ಪತ್ನಿಯ ಆಟ ನೋಡಲಿರುವ ಸ್ಟಾರ್ಕ್

ಮೆಲ್ಬೋರ್ನ್, ಮಾ.7, ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಫೈನಲ್ನಲ್ಲಿ ಮೈದಾನಕ್ಕೆ ಇಳಿಯದೆ, ಮೆಲ್ಬೋರ್ನ್ನಲ್ಲಿ ಭಾನುವಾರ ನಡೆಯಲಿರುವ ಮಹಿಳಾ ಟಿ 20 ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಹುರಿದುಂಬಿಸಲಿದ್ದಾರೆ.   ಆಸ್ಟ್ರೇಲಿಯಾ ತರಬೇತುದಾರ ಜಸ್ಟಿನ್ ಲ್ಯಾಂಗರ್ ಈ ಬಗ್ಗೆ ಮಾಹಿತಿ ನೀಡಿದ್ದು, "ವಿಶ್ವಕಪ್ ಫೈನಲ್ನಲ್ಲಿ ಸ್ಟಾರ್ಕ್ ಅವರ ಪತ್ನಿ ಹೀಲಿಯ ಆಟವನ್ನು ನೋಡಲು ಸ್ಟಾರ್ಕ್ ಅವರಿಗೆ ಸುವರ್ಣ ಅವಕಾಶ. ಹೀಗಾಗಿ ಅವರನ್ನು ಫೈನಲ್ ಪಂದ್ಯ ವೀಕ್ಷಿಸಲು ಕಳುಹಿಸುತ್ತಿದ್ದೇವೆ. ಅದ್ಭುತ್ ಕ್ಷಣವನ್ನು ಸ್ಟಾರ್ಕ್ ಕಣ್ಣು ತುಂಬಿಕೊಳ್ಳಲಿ” ಎಂದಿದ್ದಾರೆ.   ಸದ್ಯ ಸ್ಟಾರ್ಕ್ ಆಸೀಸ್ ಪರ ಮೂರು ಮಾದರಿಗಳಲ್ಲಿ ಆಡುತ್ತಿದ್ದು ಈ ಕಾರಣದಿಂದಾಗಿಯೂ ಸ್ಟಾರ್ಕ್ ಅವರಿಗೆ ವಿಶ್ರಾಂತಿ ಸಿಗಲಿದೆ ಎಂದಿದ್ದಾರೆ.