ಲೋಕದರ್ಶನ ವರದಿ
ಗದಗ: ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಆಯುಷ್ ಇಲಾಖೆಯು ಏರ್ಪಡಿಸಿದ್ದ ದೀಘರ್ಾಯುಷ್ಯಕ್ಕಾಗಿ ಆಯುರ್ವೆದ ಸೆಮಿನಾರನ್ನು ಉದ್ಘಾಟಿಸಿ ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರವರು ಮಾತನಾಡಿ ಆಯುರ್ವೇದ ಸಂಶೋಧನಾ ಕೇಂದ್ರಗಳು ಸ್ಥಾಪಿತವಾಗಬೇಕು. ಗದಗ ಜಿಲ್ಲೆಯಲ್ಲಿ ಆಯುವರ್ೇದ ಸಂಶೋಧನಾ ಕೇಂದವನ್ನ್ರು ಕಪ್ಪತ್ತಗುಡ್ಡದಲ್ಲಿ ಸ್ಥಾಪಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಈಗಾಗಲೇ ಆಯುವರ್ೇದ ವ್ಯದ್ಯರು ಸಮಸ್ಯೆಗಳನ್ನು ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆಗಳನ್ನು ಹಾಕಿ ಸಕರ್ಾರದ ಗಮನ ಸೆಳೆದು ಪರಿಹಿಸಿದ್ದು ಇನ್ನೂಮುಂದೆಯೂ ಆಯುರ್ವೇದ ವೈದ್ಯರ ಏಳಿಗೆಗೆ ಶ್ರಮಿಸುವುದಾಗಿ ಭರವಸೆ ನೀಡಿದರು.ಆಯುವರ್ೇದ ವೈದ್ಯರು ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಸೇವೆ ಸಲ್ಲಿಸಿ ಆಯುರ್ವೇದವನ್ನು ಉನ್ನತಮಟ್ಟಕ್ಕೆ ತರಲು ಪ್ರಯತ್ನಿಸಬೇಕು. ಇದರಿಂದ ಭಾರತೀಯ ವೈದ್ಯ ಪದ್ದತಿಯಾದ ಆಯುರ್ವೇದವು ಸಾರ್ವಜನಿಕರನ್ನು ತಲುಪಲು ಸಾಧ್ಯ ಎಂದು ಕರೆ ನೀಡಿದರು. ಕಾರ್ಯಾಗಾರದಲ್ಲಿ ಗದಗ ಜಿಲ್ಲಾ ಆಯುಷ್ ಇಲಾಖೆ ಹಾಗೂ ಖಾಸಗಿ ವ್ಯದ್ಯರು ಮತ್ತು ಹಿರಿಯ ನಾಗರಿಕರು ಪಾಲ್ಗೊಂಡಿದ್ದರು.