ಆನ್‌ಲೈನ್ ತರಗತಿ ವಿರೋಧಿಸಿ ಎಸ್‌ಎಸ್‌ಯುಐ ಪ್ರತಿಭಟನೆ

ಬೆಂಗಳೂರು, ಜೂ.6, ಸಿಲೆಬಸ್‌ ಮುಗಿಯುವವರೆಗೂ ಪರೀಕ್ಷೆ ನಡೆಸುವುದು ಬೇಡ ಎಂದು ಎನ್‌ಎಸ್‌ಯುಐ ಕಾರ್ಯಕರ್ತರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.ಕಾಂಗ್ರೆಸ್  ಭವನದ ಮುಂಭಾಗ ಪ್ರತಿಭಟನೆ‌ ನಡೆಸಿದ ಪ್ರತಿಭಟನಕಾರರು, ಕಾಲೇಜುಗಳು ವಿದ್ಯಾರ್ಥಿಗಳ  ಶೋಷಣೆಗಿಳಿದಿವೆ. ಎಂಜಿನಿಯರ್, ಪದವಿ ವಿದ್ಯಾರ್ಥಿಗಳಿಗೆ ಕಿರುಕುಳ ನಡೆಯುತ್ತಿದೆ. ಶುಲ್ಕ  ಸಂಗ್ರಹ ನೆಪದಲ್ಲಿ  ಕಾಲೇಜುಗಳು ವಿದ್ಯಾರ್ಥಿಗಳ ಜೀವನ ಹಾಳು ಮಾಡುತ್ತಿದ್ದಾರೆ. ಬ್ಲಾಕ್  ಲಾಗ್ ಉಳಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಹೇಳುವ ಸರ್ಕಾರ ಸಿಲೆಬಸ್‌ನ್ನು ಆರು  ತಿಂಗಳು ಮುಂದೂಡಲಿ. ಆನ್‌ ಲೈನ್‌ನಲ್ಲಿ 14 ಸಿಲೆಬಸ್ ಮುಗಿಸುವುದು ಕಷ್ಟ.ಸಿಲೆಬಸ್  ಮುಗಿಯುವವರೆಗೂ ಪರೀಕ್ಷೆ ನಡೆಸುವುದು ಬೇಡ. ಸಿಲೆಬಸ್ ಮುಗಿದ ಬಳಿಕ ಪರೀಕ್ಷೆ ಮಾಡಲಿ. ಆನ್  ಲೈನ್ ಕ್ಲಾಸ್ ಗಳು ಸರಿಯಾಗಿ ಅರ್ಥ ಆಗುತ್ತಿಲ್ಲ ಎಂದು ಎನ್‌ಎಸ್‌ಯುಐ ಘಟಕದ  ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ  ಅತಿಹೆಚ್ಚು ಬಡವರೇ ಇದ್ದಾರೆ. ಎಲ್ಲರೂ ಲ್ಯಾಪ್ ಟಾಪ್ ಬಳಸಲು ಸಾಧ್ಯವಿಲ್ಲ. ಇನ್ನು ಕೆಲವರ  ಬಳಿ ಮೊಬೈಲ್ ಗಳೇ ಇಲ್ಲ. ಮರ ಹತ್ತಿ, ಬೆಟ್ಟ ಹತ್ತಿ ನೆಟ್ ವರ್ಕ್ ಗೆ ಪರದಾಡುತ್ತಿರುವ  ಇಂತಹ ಸಂದರ್ಭದಲ್ಲಿ ಆನ್ ಲೈನ್ ಕ್ಲಾಸ್ ಆಗಲೀ ಆನ್ ಲೈನ್ ಪರೀಕ್ಷೆಯಾಗಲೀ ಸಾಧ್ಯವಿಲ್ಲ‌.  ಸರ್ಕಾರ ಕೂಡಲೇ ಈ ಬಗ್ಗೆ ಶಿಕ್ಷಣ ತಜ್ಞರ ಸಭೆ ಕರೆದು ಚರ್ಚಿಸಿ ನಂತರ ಉತ್ತಮ ನಿರ್ಧಾರ ತೆಗೆದುಕೊಳ್ಳಬೇಕು‌. ಇಲ್ಲದಿದ್ದಲ್ಲಿ ಹೋರಾಟ ಮುಂದುವರಿಯಲಿದೆ ಎಂದು ಎನ್ ಎಸ್ ಯುಐ ಘಟಕದಿಂದ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಯಿತು.