ಸಂಗೊಳ್ಳಿ ರಾಯಣ್ಣ ಉತ್ಸವ: ಜನೇವರಿ 6 ರಿಂದ ವೀರಜ್ಯೋತಿ ಯಾತ್ರೆ

ಬೆಳಗಾವಿ: 03 :ಸಂಗೊಳ್ಳಿ ರಾಯಣ್ಣ ಉತ್ಸವದ ಅಂಗವಾಗಿ ಜನೇವರಿ 6 ರಂದು ಬೆಳಿಗ್ಗೆ 10 ಗಂಟೆಗೆ ನಂದಗಡದಿಂದ ವೀರಜ್ಯೋತಿ ಯಾತ್ರೆ ಪ್ರಾರಂಭವಾಗಲಿದ್ದು, ಜ್ಯೋತಿಯು ಜಿಲ್ಲೆಯ ವಿವಿಧೆಡೆ ಸಂಚರಿಸಿ ಜನೇವರಿ 12 ರಂದು ಮರಳಿ ಸಂಗೊಳ್ಳಿಗೆ ತಲುಪಲಿದೆ.

ವೀರಜ್ಯೋತಿ ಯಾತ್ರೆಯು ನಂದಗಡದಿಂದ ಜನೇವರಿ 6 ರಂದು ಮಧ್ಯಾಹ್ನ ಖಾನಾಪೂರಕ್ಕೆ ಆಗಮಿಸುವುದು. ಸಂಜೆ 5 ಗಂಟೆಗೆ ಬೆಳಗಾವಿಗೆ ಆಗಮಿಸಿ, ವಾಸ್ತವ್ಯಗೊಳ್ಳುವುದು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವುವು.

ಜನೇವರಿ 7 ರಂದು ಮಧ್ಯಾಹ್ನ 12 ಗಂಟೆಗೆ ಕಾಕತಿ, 3 ಗಂಟೆಗೆ ಹುಕ್ಕೇರಿ ಆಗಮಿಸಿ, ವಾಸ್ತವ್ಯಗೊಳ್ಳುವುದು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವುವು.

ಜನೇವರಿ 8 ರಂದು ಬೆಳಿಗ್ಗೆ 11 ಗಂಟೆಗೆ ಚಿಕ್ಕೋಡಿಗೆ ಆಗಮಿಸುವುದು. ಮಧ್ಯಾಹ್ನ 4 ಗಂಟೆಗೆ ಅಥಣಿ ಆಗಮಿಸಿ, ವಾಸ್ತವ್ಯಗೊಳ್ಳುವುದು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವುವು.

ಜನೇವರಿ 9 ರಂದು ಮಧ್ಯಾಹ್ನ 12 ಗಂಟೆಗೆ ರಾಯಬಾಗಕ್ಕೆ ಆಗಮಿಸುವುದು. ಮಧ್ಯಾಹ್ನ 4 ಗಂಟೆಗೆ ಗೋಕಾಕ ಆಗಮಿಸಿ, ವಾಸ್ತವ್ಯಗೊಳ್ಳುವುದು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವುವು.

ಜನೇವರಿ 10 ರಂದು ಬೆಳಿಗ್ಗೆ 11 ಗಂಟೆಗೆ ರಾಮದುರ್ಗ ಆಗಮಿಸುವುದು. ಮಧ್ಯಾಹ್ನ 2 ಗಂಟೆಗೆ ಸವದತ್ತಿ, ಸಂಜೆ 5 ಗಂಟೆಗೆ ಬೈಲಹೊಂಗಲಕ್ಕೆ ತೆರಳಿ ವಾಸ್ತವ್ಯಗೊಳ್ಳುವುದು. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಜನೇವರಿ 11 ರಂದು ಮಧ್ಯಾಹ್ನ 12 ಗಂಟೆಗೆ ಚನ್ನಮ್ಮನ ಕಿತ್ತೂರಿಗೆ ಆಗಮಿಸಿ, ಅಲ್ಲಿಯೇ ವಾಸ್ತವ್ಯಗೊಳ್ಳುವುದು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವುವು. 

ವೀರಜ್ಯೋತಿ ಯಾತ್ರೆಯು ಜನೇವರಿ 12 ರಂದು ಬೆಳಿಗ್ಗೆ 9 ಗಂಟೆಗೆ ಸಂಗೊಳ್ಳಿ ತೆರಳಲಿದೆ.