ಹೊಬರ್ಟ್ ಇಂಟರ್‌ನ್ಯಾಷನಲ್ ಟೆನಿಸ್ ಟೂರ್ನಿಗೆ ಸಾನಿಯಾ ಮಿರ್ಜಾ

SANIA MIRZA

ಮುಂಬೈ, ನ 28-ಎರಡು ವರ್ಷಗಳ ಕಾಲ ಮಾತೃತ್ವ ವಿರಾಮ ಪಡೆದಿದ್ದ ಭಾರತದ ಹಿರಿಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ಮುಂದಿನ ವರ್ಷ ಜನವರಿಯಲ್ಲಿ ಆರಂಭವಾಗುವ ಹೊಬರ್ಟ್ ಇಂಟರ್‌ನ್ಯಾಷನಲ್ ಟೂರ್ನಿ ಆಡುವ ಮೂಲಕ ಸ್ಪರ್ಧಾತ್ಮಕ ಟೆನಿಸ್‌ಗೆ ಮರಳಲು ಸಜ್ಜಾಗಿದ್ದಾರೆ.

 2017ರಲ್ಲಿ ಚೀನಾ ಓಪನ್ ಆಡಿದ್ದ 33ರ ಪ್ರಾಯದ ಸಾನಿಯಾ ಮಿರ್ಜಾ ಅವರ ಕೊನೆಯ ಟೂರ್ನಿಯಾಗಿತ್ತು. ವಿಶ್ವದ 38ನೇ ಶ್ರೇಯಾಂಕಿತೆ ಉಕ್ರೈನ್‌ನ ನದಿಯಾ ಕಿಚ್ನಾಕ್ ಅವರೊಂದಿಗೆ ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಕಣಕ್ಕೆೆ ಇಳಿಯಲು ಸಿದ್ಧತೆ ನಡೆಸುತ್ತಿದ್ದಾರೆ. 

ಹೈದರಾಬಾದ್ ನ ಸಾನಿಯಾ ಮಿರ್ಜಾ ಅವರು ಪಾಕಿಸ್ತಾಾನ ಕ್ರಿಕೆಟ್ ತಂಡದ ಶೊಯೆಬ್ ಮಲ್ಲಿಕ್ ಅವರನ್ನು ವಿವಾಹವಾಗಿದ್ದರು. ಕಳೆದ ವರ್ಷ ಮೊದಲ ಗಂಡು ಮಗು ಇಝಾನ್‌ಗೆ ಜನ್ಮ ನೀಡಿದ್ದರು. ಹಾಗಾಗಿ, ಅವರು ಮಾತೃತ್ವ ವಿರಾಮದಲ್ಲಿ ಇಷ್ಟು ದಿನ ಕಳೆದಿದ್ದರು.

‘‘ಮುಂದಿನ ವರ್ಷ ಹೊಬರ್ಟ್ ಓಪನ್ ಆಡುವ ಮೂಲಕ ಟೆನಿಸ್ ವೃತ್ತಿ ಜೀವನಕ್ಕೆೆ ಮರಳಲಿದ್ದೇನೆ. ನಂತರ, ಆಸ್ಟ್ರೇಲಿಯಾ ಓಪನ್ ಆಡುವ ಮೂಲಕ ಗ್ರ್ಯಾನ್ ಸ್ಲ್ಯಾಮ್‌ಗೆ ಹಿಂತಿರುಗುತ್ತಿದ್ದೇನೆ. ಮುಂದಿನ ವರ್ಷ ಮುಂಬೈನಲ್ಲಿ ನಡೆಯುವ ಯುಎಸ್‌ಡಿ 25,000 (ಐಟಿಎಫ್ ಮಹಿಳಾ) ಟೂರ್ನಿ ಆಡಲು ಬಯಸಿದ್ದೇನೆ. ಆದರೆ, ಆ ಟೂರ್ನಿ ಆಡುವ ಬಗ್ಗೆೆ ಇನ್ನೂ 50-50 ಒಮ್ಮತ ಇದೆ. ನನ್ನ ಮುಷ್ಠಿ ಹೇಗೆ ವರ್ತಿಸಲಿದೆ ಎಂಬುದರ ಮೇಲೆ ಈ ಟೂರ್ನಿ ಆಡುವುದು ನಿಂತಿದೆ. ಹೊಬರ್ಟ್ ಹಾಗೂ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ನೋಡೋಣ.’’ ಎಂದು ಸಾನಿಯಾ ಮಿರ್ಜಾ ತಿಳಿಸಿದ್ದಾರೆ.