ಲೋಕದರ್ಶನ ವರದಿ
ಬೆಳಗಾವಿ, 7: ನಮ್ಮ ಭಾಗದ ಯುವಕರು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ತಾವೇ ವೇದಿಕೆ ಸೃಷ್ಟಿಸಿಕೊಳ್ಳಬೇಕು. ತಾವೇ ನಾಯಕರಾಗಿ ಬೆಳೆಯಬೇಕು ಎಂದು ರೈತ ಮುಖಂಡ ಸಿದಗೌಡ ಮೋದಗಿ ಹೇಳಿದ್ದಾರೆ.
ಶನಿವಾರದಂದು ನಗರದ ಬಡಕಲ್ಗಲ್ಲಿಯಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಶ್ರೀ ದುಗರ್ಾದೇವಿ ಕ್ರಿಯೆಷನ್ಸ ವತಿಯಿಂದ ಕೆ.ಬಿ.ಮಾದರ ಅವರು ನಿದರ್ೇಶಿಸುತ್ತಿರುವ ಮತ್ತೆ ಹಾಡಿತು ಕೋಗಿಲೆ ಎಂಬ ಕಿರುಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ಭಾಗದಲ್ಲಿ ಅನೇಕ ಪ್ರತಿಭಾವಂತರಿದ್ದರೂ ಅವರಿಗೆ ಸೂಕ್ತವಾದ ಅವಕಾಶಗಳು ಸಿಗುತ್ತಿಲ್ಲ. ಚಿತ್ರರಂಗ ಬೆಂಗಳೂರಿಗೆ ಕೇಂದ್ರಿಕೃತವಾಗಿದೆ. ನಮ್ಮ ಭಾಗದ ಯುವಕರು ತಮ್ಮ ವೇದಿಕೆಗಳ ಮೂಲಕ ನಾಡಿಗೆ ಪರಿಚಯಿಸಿಕೊಳ್ಳಬೇಕು. ಆ ಮೂಲಕ ನಾಯಕರಾಗಿ ಬೆಳೆಯಬೇಕು. ಉದ್ಯೋಗಗಳನ್ನು ಸೃಷ್ಟಿಸಿಕೊಂಡು ತಮ್ಮ ಭಾಗದ ಯುವಕರಿಗೆ ನೆಲೆ ಒದಗಿಸಬೇಕು ಎಂದರು.
ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದಗರ್ೆ ಮಾತನಾಡಿ, ನಮ್ಮ ಮೇಲೆ ಅನ್ಯಾಯವಾಗುತ್ತಿದೆ ಎಂದು ಕೇವಲ ಆರೋಪ ಮಾಡುತ್ತ ಕಾಲ ಹರಣ ಮಾಡುವದನ್ನು ಬಿಟ್ಟು ಅನ್ಯಾಯದ ವಿರುದ್ಧ ಸಿಡಿದೇಳ ಬೇಕು. ನಮ್ಮ ಸಮಸ್ಯೆಗಳ ಪರಿಹಾರಕ್ಕೆ ನಾವೇ ನಾಯಕರಾಗಿ ಬಗೆಹರಿಸಿಕೊಳ್ಳಬೇಕು. ಪಯರ್ಾಯ ಮಾರ್ಗಗಳನ್ನು ಹುಡುಕಿಕೊಳ್ಳಬೇಕು ಎಂದರು.
ಇತ್ತೀಚೆಗೆ ಸಿನಿಮಾ ಲೋಕ ಬೆಂಗಳೂರಿನ ಗಾಂಧಿನಗರದಿಂದ ಹೊರಗೆ ಕಾಳಿಡುತ್ತಿದೆ. ಈ ಬೆಳವಣಿಗೆ ವೇಗವಾಗಬೇಕು. ಈ ಭಾಗದ ಯುವಕರು ಗಾಂಧಿನಗರದ ಉತ್ತರಾಧಿಕಾರಿಗಳಂತೆ ಬೆಳೆದು ನಿಲ್ಲಬೇಕು. ನಮ್ಮ ಭಾಗದ ಸ್ಥಿತಿವಂತರು ಪ್ರತಿಭಾವಂತರಿಗೆ ಪೋಷಕರಾಗಬೇಕು. ಈ ಪ್ರದೇಶದ ವೈಭವವನ್ನು ನಾಡಿಗೆ ತೋರಿಸಬೇಕು ಎಂದರು.
ನಿದರ್ೇಶಕ ಕೆ.ಬಿ.ಮಾದರ ಮಾತನಾಡಿ, ಕಳೆದ ಕೆಲ ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಆ ಅನುಭವದಿಂದ ಈಗ ಪ್ರಥಮ ಬಾರಿಗೆ ಪ್ರಾಯೋಗಿಕವಾಗಿ ಕಿರುಚಿತ್ರದ ನಿಮರ್ಾಣ ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಪೂರ್ಣ ಪ್ರಮಾಣದ ಚಲನಚಿತ್ರ ನಿಮರ್ಾಣ ಮಾಡುವ ಯೋಜನೆ ರೂಪಿಸಲಾಗಿದೆ ಎಂದರು.
ನಟ ಡಾ.ಬಾಳಗೌಡ ಪಾಟೀಲ ಮಾತಮಾಡಿ, ಈಗಾಗಲೇ ಅನೇಕ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ. ಸ್ಥಳೀಯ ಯುವಕರು ಮುಂದೆ ಬಂದು ಕಿರುಚಿತ್ರ ಮಾಡುತ್ತಿರುವದು ಸಂತಸ ತಂದಿದೆ. ಈ ತಂಡಕ್ಕೆ ತಮ್ಮ ಸಂಪೂರ್ಣ ಸಹಕಾರ ಇದೆ ಎಂದರು.
ಚಿತ್ರ ತಂಡದ ಕಲಾವಿಧರು ಹಾಗೂ ಚಿತ್ರೀಕರಣದ ಸಿಬ್ಬಂದಿಗಳು ಉಪಸ್ಥಿತರಿದ್ದರು.