ಸುರಕ್ಷಿತ ಚಾಲನೆ ಮಾಡಿದರೆ ಅಪಘಾತ ಕಡಿಮೆ ಮಾಡಬಹುದು

ಲೋಕದರ್ಶನ ವರದಿ

ಘಟಪ್ರಭಾ 05: ಯಮರಾಜ ಎಲ್ಲಿಯೂ ಕಾಣಿಸಿಲ್ಲವೆಂದರೆ ರಸ್ತೆಗಳಲ್ಲಿ ಕಾಣಿಸುತ್ತಾನೆ ಆದ್ದರಿಂದ ಸರಿಯಾಗಿ ರಸ್ತೆ ನಿಯಾಮವನ್ನು ಪಾಲಿಸಿಕೊಂಡು ಸುರಕ್ಷಿತವಾಗಿ ಚಾಲನೆ ಮಾಡಿದರೆ ಅಪಘಾತವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಗೋಕಾಕ ಡಿವೈಎಸ್ಪಿ ಡಿ.ಟಿ.ಪ್ರಭು ಹೇಳಿದರು. ಅವರು ಗುರುವಾರದಂದು ಜನರ ಸುರಕ್ಷತೆಗಾಗಿ ಅಫಘಾತ ಅರಿವು ಮೂಡಿಸಲು ಗೋಕಾಕ-ಘಟಪ್ರಭಾ ಮುಖ್ಯ ರಸ್ತೆಯಲ್ಲಿ  ಬೆಳಗಾವಿ ಜಿಲ್ಲಾ ಪೋಲಿಸ್, ಗೋಕಾಕ ಪೋಲಿಸ್ ಉಪ ವಿಭಾಗದಿಂದ ಹಮ್ಮಿಕೊಂಡ ಪಾದಯಾತ್ರೆ ನಮ್ಮ ನಡಿಗೆ ಜನರ ಸುರಕ್ಷತೆ ಕಡೆಗೆ ಎನ್ನುವ ವಿನೂತನ ಕಾರ್ಯಕ್ರಮದ ಮುಕ್ತಾಯವು  ಘಟಪ್ರಭಾ ಪೋಲಿಸ್ ಠಾಣೆಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ನಾವು ನಿಮ್ಮ ಕೆಲಸ ಪ್ರಾಮಾಣಿಕವಾಗಿ  ಮಾಡಲು ಸಿದ್ಧರಿದ್ದೇವೆ ನೀವು ನಮಗೆ ಕೆಲಸವನ್ನು ನೀಡಿ ನಮ್ಮ ಇಲಾಖೆಯಿಂದ ಸಾಧ್ಯವಾಗುವ ಕೆಲಸವನ್ನು ಮಾಡಿ ಕೊಳ್ಳಬೇಕೆಂದರು. 

ಗೋಕಾಕ ಘಟಪ್ರಭಾ ರಸ್ತೆಯಲ್ಲಿ ಹೆಚ್ಚಿನ ಅಪಘಾತ ಹಾಗೂ ದರೋಡೆ ಪ್ರಕರಣಗಳು ನಡೆಯುತ್ತಿವೆ. ಜನರು ಪೋಲಿಸ್ ಇಲಾಖೆಯೊಂದಿಗೆ ಹೆಚ್ಚಿನ ಸಹಕಾರದೊಂದಿಗೆ ನಡೆದುಕೊಂಡರೆ ಅಪರಾಧವನ್ನು ತಡೆಗಟ್ಟಬಹುವುದು. ಮಹಾಮಾರಿ ಕೊರನಾ ವೈರಸ್ ರೋಗ ಎಲ್ಲಾ ಕಡೆ ಭೀತಿ ಹುಟ್ಟಿಸಿರುವುದರಿಂದ ಸುರಕ್ಷಿತವಾಗಿ ಬಣ್ಣದಾಟವನ್ನು ಆಡಬೇಕು ಹಾಗೂ ಬರುವ ಹೊಳಿ ಹುಣ್ಣಿಮೆಯ ಕಾಮದಹನ ಸಂದರ್ಭದಲ್ಲಿ ಕಳೆದ ಮಹಾ ನೆರೆ ಹಾವಳಿ ಸಂದರ್ಭದಲ್ಲಿ  ಮನೆ-ಮಾರು ಕಳೆದುಕೊಂಡು ಬಾಗಿಲು ಕಿಟಿಕಿಗಳನ್ನು ತೆಗೆದಿಟ್ಟುಕೊಂಡಿರುವ ಜನರ ಸಾಮಾಗ್ರಿಗಳನ್ನು ತಂದು ಕಾಮದಹನ ಮಾಡಬೇಡಿ ಎಂದು ಹೇಳಿದರು.

ಪೋಲಿಸ್ ಇಲಾಖೆ ನಡೆಸಿದ ನಮ್ಮ ನಡೆಗೆ ಜನರ ಸುರಕ್ಷತೆ ಕಡೆಗೆ ಎನ್ನುವ ಕಾರ್ಯಕ್ರಮದ  ಗೋಕಾಕ-ಘಟಪ್ರಭಾ ಪಾದಯಾತ್ರೆ ಸಂದರ್ಭದಲ್ಲಿ ನೂರಾರು ಜನರು ಭಾಗವಹಿಸಿ ಯಶ್ವಸಿಗೊಳಿಸಿದರು. ಗೋಕಾಕ ಹಾಗೂ ಮೂಡಲಗಿ ವಿಭಾಗದ 25ಕ್ಕೂ ಹೆಚ್ಚು ವಿವಿಧ ಸಂಘಟನೆಗಳು ಹಾಗೂ ಅರಣ್ಯ ಇಲಾಖೆ, ಆರೋಗ್ಯ ಇಲಾಖೆ ಕೈ ಜೋಡಿಸಿ ಪೋಲಿಸ್ರೊಂದಿಗೆ ಸಹಕರಿಸಿದರು. ಪೋಲಿಸರ ಪಾದಯಾತ್ರೆ ಸಂದರ್ಭದಲ್ಲಿ ಅಧಿಕಾರಿಗಳಿಗೆ ಮಾರ್ಗ ಮಧ್ಯೆ ಹೂ ಹಾರ ಹಾಕಿ ಅಭೂತಪೂರ್ವ ಸ್ವಾಗತ ನೀಡಲಾಯಿತು. ಘಟಪ್ರಭಾ ಮೃತ್ಯುಂಜಯ ಸರ್ಕಲ್ನಲ್ಲಿ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಗೋಕಾಕ ಡಿವೈಎಸ್ಪಿ, ಸಿಪಿಐ, ಹಾಗೂ ಉಪವಿಭಾಗದ ಎಲ್ಲಾ 9 ಜನ ಪಿಎಸ್ಐ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶಾಲು ಮಾಲೆ ಹಾಕಿ ಸ್ವಾಗತಿಸಿದರು.  

ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಪೋಲಿಸರಿಗೆ ರಜೆಗಳೆ ಕಡಿಮೆ ಅವರು ಸಾರ್ವಜನಿಕರಿಗಾಗಿ ಹಗಲು ರಾತ್ರಿಯನ್ನದೆ ತನ್ನ ಕುಟುಂಬವನ್ನು ಗಣನೆಗೆ ತೆಗೆದುಕೊಳ್ಳದೆ ಸಾರ್ವಜನಿಕ ಕೆಲಸವನ್ನು ಮಾಡುತ್ತಾರೆ. ಅವರ ಕಠಿಣ ಸೇವೆಯಿಂದಲೆ ನಾವು ಮನೆಯಲ್ಲಿ ನೆಮ್ಮದಿಯಿಂದ ನಿದ್ರೆ ಮಾಡಲು ಸಾಧ್ಯ ಆದ್ದರಿಂದ ಪ್ರ್ರತಿಯೊಬ್ಬರು ಪೋಲಿಸ್ ಇಲಾಖೆಯನ್ನು ಗೌರವಿಸಿ ಕಾನೂನನ್ನು ಪಾಲಿಸಿ ಅಪರಾಧ ಮಹಾಮಾರಿ ಕೊರನಾ ವೈರಸ್ ರೋಗ ಎಲ್ಲಾ ಕಡೆ ಭೀತಿ ಹುಟ್ಟಿಸಿರುವುದರಿಂದ ಸುರಕ್ಷಿತವಾಗಿ ಬಣ್ಣದಾಟವನ್ನು ಆಡಬೇಕು ಮಹಾಮಾರಿ ಕೊರನಾ ವೈರಸ್ ರೋಗ ಎಲ್ಲಾ ಕಡೆ ಭೀತಿ ಹುಟ್ಟಿಸಿರುವುದರಿಂದ ಸುರಕ್ಷಿತವಾಗಿ ಬಣ್ಣದಾಟವನ್ನು ಆಡಬೇಕು ಮಹಾಮಾರಿ ಕೊರನಾ ವೈರಸ್ ರೋಗ ಎಲ್ಲಾ ಕಡೆ ಭೀತಿ ಹುಟ್ಟಿಸಿರುವುದರಿಂದ ಸುರಕ್ಷಿತವಾಗಿ ಬಣ್ಣದಾಟವನ್ನು ಆಡಬೇಕು  ಸಂಖ್ಯೆಯನ್ನು ಕಡಿಮೆ ಮಾಡಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೂಡಲಗಿ ಸಿಪಿಐ ವೆಂಕಟೇಶ ಮುರನ್ನಾಳ, ಗೋಕಾಕ ಸಿಪಿಐ ಗೋಪಾಲ ರಾಠೋಡ, ಧುಪದಾಳ ಗ್ರಾ. ಪಂ. ಅಧ್ಯಕ್ಷ ಎಸ್.ಐ ಬೆನವಾಡಿ, ರಾಮಣ್ಣ ಹುಕ್ಕೇರಿ, ಗಣೇಶ ಇಳಿಗೇರ, ಬಸರಾಜ ಖಾನಪ್ಪನ್ನವರ, ಮಾಜಿ ಜಿ. ಪಂ. ಸುಧೀರ ಜೋಡಟ್ಟಿ, ಅರಣ್ಯ ಇಲಾಖೆ ಆರ್ಎಫ್ಓ ಕೆ.ಎನ್.ವಣ್ಣೂರ, ಗೋಕಾಕ ರೋಟರಿ ಸಂಸ್ಥೆಯ ಅಧ್ಯಕ್ಷ ಸೋಮಶೇಖರ ಮಗದುಮ್ಮ, ಕಿರಣ ಡಮಾಮಗರ, ಗ್ರಾ.ಪಂ ಸದಸ್ಯರು. ಪ.ಪಂ ಸದಸ್ಯರು ಸೇರಿದಂತೆ ಅನೇಕರು ಇದ್ದರು.