ಬೆಂಗಳೂರು, ಡಿ.17: ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಸೂಪರ್ ಡಿವಿಜನ್ ಟೂರ್ನಿಯಲ್ಲಿ ಬಿಎಫ್ಸಿ 3-0ಯಿಂದ ಆದಾಯ ತೆರಿಗೆ ಇಲಾಖೆಯನ್ನು ಮಣಿಸಿತು.
ಅಶೋಕ ನಗರದ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬಿಎಫ್ ಸಿ ಪರ ಲಾಲ್ತಾಂಗ್ಲಿನಾ, ಅದ್ವೈತ್ ಶಿಂಧೆ -69 ಇದುಮಂಡ್ ಲಾಲ್ರಿಂಡಿಕಾ ಗೋಲು ಬಾರಿಸಿ ಜಯದಲ್ಲಿ ಮಿಂಚಿದರು. ಕೊನೆಯ ಕ್ಷಣದಲ್ಲಿ ಗೋಲು ಬಾರಿಸಿ ಅಂತರವನ್ನು ಸಮನಾಗಿಸುವ ಎದುರಾಳಿ ತಂಡದ ಆಸೆ ಫಲಿಸಲಿಲ್ಲ.
ಇನ್ನೊಂದು ಪಂದ್ಯದಲ್ಲಿ ಬೆಂಗಳೂರು ಡ್ರಿಮ್ ಯುನೈಟೆಡ್ ಎಫ್.ಸಿ 0-0 ಗೋಲುಗಳಿಂದ ಬೆಂಗಳೂರು ಈಗಲ್ಸ್ ವಿರುದ್ಧ ಡ್ರಾ