ಕೆಎಸ್‌ಆರ್ಟಿಸಿ ಬಸ್ ಡಿಪೋ ಬಳಿ ಗಾಂಜಾ ಮಾರಾಟ: ಆರೋಪಿಯ ಬಂಧನ!

ಕೆಎಸ್‌ಆರ್ಟಿಸಿ ಬಸ್ ಡಿಪೋ ಬಳಿ ಗಾಂಜಾ ಮಾರಾಟ: ಆರೋಪಿಯ ಬಂಧನ! Sale of marijuana near KSRTC bus depot: Accused arrested!

 ಲೋಕದರ್ಶನ ವರದಿ 

 ಮುಂಡಗೋಡ 20 : ಪಟ್ಟಣದ ಕೆಎಸ್‌ಆರ್ಟಿಸಿ ಬಸ್ ಡಿಪೋ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಗುರುವಾರ ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಇಂದೂರ ಗ್ರಾಮದ ಅಕ್ಬರ ಮೌಲಾಸಾಬ ಸೈಯದಅಲಿ (32) ಎಂದು ಗುರುತಿಸಲಾಗಿದೆ.  ಆರೋಪಿಯ ಬಳಿಯಿಂದ ಸುಮಾರು 184 ಗ್ರಾಂ ಗಾಂಜಾ ಮತ್ತು ?360 ನಗದು ಹಣವನ್ನು ವಶಪಡಿಸಿಕೊಂಡಿದ್ದು, ಗಾಂಜಾದ ಅಂದಾಜು ಮೌಲ್ಯ ? 12,000 ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ಎಸ್ಪಿ ದೀಪನ್ ಎಂ.ಎನ್, ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಜಿ. ಹಾಗೂ ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದ್ದು, ಸಿಪಿಐ ರಂಗನಾಥ ನೀಲಮ್ಮನವರ ನೇತೃತ್ವದಲ್ಲಿ ಪಿಎಸ್‌ಐ ಮಂಜುನಾಥ ಗೌಡರ, ಎಎಸ್‌ಐ ಸೋಮಶೇಖರ ಮೇತ್ರಿ ಸೇರಿದಂತೆ ಪೊಲೀಸ್ ಸಿಬ್ಬಂದಿ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.