ಪೀಟರ್‌ ಸಿಡ್ಲೆ ಎದುರಾಳಿ ತಂಡದಲ್ಲಿ ಸಚಿನ್‌, ಧೋನಿಗೆ ಸ್ಥಾನ

ನವದೆಹಲಿ, ಏ 22,ಕೊರೊನಾ ವೈರಸ್‌ನಿಂದಾಗಿ ಜಾಗತಿಕ ಎಲ್ಲಾ ಕ್ರೀಡಾಚಟುವಟಿಕೆಗಳು ರದ್ದಾಗಿವೆ. ಇದರ ನಡುವೆ ಮನೆಯಲ್ಲಿ ಕಾಲ ಕಳೆಯುತ್ತಿರುವ ಕ್ರಿಕೆಟ್‌ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಅದರಂತೆ ಆಸ್ಟ್ರೇಲಿಯಾ ತಂಡದ ಮಾಜಿ ವೇಗಿ ಪೀಟರ್‌ ಸಿಡ್ಲೆ ಅಂತಾರಾಷ್ಟ್ರೀಯ ಎದುರಾಳಿ ತಂಡವನ್ನು ಗುರುತಿಸಿದ್ದಾರೆ.ಇತ್ತೀಚೆಗಷ್ಟೇ ಪೀಟರ್‌ ಸಿಡ್ಲೆ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದರು. ಇದಕ್ಕೂ ಮುನ್ನ ಅವರು ಬಿಗ್‌ಬ್ಯಾಷ್ ಲೀಗ್‌ನಲ್ಲಿ ಅಡಿಲೇಡ್‌ ಸ್ಟ್ರೈಕರ್‌ ಪರ ಆಡಿದ್ದರು. ಸಿಡ್ಲೆ ಎಲ್ಲ ಮೂರು ಮಾದರಿಯಲ್ಲಿ ಒಟ್ಟು 243 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ.

ತಾನು ಆಯ್ಕೆ ಮಾಡಿರುವ ಅಂತಾರಾಷ್ಟ್ರೀಯ ಎದುರಾಳಿ ತಂಡದಲ್ಲಿ ಶ್ರೀಲಂಕಾ ಮಾಜಿ ಆಟಗಾರ ಕುಮಾರ ಸಂಗಕ್ಕಾರ ಅವರಿಗೆ ಬ್ಯಾಟಿಂಗ್‌ ಮೂರನೇ ಕ್ರಮಾಂಕ ನೀಡಿದ್ದಾರೆ. ಸಚಿನ್‌ ತೆಂಡೂಲ್ಕರ್‌ ನಾಲ್ಕನೇ ಕ್ರಮಾಂಕ ಹಾಗೂ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌ ಅವರಿಗೆ ಐದನೇ ಕ್ರಮಾಂಕ ನೀಡಿದ್ದಾರೆ.ಆಸ್ಟ್ರೇಲಿಯಾ ಮಾಜಿ ವೇಗಿಯ ಕಠಿಣ ಎದುರಾಳಿ ತಂಡದಲ್ಲಿ ಭಾರತದಿಂದ ಸಚಿನ್‌ ತೆಂಡೂಲ್ಕರ್‌ ಹಾಗೂ ಮಹೇಂದ್ರ ಸಿಂಗ್‌ ಧೋನಿ ಸ್ಥಾನ ನೀಡಿದ್ದಾರೆ. ಸಿಡ್ಲೆ ಎದುರಾಳಿ ಅಂತಿಮ 11: ಅಲ್‌ಸ್ಟೈರ್‌ ಕುಕ್‌, ಗ್ರೇಮ್ ಸ್ಮಿತ್‌, ಕುಮಾರ ಸಂಗಕ್ಕಾರ, ಸಚಿನ್‌ ತೆಂಡೂಲ್ಕರ್‌, ಎಬಿ ಡಿವಿಲಿಯರ್ಸ್‌, ಜಾಕ್‌ ಕಾಲಿಸ್‌, ಎಂ.ಎಸ್‌ ಧೋನಿ, ಸ್ಟುವರ್ಟ್‌ ಬ್ರಾಡ್‌, ಡೇಲ್‌ ಸ್ಟೇನ್‌, ರಂಗನಾ ಹೇರಾತ್, ಜೇಮ್ಸ್‌ ಅಂಡರ್ಸನ್‌ (ಬೆನ್‌ ಸ್ಟೋಕ್ಸ್‌ 12ನೇ ಆಟಗಾರ)