ಶಿರಡಿಯಲ್ಲಿ ಎಂದಿನಂತೆ ಭಕ್ತಾಧಿಗಳಿಗೆ ಸಾಯಿಬಾಬಾ ದರ್ಶನ

ಶಿರಡಿ, ಜ 19 :      ಪ್ರಸಿದ್ಧ  ಯಾತ್ರಾ ಸ್ಥಳ  ಶಿರಡಿಯಲ್ಲಿ   ಸಾಯಿ ಸಂಸ್ಥಾನ ಟ್ರಸ್ಟ್ ಸಾಯಿಬಾಬಾ ದೇಗುಲವನ್ನು  ಎಂದಿನಂತೆ    ಭಾನುವಾರ   ಭಕ್ತಾಧಿಗಳ  ದರ್ಶನಕ್ಕಾಗಿ  ತೆರೆಯಲಾಗಿದೆ.  

ಭಕ್ತಾಧಿಗಳು  ಯಥಾರೀತ್ಯಾ   ಸಾಯಿಬಾಬಾ   ದರ್ಶನ ಪಡೆದುಕೊಳ್ಳುತ್ತಿದ್ದಾರೆ.  ಸಾಯಿ ಬಾಬಾ  ಜನ್ಮಸ್ಥಳವಾದ ಪರ್ಬಾನಿ  ಜಿಲ್ಲೆಯ ಪತ್ರಿ ಪಟ್ಟಣವನ್ನು ಅಭಿವೃದ್ಧಿಪಡಿಸುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಘೋಷಿಸಿರುವುದರಿಂದ  ಶಿರಡಿ ದೇವಾಲಯ ಅಭಿವೃದ್ಧಿ ಕುಂಠಿತವಾಗಲಿದೆ ಎಂದು  ಆತಂಕಗೊಂಡಿರುವ  ಶಿರಡಿ ಸುತ್ತಮುತ್ತಲಿನ ಗ್ರಾಮಗಳ ಜನರು  ಪ್ರತಿಭಟನೆ ನಡೆಸುತ್ತಿದ್ದಾರೆ. 

ಪತ್ರಿ ಸಾಯಿಬಾಬಾ ಅವರ ಜನ್ಮಸ್ಥಳ ಎಂಬ  ಹೇಳಿಕೆಯನ್ನು   ಮುಖ್ಯಮಂತ್ರಿ  ಉದ್ಧವ್ ಠಾಕ್ರೆ  ಕೂಡಲೇ ಹಿಂತೆಗೆದುಕೊಳ್ಳಬೇಕು  ಆಗ್ರಹಿಸಿ, ಸ್ಥಳೀಯರು ಶಿರಡಿ  ಅನಿದರ್ಿಷ್ಟ ಬಂದ್ ಗೆ  ಕರೆ ನೀಡಿದ್ದಾರೆ. 

ಆದರೆ, ಶಿರಡಿ ದೇಗುಲ ಟ್ರಸ್ಟ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೀಪಕ್ ಮುಗ್ಲಿಕರ್ ಅವರು, ಬಂದ್ನ  ಯಾವುದೇ  ಪ್ರಭಾವ ಬಾಬಾ ದೇಗುಲದ  ಮೇಲೆ ಆಗುವುದಿಲ್ಲ, ದೇಗುಲ ಎಂದಿನಂತೆ  ತೆರೆದಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಭಾನುವಾರ ದೇವಾಲಯ  ಮುಚ್ಚಲಾಗುವುದು ಎಂಬ ವದಂತಿಗಳಿಗೆ  ಭಕ್ತಾಧಿಗಳು  ಕಿವಿಕೊಡಬಾರದು ಎಂದು ಮನವಿ ಮಾಡಿದ್ದಾರೆ. ಶಿರಡಿಗೆ  ಆಗಮಿಸುವ ಭಕ್ತಾಧಿಗಳಿಗೆ  ಯಾವುದೇ ತೊಂದರೆಯಾಗದಂತೆ  ಮುನ್ನೆಚ್ಚರಿಕೆಯ ಕ್ರಮ ಕೈಗೊಂಡಿರುವುದಾಗಿ   ಟ್ರಸ್ಟ್ ಸದಸ್ಯ ಬಿ. ವಾಗ್ಮೋರೆ ಹೇಳಿದ್ದಾರೆ.