ದರೋಜಿ ಬೆಟ್ಟದಲ್ಲಿ ಆಕಸ್ಮಿಕ ಬೆಂಕಿ: ಪ್ರಾಣಿ, ಪಕ್ಷಿಗಳು ಪ್ರಾಣಾಪಾಯದಿಂದ ಪಾರು

Accidental fire in Daroji Hill: Animals, birds escape danger...

ಕಂಪ್ಲಿ 19: ತಾಲೂಕು ಸಮೀದ ದರೋಜಿ ಕೆರೆ ಬಳಿಯಲ್ಲಿರುವ ಗುಡ್ಡಗಾಡು ಪ್ರದೇಶಕ್ಕೆ ಇತ್ತೀಚೆಗೆ ಆಕಸ್ಮಿಕವಾಗಿ ಬೆಂಕಿ ತಲುಗಿದೆ. ಇಲ್ಲಿನ ಬೆಂಕಿ ಅವಘಟದಿಂದಾಗಿ ಪಕ್ಷಿ ಮತ್ತು ಪ್ರಾಣಿಗಳಿಗೆ ಜೀವ ಭಯ ಕಾಡುವಂತಾಗಿದೆ. ಇಲ್ಲಿನ ಬೆಟ್ಟದಲ್ಲಿ ಧಗಧಗಿರುವ ಬೆಂಕಿಯ ನಡುವೆ ಪ್ರಾಣಿ, ಪಕ್ಷಿಗಳು ಪ್ರಾಣಾಪಾಯದಿಂದ ಪಾರಾಗಿವೆ. 

 ಅತಿ ದೊಡ್ಡ ಬೆಟ್ಟ ದರೋಜಿ ಬೆಟ್ಟದಲ್ಲಿ ಸೋಮವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದೆ. ಈ ಬೆಟ್ಟದಲ್ಲಿ 400 ಕ್ಕೂ ಹೆಚ್ಚು ಕರಡಿಗಳು, ವಿವಿಧ ರೀತಿಯ ಪ್ರಾಣಿಗಳು ಮತ್ತು ಪಕ್ಷಿಗಳು ವಾಸಿಸುತ್ತವೆ. ಆಕಸ್ಮಿಕ ಬೆಂಕಿಗೆ ಹಲವು ಮರಗಳು ಸುಟ್ಟು ಕರಕಲಾಗಿವೆ.  

ಘಟನಾ ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಪರೀಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳದವರು ಮಧ್ಯರಾತ್ರಿಯಿಂದಲೇ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ವನ್ಯಜೀವಿಗಳಿಗೆ ಯಾವುದೇ ಅಪಾಯವಿಲ್ಲ. 300ಕ್ಕೂ ಹೆಚ್ಚು ಕರಡಿಗಳು ಸೇರಿದಂತೆ ವಿವಿಧ ವನ್ಯಜೀವಿಗಳ ಹಾಗೂ ಪಕ್ಷಿಗಳ ವಾಸಸ್ಥಾನ ದರೋಜಿ ಗುಡ್ಡವಾಗಿದೆ. ಇತ್ತೀಚೆಗೆ ರಾತ್ರಿ ಸಮಯದಲ್ಲಿ ಗುಡ್ಡದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿಯೇ ಗುಡ್ಡದ ತುಂಬೆಲ್ಲಾ ಆವರಿಸಿಕೊಂಡಿದೆ.  

ಕರಡಿಗಳು ಸೇರಿದಂತೆ ವಿವಿಧ ವನ್ಯ ಜೀವಿಗಳು ಹಾಗೂ ಪಕ್ಷಿಗಳು ವಾಸವಾಗಿದ್ದು, ಬೆಂಕಿ ಕೆನ್ನಾಲಿಗೆಯಿಂದ ಕಾಡು ಪ್ರಾಣಿಗಳಿಗೆ ಅಪಾಯದ ಆತಂಕ ಎದುರಾಗಿತ್ತು. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ, ಪರೀಶೀಲನೆ ನಡೆಸಿದ್ದಾರೆ. ತಡರಾತ್ರಿಯಿಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ತೊಡಗಿದ್ದು, ಕಾರ್ಯಾಚರಣೆ ಯಶಸ್ವಿಯಾಗಿದೆ. ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದ್ದು, ಯಾವುದೇ ವನ್ಯಜೀವಿಗಳ ಪ್ರಾಣಕ್ಕೆ ಹಾನಿಯಾಗಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.