ಕ್ರೀಡಾ ಸಲಹಾ ಸಮಿತಿಯಿಂದ ಸಚಿನ್, ವಿಶ್ವನಾಥನ್ ವಜಾ

ನವದೆಹಲಿ, ಜ 21 :     ದೇಶದ ಕ್ರೀಡಾಭಿವೃದ್ಧಿಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರಚಿಸಿದ್ದ ಅಖಿಲ ಭಾರತ ಕ್ರೀಡಾ ಸಮಿತಿಯ ಸಲಹಾ ಮಂಡಳಿಯಿಂದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾಗೂ ಚೆಸ್ ದಂತಕತೆ ವಿಶ್ವನಾಥನ್ ಆನಂದ್ ಅವರನ್ನು ಕೈ ಬಿಡಲಾಗಿದೆ.

 ಹಿರಿಯ ಕ್ರಿಕೆಟಿಗ ಹರಭಜನ್ ಸಿಂಗ್ ಹಾಗೂ ಮಾಜಿ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಅವರನ್ನು ಹೊಸದಾಗಿ ಸಲಹಾ ಸಮಿತಿಗೆ ನೇಮಿಸಲಾಗಿದೆ. 2015ರ ಡಿಸೆಂಬರ್ 2015ರಲ್ಲಿಯೇ ಕೇಂದ್ರ ಕ್ರೀಡಾ ಸಚಿವ ಸರ್ಬಾನಂದ ಸೊನೊವಾಲ್ ಅವರ ನೇತೃತ್ವದಲ್ಲಿ ಕ್ರೀಡಾ ಸಲಹಾ ಸಮಿತಿಯನ್ನು ರಚಿಸಲಾಗಿತ್ತು.
 ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2015ರ ಡಿಸೆಂಬರ್ ತಿಂಗಳಿಂದ ಕಳೆದ ವರ್ಷ ಮೇ ತಿಂಗಳವರೆಗೂ ಕ್ರೀಡಾ ಸಲಹಾ ಸಮಿತಿಯ ಮೊದಲ ಅಧಿಕಾರವಧಿಯಾಗಿತ್ತು.ವಿಶ್ವನಾಥನ್ ಆನಂದ್ ಹಾಗೂ ಸಚಿನ್ ತೆಂಡೂಲ್ಕರ್ ಅವರನ್ನು ಇದೀಗ ಕೈ ಬಿಡಲಾಗಿದೆ. ಕ್ರಿಡಾ ಸಲಹಾ ಸಮಿತಿಯಲ್ಲಿ ಇದ್ದ 27 ರಷ್ಟಿದ್ದ ಸಂಖ್ಯೆ ಇದೀಗ 18 ಕ್ಕೆ ಇಳಿದಿದೆ.
 ಎರಡನೇ ಅವಧಿಗೆ ಸಮಿತಿಯ ಪರಿಷ್ಕರಿಸಿದ ಪಟ್ಟಿಯಲ್ಲಿ ಭಾರತ ಬ್ಯಾಡ್ಮಿಂಟನ್ ರಾಷ್ಟ್ರೀಯ ತಂಡದ ಮುಖ್ಯ ತರಬೇತುದಾರ ಪುಲ್ಲೆಲಾ ಗೋಪಿಚಂದ್ ಹಾಗೂ ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಭೈಜುಂಗ್ ಬುಟಿಯಾ ಅವರನ್ನು ಉಳಿಸಿಕೊಳ್ಳಲಾಗಿದೆ.
ಮೂಲಗಳ ಪ್ರಕಾರ ಸಚಿನ್ ಹಾಗೂ ವಿಶ್ವನಾಥನ್ ಆನಂದ್ ಅವರು ಹಲವು ಬಾರಿ ನಡೆದಿದ್ದ ಸಮಿತಿಯ ಸಭೆಗಳಿಗೆ ಬಹುತೇಕ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಕೈ ಬಿಡಲಾಗಿದೆ.
 ಸಮಿತಿಯ ನೂತನ ಸದಸ್ಯರು: ಲಿಂಬಾ ರಾಮ್ (ಆರ್ಚರಿ), ಪಿ.ಟಿ ಉಷಾ (ಅಥ್ಲೆಟಿಕ್ಸ್), ಬಚೇಂದ್ರಿ ಪಾಲ್ (ಮೌಂಟೆನಿಂಗ್), ದೀಪಾ ಮಲ್ಲಿಕ್ (ಪ್ಯಾರಾ ಅಥ್ಲಿಟ್), ಅಂಜಲಿ ಭಾಗವತ್ (ಶೂಟಿಂಗ್), ರೆನೆಡಿ ಸಿಂಗ್ (ಫುಟ್ಬಾಲ್) ಹಾಗೂ ಯೋಗೇಶ್ವರ ದತ್ತ (ಕುಸ್ತಿ).