ಎಸ್‌ಎಸ್‌ಎಲ್‌ಸಿ ಪರೀಕ್ಷೆ: ವೀಕ್ಷಣಾ ಜಾಗೃತಾ ದಳ ನೇಮಕ

SSLC exam: Observation and vigilance team appointed

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ವೀಕ್ಷಣಾ ಜಾಗೃತಾ ದಳ ನೇಮಕ 

ಬಳ್ಳಾರಿ 20: ಮಾ.21 ರಿಂದ ಏ.04 ರ ವರೆಗೆ ಜಿಲ್ಲೆಯ 64 ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆ-1 ನಡೆಯಲಿದ್ದು, ಆಯಾ ಕೇಂದ್ರಗಳಿಗೆ ವಿವಿಧ ಇಲಾಖಾ ಅಧಿಕಾರಿಗಳನ್ನೊಳಗೊಂಡ ವೀಕ್ಷಣಾ ಜಾಗೃತಾ ದಳ ರಚಿಸಿ ವೀಕ್ಷಕರನ್ನಾಗಿ ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ. 

ಜಿಲ್ಲೆಯ ಆಯಾ ತಾಲ್ಲೂಕುಗಳಲ್ಲಿನ ಪರೀಕ್ಷಾ ಕೇಂದ್ರಗಳಿಗೆ ನೇಮಿಸಿರುವ ಅಧಿಕಾರಿಗಳು ಮಾ.21 ರಿಂದ ಏ.04 ರ ವರೆಗೆ ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ದಿನಗಳಂದು ಪರೀಕ್ಷೆ ಪ್ರಾರಂಭವಾಗುವ ಸಮಯದಿಂದ ಮುಕ್ತಾಯದ ವರೆಗೆ ಕಡ್ಡಾಯವಾಗಿ 4-5 ಪರೀಕ್ಷಾ ಕೇಂದ್ರಗಳಿಗೆ ಪಾಳಿ ಪದ್ಧತಿಯಲ್ಲಿ ಭೇಟಿ ನೀಡಿ ಪರೀಕ್ಷೆಯು ಪಾರದರ್ಶಕವಾಗಿ ನಡೆಯುತ್ತಿರುವ ಕುರಿತು ಪರೀಶೀಲಿಸುವರು. 

ವೇಳಾ ಪಟ್ಟಿಯ ಅನುಸಾರ ಪರೀಶೀಲಿಸಿದ ಕಾರ್ಯದ ಕುರಿತು ವರದಿಯನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.