ಅಂತರ್ಜಾಲ ಬಳಕೆಯಲ್ಲಿ ಸುರಕ್ಷತೆ& ಜಾಗೃತಿ ಅಗತ್ಯ : ಜಿಲ್ಲಾಧಿಕಾರಿ ಜಾನಕಿ ಕೆ.ಎಂ

Safety & awareness needed in internet usage: District Collector Janaki K.M

ಸುರಕ್ಷಿತ ಅಂತರ್ಜಾಲ ದಿನ ಆಚರಣೆ ಽ ಕಾರ್ಯಾಗಾರ ಆಯೋಜನೆ 

ಬಾಗಲಕೋಟೆ : ಅಂತರ್ಜಾಲ ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿದ್ದು, ಅದನ್ನು ಬಳಕೆ ಮಾಡುವಲ್ಲಿ ಸುರಕ್ಷಿತ ಹಾಗೂ ಜಾಗೃತಿ ವಹಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು. 

ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಎನ್‌.ಐ.ಸಿ ಸಹಯೋಗದಲ್ಲಿ ಹಮ್ಮಿಕೊಂಡ ಸುರಕ್ಷಿತ ಅಂತರ್ಜಾಲ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಬಹುತೇಕ ಜನ ಇಂಟರನೇಟ್ ಇಲ್ಲದೇ ಚಟಪಟಿಸುವ ಕಾಲ ಇದಾಗಿದೆ. ಇಂದು ದಿನಕ್ಕೆ ಒಂದು ಜಿಬಿ ಇಂದ ಹಿಡಿದು 3 ಜಿಬಿವರೆಗೆ ಬಳಕೆ ಮಾಡಲಾಗುತ್ತಿದೆ. ಒಂದು ನಿರ್ಧಿಷ್ಠ ಚೌಕಟ್ಟಿನೊಳಗೆ ಸಾಮಾಜಿಕ ಜಾಲತಾಣಗಳನ್ನು ಜನ ಬಳಸಬೇಕಿದೆ ಎಂದರು. 

ಇತ್ತೀಚೆಗೆ ಸೈಬರ್ ಕಳ್ಳಲು ತಮ್ಮ ಚಾಲಾಕಿತನ ತೋರುತ್ತಿದ್ದು, ಇಂತವರಿಂದ ತಪ್ಪಿಸಿಕೊಳ್ಳಲು ಜಾಗೃತರಾಗಬೇಕಿದೆ. ಇಂಟರನೆಟ್ ಮತ್ತು ಸಾಮಾಜಿಕ ಜಾಲತಾಣಗಳ ನಿಯಮಿತ ಬಳಕೆಯಿಂದ ನಾವು ದೂರ ಉಳಿಯಬೇಕು. ಈ ನಿಟ್ಟಿನಲ್ಲಿ ಅಂತರ್ಜಾಲದ ಸುರಕ್ಷಿತ ಹಾಗೂ ಜಾಗೃತಿಯ ಬಗ್ಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಲು ಕೋರಿದರು. 

ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ ಸಾಮಾಜಿಕ ಜಾಲತಾಣದಲ್ಲಿ ಜನ ವಿವಿಧ ಆಸೆ ಹಾಗೂ ದುರಾಸೆಗಳಿಗೆ ಮರುಳಾಗಿ ತಮ್ಮ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ 28 ಸಾವಿರ ಕೋಟಿ ಹಣ ಸೈಬರ್ ಕ್ರೈಮ್‌ನಲ್ಲಿ ಕಳೆದುಕೊಂಡಿದ್ದಾರೆ. ಕ್ರೈಮ್ ವರದಿಗಳು ಶೇ.35 ರಿಂದ 40 ವರೆಗೆ ಹೆಚ್ಚಾಗುತ್ತಿವೆ. ಇದು ಇನ್ನು ಆರಂಭವಾಗಿದೆ. ಬೆಂಗಳೂರು ನಗರ ಅಷ್ಟೇ ಅಲ್ಲದೇ ಬೇರೆ ಬೇರೆ ನಗರಗಳಲ್ಲಿಯೂ ಕೂಡಾ ಸೈಬರ್ ಪ್ರಕರಣಗಳು ಕಂಡುಬರುತ್ತಿವೆ ಎಂದರು. 

ಸೈಬರ್ ಕ್ರೈಮ್‌ಗಳಲ್ಲಿ ಹಣ ಕಳೆದುಕೊಂಡವರು ವಿದ್ಯಾವಂತರೆ ಎಂಬುದು ಸೋಜಿಗದ ಸಂಗತಿಯಾಗಿದೆ. ಈ ಸೈಬರ್ ಕ್ರೈಮ್‌ನ ಮೂಲ ಕಾರಣ ಜನರಲ್ಲಿರುವ ದುರಾಸೆಯಾಗಿದ್ದು, ಜನ ವಿವಿಧ ಆಸೆಗಳಿಗೆ ಮರುಳಾಗಿ ತಮ್ಮ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಪೊಲೀಸ್ ಇಲಾಖೆಯಿಂದ ಪತ್ರಿಕೆಗಳ ಮೂಲಕ 21 ದಿನಗಳ ಕಾಲ ನಿರಂತರವಾಗಿ ಮಾಹಿತಿ ನೀಡಲಾಗಿದೆ. ನಿಮ್ಮ ಒಂದು ತಪ್ಪಿನಿಂದ ನಿಮ್ಮ ಸಂಪೂರ್ಣ ಡಾಟಾ ಬೇರೆಯವರ ಕೈ ಸೇರುತ್ತದೆ. ಇದರ ಮೂಲಕ ಜಗತ್ತಿನ ಯಾವುದೇ ಮೂಲೆಯಿಂದ ನಿಮ್ಮ ಅಕೌಂಟ್ ಖಾಲಿ ಮಾಡಬಹುದಾಗಿದೆ. ಕ್ರೈ ವಂಚನೆಗೆ ಒಳಗಾದ 1 ಗಂಟೆಯೊಳಗೆ ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡಿದಲ್ಲಿ ತಮ್ಮ ಹಣ ಕೊಡಿಸುವ ಕಾರ್ಯ ಮಾಡಲಾಗುತ್ತದೆ ಎಂದರು. 

ಜಿ.ಪಂ ಜಿಇಓ ಶಶಿಧರ ಕುರೇರ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಆಸೆಗಳಿಗೆ ಬರುಳಾಗದೇ ಜಾಗೃತಿಯಿಂದ ತಮ್ಮ ಪಾಸ್‌ವರ್ಡಗಳನ್ನು ಕಾಲ ಕಾಲಕ್ಕೆ ಬದಲಾಯಿಸಿಕೊಂಡು ಸುರಕ್ಷತವಾಗಿ ಇಟ್ಟುಕೊಳ್ಳಬೇಕು ಎಂದರು. ಪ್ರಾರಂಭದಲ್ಲಿ ಎನ್‌.ಐ.ಸಿ ಅಧಿಕಾರಿ ಗಿರಿಯಾಚಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೈಬರ್ ಕ್ರೈಮ್ ವಿಭಾಗದ ಡಿವಾಯ್‌ಎಸ್‌ಪಿ ಮಂಜುನಾಥ ದಂಗಲ್ ಸೈಬರ್ ಕ್ರೈಮ್ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಪ್ರಾರಂಭದಲ್ಲಿ ಸ್ವಾಗತಿಸಿದರು.