ಮಧುರೈ, ಫೆಬ್ರವರಿ 17, ಪೌರತ್ವ ಕಾಯಿದೆ ವಿರುದ್ಧ ಮಾರ್ಚ್ 1 ಮತ್ತು 23 ರ ನಡುವೆ ಪಕ್ಷ ಆಯೋಜಿಸಿರುವ ರಾಷ್ಟ್ರವ್ಯಾಪಿ ಮನೆ-ಮನೆ-ಮನೆ ಅಭಿಯಾನದಲ್ಲಿ ಜನತೆ ಸಕ್ರೀಯವಾಗಿ ಭಾಗವಹಿಸಬೇಕೆಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಕಳಕಳಿಯ ಮನವಿ ಮಾಡಿದ್ದಾರೆ. ತಿದ್ದುಪಡಿ ಕಾಯ್ದೆ (ಸಿಎಎ), ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್ಆರ್ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್).ವಿರುದ್ಧದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಜನರನ್ನು ರಾಷ್ಟ್ರ ವಿರೋಧಿ ಎಂದು ಜರಿಯುತ್ತಿದ್ದಾರೆ ಮತ್ತು ಮತ ಬ್ಯಾಂಕ್ ರಾಜಕಾರಣಕ್ಕೆ ಧಕ್ಕೆ ತಂದಿದ್ದಾರೆ ಎಂದು ದೂರಿದರು. ಬಿಜೆಪಿ ನಾಯಕರೇ ಕಟ್ಟಾ ಹಿಂದುತ್ವ ಮತ ಬ್ಯಾಂಕ್ ಅನ್ನು ರಾಜಕಾರಣದಲ್ಲಿ ಮುಳುಗಿದ್ದಾರೆ ಅವ್ಯವಸ್ಥೆ ಮತ್ತು ದ್ವೇಷದ ಮೂಲಕ ದೇಶ ವಿಭಜನೆಗೆ ಹೊರಟಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಈ ದೊಡ್ಡ ಪ್ರಮಾಣದ ಪಿತೂರಿಯಿಂದ ಮೊದಲು ರಾಷ್ಟ್ರವನ್ನು ಉಳಿಸಲು ನಾವು ಒಟ್ಟಾಗಿ ಕೆಲಸ ಮಾಡಬೇಕು, ಹೋರಾಡಬೇಕು ಉತ್ತಮ ರಾಷ್ಟ್ರವನ್ನು ನಿರ್ಮಿಸುವತ್ತ ಕೆಲಸ ಮಾಡಬೇಕಿದೆ ಇದಕ್ಕೆ ಜನರ ಸಹಕಾರ ಬಹಳ ಮುಖ್ಯವಾಗಿದೆ ಎಂದು ಅವರು ಹೇಳಿದರು.ಎನ್ಪಿಆರ್ನ ಭಾಗವಾಗಿ ಪ್ರಶ್ನೆಗಳಿಗೆ ಉತ್ತರಿಸುವುದನ್ನು ನಿರಾಕರಿಸುವುದರಿಂದ ಮತ್ತು ಎನ್ಆರ್ಸಿಗೆ ದಾಖಲೆ ತೋರಿಸಲು ನಿರಾಕರಿಸುವುದರಿಂದ ದೇಶದ ಜನರನ್ನು ಭಾರತದ ನಾಗರಿಕರಲ್ಲ ಎಂಬುದನ್ನು ಘೋಷಣೆ ಮಾಡಲಿ ಎಂದು ಕೇಂದ್ರಕ್ಕೆ ಸವಾಲು ಹಾಕಿದರು.ಎನ್ಆರ್ಸಿ ಅನುಷ್ಠಾನಕ್ಕೆ ಇದು ಆಧಾರವಾಗಿರುವ ಕಾರಣ ಏಪ್ರಿಲ್ 1 ರಿಂದ ಪ್ರಾರಂಭವಾಗಲಿರುವ ಎನ್ಪಿಆರ್ಗೆ ವಿವರಗಳನ್ನು ನೀಡಬಾರದು ಮತ್ತು ಅಧಿಕಾರಿಗಳಿಗೆ ಯಾವುದೇ ದಾಖಲೆಗಳನ್ನು ತೋರಿಸಬಾರದು ಎಂದೂ ಜನತೆಗೆ ಅವರು ಮನವಿ ಮಾಡಿದರು.
ಸಿಎಎ ಜಾರಿಗೆ ತರುವುದಿಲ್ಲ ಎಂದು ಘೋಷಿಸಿರುವ ಬಿಜೆಪಿಯೇತರ ಆಡಳಿತದ ರಾಜ್ಯಗಳು ಮತ್ತು ಕೇಂದ್ರ ಪ್ರದೇಶಗಳ ಎಲ್ಲಾ 13 ಮುಖ್ಯಮಂತ್ರಿಗಳು ಎನ್ಪಿಆರ್ಗೆ ಸಹ ಅವಕಾಶ ನೀಡಬಾರದು ಎಂದು ಅವರು ಆಗ್ರಹಿಸಿದರು.ಬಿಜೆಪಿ ಆಳ್ವಿಕೆಯ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಅಸ್ಸಾಂನಲ್ಲಿ ಕ್ರಮವಾಗಿ 21 ಜನರು ಮತ್ತು ಐದು ಜನರು ಸಾವನ್ನಪ್ಪಿದ್ದಾರೆ ಎಂದು ಸಿಎಎ ವಿರೋಧಿ ಪ್ರತಿಭಟನೆಗಳನ್ನು ಪೊಲೀಸರ ಸಹಾಯದಿಂದ ಕ್ರೂರವಾಗಿ ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿದರು. ತಮಿಳುನಾಡಿನಲ್ಲಿ, ಶಾಂತಿಯುತ ಪ್ರತಿಭಟನೆಯ ವಿರುದ್ಧ ಪೊಲೀಸರು ಹೇಗೆ ಕ್ರೂರ ವಾಗಿ ವರ್ತಿಸಿದ್ದಾರೆ ಎಂಬುದು ಜನರಿಗೆ ಒಂದೆರಡು ದಿನಗಳ ಹಿಂದೆಯೇ ಗೊತ್ತಾಗಿದೆ ಎಂದರು. ಅತ್ಯಂತ ಕ್ರೂರ, ಪೊಲೀಸ್ ಭಯೋತ್ಪಾದನೆ ದಬ್ಬಾಳಿಕೆ ಮೂಲಕ ಎಲ್ಲಾ ಶಾಂತಿಯುತ ಪ್ರತಿಭಟನೆ ತಡೆಯಲು ಕೇಂದ್ರ ಬಯಸುತ್ತಿದೆಎಂದೂ ಪ್ರತಿಹಂತದಲ್ಲೂ ತರಾಟೆಗೆ ತೆಗೆದುಕೊಂಡರು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಉದ್ದೇಶಿತ ಭೇಟಿಯನ್ನು ಉಲ್ಲೇಖಿಸಿದ ಟ್ರಂಪ್ ಎಲ್ಲಿಗೆ ಬಂದರೂ, ಸಿಪಿಐ-ಎಂ ಪ್ರತಿಭಟಿಸಲಿದೆ ಎಂದೂ ಯೆಚೂರಿ ಸ್ಪಷ್ಟಪಡಿಸಿದರು.