ಕರಾಟೆ ತರಬೇತಿ ಎಲ್ಲಾ ವಿದ್ಯಾರ್ಥಿನಿಯರಿಗೆ ಕಡ್ಡಾಯವಾಗಲಿ -ವಿಠ್ಠಲ್ ಜಾಬಗೌಡರ
Karate training should be made mandatory for all female students - Vitthal Jabagowada
ಲೋಕದರ್ಶನ ವರದಿ
ಕೊಪ್ಪಳ 09 : ಇಂದಿನ ದಿನಗಳಲ್ಲಿ ಸ್ವಯಂರಕ್ಷಣೆಗಾಗಿ ಕರಾಟೆ ಅತೀ ಅಗತ್ಯವಾಗಿ ಎಲ್ಲರೂ ಕಲಿಯಬೇಕಾದ ಕ್ರೀಡೆಯಾಗಿದೆ. ಕರಾಟೆಯನ್ನು ಎಲ್ಲ ಶಾಲೆ ಕಾಲೇಜುಗಳಲ್ಲಿ ಕಡ್ಡಾಯವಾಗಿ ಕಲಿಸುವಂತಾಗಬೇಕು. ಇದರಿಂದ ದೈಹಿಕವಾಗಿಯೂ ಶಕ್ತಿವಂತರಾಗಬಹಹುದು ಜೊತೆಗೆ ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮನಸ್ಸು ಇರುತ್ತದೆ ಎನ್ನುವಂತೆ ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯೂ ಸಾದ್ಯವಾಗುತ್ತದೆ ಎಂದು ಕೊಪ್ಪಳ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡರ ಹೇಳಿದರು.
ಗದಗ ರಸ್ತೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯತ, ಕೊಪ್ಪಳ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕೊಪ್ಪಳ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ, ಕರಾಟೆ ಇಂಡಿಯಾ ಆರ್ಗನೈಜೇಷನ್ ಮತ್ತು ನ್ಯಾಷನಲ್ ಸ್ಟೀರಿಟ್ ಕರಾಟೆ ಅಕಾಡಮಿ, ಕೊಪ್ಪಳ ಇವರ ಸಹಯೋಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ವಿದ್ಯಾರ್ಥಿನಿಯರ ಕರಾಟೆ ಪ್ರದರ್ಶನ-ಬೆಲ್ಸ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಉದ್ಘಾಟನೆಯನ್ನು ವಿದ್ಯಾರ್ಥಿನಿಯರಿಗೆ ಡ್ರಾಗನ್ ಸ್ಟಿಕ್ ನೀಡುವುದರ ಮೂಲಕ ಮಾಡಲಾಯಿತು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ನಿಮಿತ್ಯ ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ನಿಜಕ್ಕೂ ಅರ್ಥಪೂರ್ಣ. ವಿವಿಧ ಶಾಲೆಯ ಮಕ್ಕಳು ಇದರಲ್ಲಿ ಭಾಗವಹಿಸಿ ಪ್ರದರ್ಶನ ಮಾಡಿ ಬೆಲ್ಟ್ ಪಡೆಯುತ್ತಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು. ಎಪಿಜೆ ಅಬ್ದುಲ್ ಕಲಾಂ ಸಿಬಿಎಸ್ಸಿ ಶಾಲೆ ಲಿಂಗದಳ್ಳಿ, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ತಳಕಲ್ ಮತ್ತು ಹಿಟ್ನಾಳ ಶಾಲೆಯ 250 ವಿದ್ಯಾರ್ಥಿನಿಯರು ಭಾಗವಹಿಸಿ 2025-26ನೇ ಸಾಲಿನಲ್ಲಿ ಪಡೆದ ತರಬೇತಿಯ ಪ್ರದರ್ಶನವನ್ನು ಮಾಡಿದರು. ಇದೇ ಸಂದರ್ಭದಲ್ಲಿ ಬೆಲ್ಟ್ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು
ಪ್ರಾಸ್ತಾವಿಕವಾಗಿ ನ್ಯಾಷನಲ್ ಸ್ಟೀರಿಟ್ ಕರಾಟೆ ಅಕಾಡಮಿ ಮುಖ್ಯಸ್ಥ ರಾಜಾಬಕ್ಷಿ ಎಚ್.ವಿ ನೆರವೇರಿಸಿದರು. ಅದ್ಯಕ್ಷತೆಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಅಜ್ಮೀರ್ ಅಲಿ ವಹಿಸಿದ್ದರು. ವೇದಿಕೆಯ ಮೇಲೆ ನ್ಯಾಷನಲ್ ಶುಟೋಕಾನ್ ಕರಾಟೆ ಅಸೋಶಿಯೇಷನ್ ಕರ್ನಾಟಕದ ಅಧ್ಯಕ್ಷರಾದ ಬಿ.ಬಾಷಾಸಾಹೇಬ, ಹಿರಿಯ ಹೋರಾಟಗಾರ ನಜೀರ್ ಮೂಲಿಮನಿ, ಮಾಜಿ ನಗರಸಭಾ ಸದಸ್ಯ ಮಾನ್ವಿ ಪಾಷಾ, ತರಬೇತುದಾರರಾದ ದೀಪಾ ಮತ್ತು ರೋಹಿಣಿ ಉಪಸ್ತಿತರಿದ್ದರು. ನಿರೂಪಣೆಯನ್ನು ದಾವಲಸಾಬ ಬೆಟಗೇರಿ ನಡೆಸಿಕೊಟ್ಟರು. ವಂದನಾರೆ್ಣಯನ್ನು ದೇವಪ್ಪ ಕಲ್ಲನ್ನವರ ಮಾಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 