ತಾಳಿಕೋಟೆ 15: ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸಂಕ್ರಾಂತಿಯ ವಿಶೇಷ ಹಬ್ಬವನ್ನು ಆಚರಿಸಲಾಯಿತು.
ಸಮಸ್ತ ಗುರು ಬಳಗದವರು ಸೇರಿಕೊಂಡು ಪರಸ್ಪರ ಎಳ್ಳು ಬೆಲ್ಲವನ್ನು ಸವಿದು ಹಬ್ಬವನ್ನು ಆಚರಿಸಲಾಯಿತು. ಇದು ಹೊಸ ಆರಂಭವನ್ನು ಸಮೃದ್ಧಿ ಮತ್ತು ಕೃತಜ್ಞತೆಯ ಸಂಕೇತವೆಂದು ಕರೆಯಲ್ಪಡುವ ಹಬ್ಬವಾಗಿದೆ. ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾದ ಮಕರ ಸಂಕ್ರಾಂತಿಯನ್ನು ದೇಶಾದ್ಯಂತ ಬಹಳ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಗುತ್ತದೆ. ಈ ದಿನದಂದು ಸಿಹಿ ತಿಂಡಿಗಳನ್ನು ವಿತರಿಸಲಾಗುತ್ತದೆ ಮತ್ತು ಸೂರ್ಯ ದೇವರನ್ನು ಪೂಜಿಸಲಾಗುತ್ತದೆ. ಈ ದಿನವೂ ಪ್ರೀತಿಯ ಪಾತ್ರರಿಗೆ ಆತ್ಮೀಯ ಶುಭಾಶಯಗಳನ್ನು ಕಳುಹಿಸಲು ಮತ್ತು ಸಕಾರ ಕೃತಿಯನ್ನು ಮತ್ತು ಸಂತೋಷವನ್ನು ಹರಡಲು ಉತ್ತಮ ಸಮಯವಾಗಿದೆ. ಎಳ್ಳು ಬೆಲ್ಲ ತಿಂದು ಸಿಹಿಯಾದ ಮಾತಾಡೋಣ ಎಲ್ಲಾ ಕಹಿ ಮರೆತು ಮಧುರವಾದ ಬಾಂಧವ್ಯ ವೃದ್ಧಿಸೋಣ ಎಂದು ಪರಸ್ಪರ ಎಲ್ಲಾ ವಿದ್ಯಾರ್ಥಿಗಳು ಮತ್ತು ಗುರು ಬಳಗದವರು ಎಳ್ಳು ಬೆಲ್ಲವನ್ನು ತಿಂದು ಹಬ್ಬವನ್ನು ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಮಂಗಳೂರ ಮುಖ್ಯೋಪಾಧ್ಯರಾದ ಸಂತೋಷ ಪವಾರ ಶಿಕ್ಷಕರಾದ ರಾಜು ಜವಳಗೇರಿ, ದೈಹಿಕ ಶಿಕ್ಷಕರಾದ ಬಸವರಾಜ ಚಳ್ಳಗಿ,ಶಾಂತಗೌಡ ಬಿರಾದಾರ,ಭೀಮನಗೌಡ ಸಾಸನೂರ,ರಸೂಲಸಾ ತುರ್ಕನಗೇರಿ, ರವಿಕುಮಾರ ಮಲ್ಲಾಬಾದಿ,ಬಸವರಾಜ ಸವದತ್ತಿ ,ಮೌಲಾಲಿ ವಾಲಿಕಾರ, ಸಿದ್ದನಗೌಡ ಮೂದನೂರು, ಶರಣಗೌಡ ಕಾಚಾಪುರ. ಸಿದ್ದನಗೌಡ ಚೌದರಿ, ಸಂಜುಕುಮಾರ ಭಜಂತ್ರಿ,ರಮೇಶ ಪಾಸೋಡಿ, ರೂಪಾ ಪಾಟೀಲ, ಶಿವಲೀಲಾ ಚುಂಚನೂರ,ದೇವಿಂದ್ರ ಗುಳೆದ,ಅನಿತಾ ಚೌದ್ರಿ, ಅಂಬುಜಾ ಹಜೇರಿ,ರಾಜಬಿ ಬಿದರಿ,ಕಲ್ಪನಾ ಹಜೇರಿ, ನಾಗರತ್ನ ಮೈಲೇಶ್ವರ, ಹೇಮಾ ಕೊಡೆಕಲ್, ನಾಗಶ್ರೀ ನಾಯಕ, ಮೇಘಾ ಪಾಟೀಲ, ಮುಬಿನ ಮುರಾಳ, ತನುಶ್ರೀ ಮಹೇಂದ್ರಕರ, ಶಂಕ್ರಮ್ಮ, ಮುಬಾರಕ ಬನಹಟ್ಟಿ ಹಾಗೂ ಸರ್ವ ಗುರು ಬಳಗದವರು ಮತ್ತು ಮುದ್ದು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.