ಲೋಕದರ್ಶನ ವರದಿ
ಯಮಕನಮರಡಿ 21: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಗಡಿ ಕಾಯುವ ಕಾರ್ಯದಲ್ಲಿ ನಿರತರಾಗಿದ್ದಾಗ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶ್ಲಾಘನೀಯ ಎಂದು ಹುಕ್ಕೇರಿ ಗ್ರಾಮೀಣ ವಿದ್ಯುತ ಸಂಘದ ನಿದರ್ೇಶಕ ಅಶೋಕ ಚಂದಪ್ಪಗೋಳ ಹೇಳಿದರು.
ಅವರು ಮಾವನೂರ ಗ್ರಾಮದಲ್ಲಿ ಭಾರತ ಸರಕಾರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿಮರ್ಿಸಿದ ಕಾರ್ಯಕ್ರಮದ ಶಾಂತಿ ಅಂಗವಾಗಿ ಬೆಳಗಾವಿ ಮರಾಠಾ ಬಿ ಗ್ರೇಡರ್ ಕಮಾಂಡೋ ಕಚೇರಿ ವತಿಯಿಂದ ಆಯೋಜಿಸಿದ ಮಾವನೂರ ಗ್ರಾಮದ ಹುತಾತ್ಮ ವೀರ ಯೋಧ ಮಂಜುನಾಥ ಬಾ ಮುಸಲ್ಮಾರಿ ಇವರಿಗೆ ಶೃದ್ದಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ "ದೇಶದ ಗಡಿ ರಕ್ಷಣೆ ಮಾಡುವ ಸೈನಿಕ ಮತ್ತು ಅನ್ನ ಕೊಡುವ ರೈತರು ಭವ್ಯ ಭಾರತದ ಬೆನ್ನೆಲುಬು" ಇಂಥ ಹುತಾತ್ಮ ಯೋಧರ ನಮನ ಕಾರ್ಯಕ್ರಮ ದೇಶದ ಯುವಕರಿಗೆ ಸ್ಪೂತರ್ಿಯಾಗಿ ಅವರಲ್ಲಿ ದೇಶ ಪ್ರೇಮ ಮೂಡಲಿ ಎಂದರು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಬೆಳಗಾವಿ ಮರಾಠಾ ರೇಜಿಮೆಂಟಿನ ಬಿಗ್ರೇಡರ್ ಸುಬೇದಾರ ಮಂಜುನಾಥ ಎಮ್.ರೆಡ್ಡಿ ಮಾತನಾಡಿ ಹುತಾತ್ಮ ವೀರ ಯೋಧ ಮಂಜುನಾಥ ಬಾ ಮುಸಲ್ಮಾರಿ ಇವರು ಸೈನಿಕರಾಗಿ ಸೇವೆ ಸಲ್ಲಿಸಿದ್ದನ್ನು ಮೇಲುಕು ಹಾಕಿ ಅವರ ಪ್ರತಿಮೆಯನ್ನು ಗ್ರಾಮದಲ್ಲಿ ಅನಾವರಣಗೊಳಿಸಲು 2,80,000 ರೂ ಗಳ ಚೆಕಗಳನ್ನು ನಿಡಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ವೀರ ಯೋಧರ ಕುಟುಂಬದವರಿಗೆ ಸೈನಿಕರಿಗೆ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬೆಳಗಾವಿ ಗುರು ಮೆಲೊಡಿ, ಆಕರ್ೆಸ್ಟ್ರಾ ಕಲಾವಿದರಾದ ಸುನೀಲ ಮಾಸ್ತಮರಡಿ, ಮಂಜುಳಾ ಸುನೀಲ ಮಾಸ್ತಮರಡಿ, ರಾಮಚಂದ್ರ ಕಾಕಡೆ, ಸತೀಶ ಅಕ್ಕತಂಗೇರಹಾಳ ಇವರು ದೇಶ ಭಕ್ತಿ ಬಿಂಬಿಸುವ ಹಾಡುಗಳನ್ನು ಹಾಡಿದರು.
ಕಾರ್ಯಕ್ರಮದಲ್ಲಿ ಹುತಾತ್ಮ ವೀರ ಯೋಧನ ಪತ್ನಿ ರಾಜೇಶ್ವರಿ ಮಂಜುನಾಥ ಮುಸಲ್ಮಾರಿ, ಅಕ್ಕುಬಾಯಿ ಕೊಳಿ, ನೀಲಮ್ಮಾ ಹೊನಗೌಡರ, ರೇಣುಕಾ ಎಸ್. ಗುತ್ತಿ, ರುದ್ರವ್ವಾ ಎಸ್. ಜಿರಳಿ, ರೇಣುಕಾ ಮತ್ತು ಮಾವನೂರ ಗ್ರಾ.ಪಂ ಅಧ್ಯಕ್ಷ ರವೀಂದ್ರ ಚಂದಪ್ಪಗೋಳ, ಪಿ.ಡಿ.ಓ ಚಂದ್ರು ಗುಡದರಿ, ಪ್ರೌಢಶಾಲೆ ಮುಖ್ಯಾಧ್ಯಾಪಕ ಸುನೀಲ ಖಜೂರಿ, ಎಸ್.ಡಿ.ಎಮ್.ಸಿ ಅಧ್ಯಕ್ಷ ಸತ್ತೆಪ್ಪಾ ಲಠ್ಠೆ, ಮಲ್ಲಪ್ಪಾ ಎಸ್. ಗಡದ, ಬಸಗೂಳಿ ಗಡದ, ವನ್ನೂರಿ, ಇಸ್ಮಾಯಿಲ್ ಘೋರಿ, ವೀರುಪಾಕ್ಷಿ ಮಗದುಮ್ಮ, ಗಂಗಪ್ಪಾ ಗಡದ, ಸಿದ್ದಪ್ಪಾ ಗಡದ, ಕಾಡಪ್ಪಾ ಅಡಿಬಟ್ಟಿ, ಇನ್ನೀತರರು ಉಪಸ್ಥಿತರಿದ್ದರು.