಿರೇಮಠ , ಬಿ ಎಸ್ ಸೊಪ್ಪಿನ್, ನಾಗಪ್ಪ ಹುಂಡಿ. ಪ್ರಧಾನ ಸಂಚಾಲಕರು, ಶರಣು ಗೋನವಾರ, ಅಶೋಕ ಬಾರ್ಕಿ, ಸಂಚಾಲಕರು  

 ರವಿರಾಜ್ ಕಾಂಬಳೆ , ಶಂಕರ ಅಂಬ್ಲಿ, ದೀಪಾ ಧಾರವಾಡ,ಲಕ್ಷ್ಮಣ ಬಕಾಯಿ,  ಲಕ್ಷ್ಮಣ ದೊಡ್ಮನೆ,  ಎ ಎಸ್ ಪೀರಜಾದೆ, ಮಹೇಶ್ ಪತ್ತಾರ, ಗಂಗಾಧರ್ ಬಡಿಗೇರ. 

 ರೈತ ಕಾರ್ಮಿಕರು ಎದುರಿಸುತ್ತಿರುವ ಸಮಸ್ತ ವಿರುದ್ಧ ಪ್ರಬಲ ಚಳುವಳಿಯನ್ನು  ಸಂಘಟಿಸಲು ಗೊತ್ತುಳಿಯನ್ನು ಮಂಡಿಸಲಾಯಿತು.  

    ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ  ರಾಜ ಉಪಾಧ್ಯಕ್ಷರಾದ ನಾಗಪ್ಪ ಉಂಡಿ , ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷರಾದ ದೀಪಾ ಧಾರವಾಡ,  ರೈತ ಸೇನಾ  ಕರ್ನಾಟಕದ ರಾಜ್ಯ ಅಧ್ಯಕ್ಷರಾದ ಶಂಕರ್ ಅಂಬಲಿ,ಸಿ ಐ ಟಿ ಯು ನ ಜಿಲ್ಲಾ ಅಧ್ಯಕ್ಷರಾದ  ಬಿ ಐ ಇಳಿಗೆರೆ, ರಾಜ್ಯ ಕಾರ್ಯದರ್ಶಿಗಳಾದ ಮಹೇಶ್ ಪತ್ತಾರ್, ಎ ಐ ಯು ಟಿ ಯು ಸಿ  ಜಿಲ್ಲಾ ಅಧ್ಯಕ್ಷರಾದ ಗಂಗಾಧರ ಬಡಿಗೇರ ಮುಂತಾದವರು ಈ ಸಂದರ್ಭದಲ್ಲಿ ಇದ್ದರು.