‘ಭಾಗ್ಯವಂತರು’ ನೂತನ ತಂತ್ರಜ್ಞಾನದಲ್ಲಿ!


ಬೆಂಗಳೂರು, ಜುಲೈ 2: ಕನ್ನಡ ಪ್ರೇಕ್ಷಕರು ಎಂದಿಗೂ ಮರೆಯಲಾಗದ ಚಿತ್ರ ಡಾ.ರಾಜ್ ಅಭಿನಯದ ‘ಭಾಗ್ಯವಂತರು’.  ಈ ಚಿತ್ರ ನೂತನ ತಂತ್ರಜ್ಞಾನದಲ್ಲಿ ಮತ್ತೆ ಅಭಿಮಾನಿಗಳೆದರು ಬರಲು ಸಿದ್ಧವಾಗಿದೆ.

  ಶ್ರೀ ಮುನೇಶ್ವರ ಫಿಲಂಸ್ ಮಾಲೀಕರಾದ ಎಂ. ಮುನಿರಾಜು ಈ ಪ್ರಯತ್ನದಲ್ಲಿದ್ದು, ಕೊರೋನಾ ಹಾವಳಿಯ ಬಳಿಕ ರಾಜ್ಯದ ಕಲಾಭಿಮಾನಿಗಳಿಗೆ ಭರ್ಜರಿ ಕೊಡುಗೆ ನೀಡಲಿದ್ದಾರೆ. ದ್ವಾರಕೀಶ್ ಚಿತ್ರ ಸಂಸ್ಥೆಯಲ್ಲಿ ತಯಾರಾಗಿ ಸೂಪರ್ ಹಿಟ್ ಆದ ಚಿತ್ರ ಇಂದಿನ ತಂತ್ರಜ್ಞಾನದಲ್ಲಿ ಸಿನಿಮಾಸ್ಕೋಪ್ 7.1ಡಿ.ಐ ಬಳಸಿಕೊಳ್ಳಲಾಗಿದೆ. ‘ಭಾಗ್ಯವಂತರು’ ಕಿವಿಗೆ ಇಂಪಾದ ಹಾಡುಗಳೊಂದಿಗೆ ರಾಜ್ ಕುಮಾರ್, ಬಿ. ಸರೋಜಾದೇವಿ, ಅಶೋಕ್ ಮೊದಲಾದವರು ಅಭಿನಯಿಸಿದ್ದ ಸೂಪರ್ ಹಿಟ್ ಚಿತ್ರ. 

  ರಾಜನ್-ನಾಗೇಂದ್ರ ಜೋಡಿಯ ಸಾಹಿತ್ಯಕ್ಕೆ ಚಿ. ಉದಯಶಂಕರ್ ಸಂಗೀತ ಸಂಯೋಜನೆಯಿದೆ. ದ್ವಾರಕೀಶ್ ನಿರ್ಮಾಣದ ಚಿತ್ರವನ್ನು ನಿರ್ದೇಶಿಸಿದ್ದು, ಚಿತ್ರಬ್ರಹ್ಮ ಭಾರ್ಗವ. ಈ ಚಿತ್ರವನ್ನು ಮತ್ತೆ ರಾಜ್ಯದ ಜನರ ಮನರಂಜಿಸಲು ವಿಶಾಲ ಕರ್ನಾಟಕಕ್ಕೆ ಹಂಚಿಕೆ ಮಾಡಲು ಶ್ರೀ ಮುನೇಶ್ವರ ಫಿಲಂಸ್ ನ ಎಂ. ಮುನಿರಾಜು ಮುಂದಾಗಿದ್ದಾರೆ.