ಸಹಕಾರ ರತ್ನ ಪ್ರಶಸ್ತಿ : ಶಂಕ್ರಣ್ಣ ಮುನವಳ್ಳಿಗೆ, ಅಭಿನಂದನಾ ಸನ್ಮಾನ

Sahakar Ratna Award: Appreciation Award to Sankranna Munavalli

ಸಹಕಾರ ರತ್ನ ಪ್ರಶಸ್ತಿ : ಶಂಕ್ರಣ್ಣ ಮುನವಳ್ಳಿಗೆ, ಅಭಿನಂದನಾ ಸನ್ಮಾನ  

 ರಾಣೇಬೆನ್ನೂರು  15:  ಸಮಾಜ ಸೇವೆಗೆ ಮುಂದಾದಾಗ, ಲಾಭದ ಗುರಿ ಎಂದಿಗೂ ಇಟ್ಟುಕೊಳ್ಳಬಾರದು. ಬಸವಣ್ಣನವರ ವಾಣಿಯಂತೆ ಕಾಯಕದಲ್ಲಿ ಮುಂದಾಗಿ ಭವಿಷ್ಯದ ಬಗ್ಗೆ ಯೋಚಿಸಬೇಕು ಅದುವೆ ಮನುಷ್ಯನ ಮುಖ್ಯ ಗುರಿಯಾಗಿರಬೇಕು ಅಂದಾಗ ಮಾತ್ರ ಸಂಘ ಸಂಸ್ಥೆಗಳು ಉಳಿದು ಬೆಳೆಯಲು ಸಾಧ್ಯವಾಗುವುದು ಎಂದು ಕೆಎಲ್‌ಇ ಸಂಸ್ಥೆಯ ಬೆಳಗಾವಿ ಆಡಳಿತ ಮಂಡಳಿ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಹೇಳಿದರು.  ಅವರು, ಇಲ್ಲಿನ ಕೆಎಲ್‌ಇ ಆಡಳಿತ ಮಂಡಳಿಯ ರಾ. ರಾ ಕಾಲೇಜು, ಆಯೋಜಿಸಿದ್ದ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ, ಶಂಕರಣ್ಣ ಮುನವಳ್ಳಿ ಅವರ ಅಭಿನಂದನಾ ಸಮಾರಂಭದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು.  

         ಅಂದು ಕೆ. ಎಲ್‌. ಇ. ಸಂಸ್ಥೆಯು ಸಪ್ತ ಋಷಿಗಳು ಸ್ಥಾಪಿಸಿದ್ದು ದೂರದೃಷ್ಟಿಯ ಕಾರಣದಿಂದ ಮಾತ್ರ. ಅವರ ನಿಷ್ಪಲ ಯೋಜನೆ ಇಂದು ಉಜ್ಜಲವಾಗಿ ಬೆಳೆದಿದ್ದು, ಅವರ ನಿಸ್ವಾರ್ಥ ಸೇವೆಯೇ ಕಾರಣವಾಗಿದೆ ಎಂದರು.      ನಾಡು, ದೇಶ, ವಿದೇಶವು ಸೇರಿದಂತೆ ಎಲ್ಲೆಡೆಯೂ ಸಂಸ್ಥೆಯಿಂದ ಶಿಕ್ಷಣ ಸೇವೆ ದೊರೆಯುತ್ತಲ್ಲಿದೆ. ಇದಕ್ಕೆ ತನ್ನದೇ ಆದಂತಹ  ಹೆಸರು ಕೀರ್ತಿ, ಬರಲು ಡಾ ಪ್ರಭಾಕರ ಕೋರೆ ಅವರ, ಚಿಂತನೆ, ದೂರದೃಷ್ಟಿ ಪ್ರಮುಖ ಕಾರಣವಾಗಿದೆ ಎಂದರು.  ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ವ್ಹಿ.ಪಿ.ಲಿಂಗನಗೌಡ್ರು ಅವರು, ಶಂಕ್ರಣ್ಣ ಮುನವಳ್ಳಿ ಅವರಿಗೆ, ಅಭಿನಂದಿಸಿ ಸನ್ಮಾನಿಸಿದರು.  

          ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ವರ್ತಕ ಜಿ.ಜಿ. ಹೊಟ್ಟಿಗೌಡ್ರು ಹಣ ಗಳಿಸುವುದು ಸುಲಭ. ಆದರೆ ಹೆಸರು ಗಳಿಸುವುದು  ತುಂಬಾ ಕಷ್ಟ. ಶಂಕರಣ್ಣಮುನವಳ್ಳಿ ಅವರು, ಸಮಾಜಮುಖಿ ಕಾರ್ಯದ ಮೂಲಕ, ಉತ್ತರ ಕರ್ನಾಟಕದಲ್ಲಿ ಬಹು ದೊಡ್ಡ ಹೆಸರು ಮಾಡಿರೋದು ನಮಗೆಲ್ಲರಿಗೂ ಸಂತೋಷದ ಸಂಗತಿಯಾಗಿದೆ ಎಂದರು. ವೇದಿಕೆಯಲ್ಲಿ ಸ್ಥಳಿಯ ಆಡಳಿತ ಮಂಡಳಿ ಸದಸ್ಯರಾದ, ಜಯಣ್ಣ ಜಂಬಿಗಿ, ವೀರಣ್ಣ ಅಂಗಡಿ, ರಾಜಣ್ಣ ಮೋಟಗಿ, ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು. ಸಿಬ್ಬಂದಿಉಪಸ್ಥಿತರಿದ್ದರು.  ಉಪನ್ಯಾಸಕಿ ಚೇತನ ಹಿರೇಮಠ ಪ್ರಾರ್ಥಿಸಿದರು. ಪ್ರಾಚಾರ್ಯ ನಾರಾಯಣ ನಾಯಕ್ ಎ. ಸ್ವಾಗತಿಸಿದರು. ಪ್ರೊ, ಶೋಭಾ ದೊಡ್ಡನಾಗಳ್ಳಿ ನಿರೂಪಿಸಿ, ವಂದಿಸಿದರು.