ಈ ದಿನ ಸಚಿನ್ ಐಪಿಎಲ್ ನಲ್ಲಿ ಚೊಚ್ಚಲ ಶತಕ ದಾಖಲಿಸಿದ ದಿನ

ನವದೆಹಲಿ, ಏ 15,ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ 2011ರ ಈ ದಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ತಮ್ಮ ಚೊಚ್ಚಲ ಶತಕ ದಾಖಲಿಸಿದ್ದರು. ವಿಶೇಷ ಎಂದರೆ ಅವರ ಏಕೈಕ ಶತಕ ಇದೇ ಆಗಿದೆ.ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದ ತೆಂಡೂಲ್ಕರ್ 66 ಎಸೆತಗಳಲ್ಲಿ 100 ರನ್ ಗಳಿಸಿದ್ದರು.  ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಸಚಿನ್ ಅವರ ಶತಕದ ನೆರವಿನಿಂದ ಮುಂಬೈ ತಂಡ ನಿಗದಿತ 20 ಓವರ್ ಗಳಲ್ಲಿ ಕೊಚ್ಚಿ ಟಸ್ಕರ್ಸ್ ಕೇರಳ ವಿರುದ್ಧ 2 ವಿಕೆಟ್ ಗೆ 182 ರನ್ ಪೇರಿಸಿತ್ತು.
ಟಾಸ್ ಗೆದ್ದ ಕೆಟಿಕೆ ಮುಂಬೈ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿತು. ಮುಂಬೈ ಪರ ದಿವ್ಯ ಜಾಕೋಬ್ಸ್ ಮತ್ತು ತೆಂಡೂಲ್ಕರ್ ಮೊದಲ ವಿಕೆಟ್ ಗೆ 61 ರನ್ ಸೇರಿಸಿದರು. ನಂತರ ಪದಾರ್ಪಣೆ ಆಟಗಾರ ಅಂಬಾಟಿ ರಾಯುಡು (53, 33 ಎಸೆತ) ಜತೆಗೆ ದ್ವಿತೀಯ ವಿಕೆಟ್ ಗೆ 116 ರನ್ ಸೇರಿಸಿದ ಸಚಿನ್ ಶತಕದ ಸಂಭ್ರಮ ಆಚರಿಸಿದ್ದರು.ಈ ಗುರಿ ಬೆನ್ನತ್ತಿದ ಬ್ರೆಂಡನ್ ಮೆಕಲ್ಲಮ್ (81) ಮತ್ತು ಮಹೇಲ ಜಯವರ್ಧನೆ (56) ಮೊದಲ ವಿಕೆಟ್ ಗೆ 128 ರನ್ ಕೂಡಿಸಿದರು.  ಇವರ ಸಹಾಸದಿಂದ ಕೇರಳ ತಂಡ ಆರು ಎಸೆತಗಳು ಬಾಕಿ ಇರುವಂತೆಯೇ 8 ವಿಕೆಟ್ ಗಳ ಜಯ ದಾಖಲಿಸಿತು. ತೆಂಡಲ್ಕೂರ್ ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ 34, 83ರ ಸರಾಸರಿಯಲ್ಲಿ 2, 334 ರ್ ಗಳಿಸಿದ್ದಾರೆ. ಇದರಲ್ಲಿ 13 ಅರ್ಧಶತಕ ಮತ್ತು ಏಕೈಕ ಶತಕ ಸೇರಿದೆ.