ಪುಣೆ 19: ಖಾಸಗಿ ಕಂಪೆನಿಯ ವಾಹನಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ನಾಲ್ವರು ಸಜೀವ ದಹನವಾಗಿರುವ ಘಟನೆ ಪುಣೆಯ ಹಿಂಜೆವಾಡಿ ಐಟಿ ಪಾರ್ಕ್ ಪ್ರದೇಶದ ಬಳಿ ಬುಧವಾರ ಮುಂಜಾನೆ ನಡೆದಿದೆ.
ಬುಧವಾರ ಬೆಳಿಗ್ಗೆ 7.30 ರ ಸುಮಾರಿಗೆ ಐಟಿ ಪಾರ್ಕ್‌ನ ಹಂತ1 ರಲ್ಲಿರುವ ಹಿಂಜೇವಾಡಿ ಇಂಡಸ್ಟ್ರೀಸ್ ಅಸೋಸಿಯೇಷನ್ ಕಚೇರಿಯ ಬಳಿ ಈ ಘಟನೆ ನಡೆದಿದೆ.
ಮಿನಿ ಬಸ್ಸಿನೊಳಗೆ ಒಟ್ಟು 12 ಮಂದಿ ಉದ್ಯೋಗಿಗಳಿದ್ದರು. ವ್ಯೋಮಾ ಗ್ರಾಫಿಕ್ಸ್‌ನ ಉದ್ಯೋಗಿಗಳು ವರ್ಜೆಯಿಂದ ಹಿಂಜೆವಾಡಿಗೆ ತೆರಳುತ್ತಿದ್ದರು. ಈ ವೇಳೆ ವಾಹನದಲ್ಲಿ ಚಾಲಕನ ಸೀಟಿನ ಕೆಳಗೆ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಚಾಲಕ ವಾಹನದಿಂದ ಹೊರಗೆ ಹಾರಿದ್ದಾನೆ. ಈ ವೇಳೆ ಪ್ರಾಣ ಭಯದಿಂದ ಹಿಂಬದಿ ಕೂತಿದ್ದ ಎಂಟು ಪ್ರಯಾಣಿಕರು ತುರ್ತು ನಿರ್ಗಮನ ಬಾಗಿಲಿನಿಂದ ಹೊರಗೆ ಹಾರಿದ್ದಾರೆ. ಮತ್ತೊಂದು ತುರ್ತು ನಿರ್ಗಮನ ಬಾಗಿಲು ಓಪನ್ ಆಗದ ಪರಿಣಾಮ ನಾಲ್ವರು ಪ್ರಾಣ ವಾಹನದಲ್ಲೇ ಸುಟ್ಟು ಕರಕಲಾಗಿದ್ದಾರೆ.
ಮೃತರನ್ನು ಸುಭಾಷ್ ಭೋಸಲೆ, ಶಂಕರ ಶಿಂಧೆ, ಗುರುದಾಸ್ ಲೋಕರೆ ಮತ್ತು ರಾಜು ಚವ್ಹಾಣ ಎಂದು ಗುರುತಿಸಿಲಾಗಿದೆ.