ಲಕ್ನೋ 19: ಪ್ರಿಯರಕನ ಜತೆ ಸೇರಿ ಪತ್ನಿಯೇ ನೌಕಾಧಿಕಾರಿ ಗಂಡನ ಕೊಂದು ದೇಹವನ್ನು ತುಂಡರಿಸಿ ಡ್ರಮ್ ನಲ್ಲಿ ಹಾಕಿ ಸಿಮೆಂಟ್ ಸೀಲ್ ಮಾಡಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ..
ಸೌರಭ್ ಇತ್ತೀಚೆಗಷ್ಟೇ ಲಂಡನ್‌ನಿಂದ ಮೀರತ್‌ಗೆ ಬಂದಿದ್ದ. 2016ರಲ್ಲಿ ಪ್ರೀತಿಸಿ ಮುಸ್ಕಾನ್ ಎನ್ನುವವಳ ಜತೆ ಸೌರಭ್ ವಿವಾಹವಾಗಿದ್ದ. ಮೊದಲು ಮರ್ಚೆಂಟ್ ನೇವಿಯಲ್ಲಿ ಕೆಲಸ ಮಾಡುತ್ತಿದ್ದ ಸೌರಭ್ ಆ ಬಳಿಕ ಲಂಡನ್‌ಗೆ ತೆರಳಿ ಮಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಇತ್ತ ಮುಸ್ಕಾನ್ ತನ್ನ 5 ವರ್ಷದ ಮಗಳ ಜತೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು.
ಗಂಡ ಲಂಡನ್‌ನಲ್ಲಿದ್ದಾಗ ಇತ್ತ ಮುಸ್ಕಾನ್ ಗೆ ಸಾಹಿಲ್ ಶುಕ್ಲಾ ಎನ್ನುವವನ ಜತೆ ಸಂಬಂಧ ಇಟ್ಟುಕೊಂಡಿದ್ದಳು. ಲಂಡನ್‌ನಿಂದ ತನ್ನ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಐದು ವರ್ಷದ ಮಗಳು ಪಿಹುಳ ಹುಟ್ಟುಹಬ್ಬ ಆಚರಿಸಲು ಸೌರಭ್ ಕುಮಾರ್ ಮೀರತ್‌ಗೆ ಬಂದಿದ್ದ.
ಇದೇ ವೇಳೆ ಮುಸ್ಕಾನ್ ಪ್ರಿಯಕರ ಸಾಹಿಲ್ ಜತೆ ಸೇರಿ ಸೌರಭ್‌ನ ಪ್ರಾಣ ತೆಗೆಯಲು ಪ್ಲ್ಯಾನ್ ಮಾಡಿದ್ದಾರೆ. ಮಾರ್ಚ್ 4 ರಂದು ಸೌರಭ್‌ನ ಎದೆಗೆ ಚಾಕುವಿನಿಂದ ಚುಚ್ಚಿ ಆತನ ಪ್ರಾಣವನ್ನು ತೆಗೆಯಲಾಗಿದೆ.
ದೇಹವನ್ನು ಸೀಳಿ ಅದನ್ನು 15 ತುಂಡುಗಳಾಗಿ ಕತ್ತ*ರಿಸಿ, ಪ್ಲ್ಯಾಸ್ಟಿಕ್ ಚೀಲದಲ್ಲಿ ತುಂಬಿದ್ದಾರೆ. ಆ ನಂತರ ಅದನ್ನು ಡ್ರಮ್‌ನಲ್ಲಿ ಹಾಕಿದ್ದಾರೆ. ಡ್ರಮ್‌ಗೆ ಸಿಮೆಂಟ್ ತುಂಬಿಸಿದ್ದಾರೆ. ಕೃತ್ಯ ನಡೆದ ನಂತರ ಮುಸ್ಕಾನ್ ಸಾಹಿಲ್ ಜೊತೆ ಪರಾರಿಯಾಗಿದ್ದಾಳೆ. ಮಗಳನ್ನು ತಾಯಿ ಮನೆಯಲ್ಲಿ ಬಿಟ್ಟು ಹೋಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.