ಲೋಕದರ್ಶನ ವರದಿ
ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿ
ಸಂಬರಗಿ 19: ಮಾರ್ಚ 21ರಂದು ನಡೆಯುತ್ತಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮದಭಾವಿ ಕೇಂದ್ರದಲ್ಲಿ 446 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷೆ ಅವಧಿಯಲ್ಲಿ ಕೆಂದ್ರದ 200 ಮೀಟರ್ ಅಂತರವರೆಗೆ ಜಿಲ್ಲಾಧಿಕಾರಿ ಅದೇಶ ಪ್ರಕಾರ ವಿದ್ಯಾರ್ಥಿ ಹಾಗೂ ಶಿಕ್ಷಕರು ಹೊರತುಪಡಿಸಿ ಖಾಸಗಿ ಯಾವುದೇ ವ್ಯಕ್ತಿಗಳಿಗೆ ಪ್ರವೇಶ ನಿರ್ಬಂಧ ಇರುತ್ತದೆ. ನಿಯಮದ ಉಲ್ಲಂಘಣೆ ಮಾಡಿದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮದಭಾವಿ ಕೇಂದ್ರ ಪರೀಕ್ಷೆ ಮುಖ್ಯಸ್ಥ ಪಿ.ಎಮ್. ಬಡಿಗೇರ ಸ್ಪಷ್ಟ ಪಡಿಸಿದರು.
ಈ ಪರೀಕ್ಷೆ ಕೇಂದ್ರಕ್ಕೆ ಎಸ್‌ಜಿಎಸ್ ಪ್ರೌಢ ಶಾಲೆ ಮದಭಾವಿ, ಪಿ.ವ್ಹಿ.ಪಿ. ಪ್ರೌಢ ಶಾಲೆ, ಮದಭಾವಿ, ಸರ್ಕಾರಿ ಪ್ರೌಢ ಶಾಲೆ ಹಣಮಾಪೂರ, ಮರಾರ್ಜಿ ವಸತಿ ಶಾಲೆ ಮದಭಾವಿ, ಸಿದ್ದೇಶ್ವರ ಪ್ರೌಢ ಶಾಲೆ, ಬಸವೇಶ್ವರ ಪ್ರೌಢ ಶಾಲೆ ಮದಭಾವಿ, ಸರ್ಕಾರಿ ಪ್ರೌಢ ಶಾಲೆ ತೇವರಟ್ಟಿ ಈ ಎಲ್ಲ ಶಾಲೆಯ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಳ್ಳುತ್ತಾರೆ. ಪರೀಕ್ಷಾ ಅವಧಿಯಲ್ಲಿ ಖಾಸಗಿ ವ್ಯಕ್ತಿಗೆ ಪ್ರವೇಶ ನಿರ್ಬಂಧ, ಪ್ರರೀಕ್ಷಾ ಕೇಂದ್ರ ಸುತ್ತಮುತ್ತ ಎಲ್ಲಾ ಕಡೆ ಸಿ.ಸಿ. ಕ್ಯಾಮರಾ ಅಳವಡಿಸಲಾಗಿದೆ.