ಎಸ್‌.ಎಸ್‌.ಎಲ್‌.ಸಿ ವಾರ್ಷಿಕ ಪರೀಕ್ಷೆ-1

SSLC Annual Exam-1

ಜಿಲ್ಲೆಯಲ್ಲಿ 28,666 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ; 106 ಕೇಂದ್ರಗಳಲ್ಲಿ ಪರೀಕ್ಷೆ; ಸೂಸುತ್ರ ಪರೀಕ್ಷೆಗೆ ಸಿದ್ದತೆ ಪೂರ್ಣ, ವಿದ್ಯಾರ್ಥಿಗಳ ಸ್ವಾಗತಕ್ಕೆ ವ್ಯವಸ್ಥೆ 

ಧಾರವಾಡ ಮಾರ್ಚ್‌ 20: 2024-25 ಸಾಲಿನ ಎಸ್‌.ಎಸ್‌.ಎಲ್‌.ಸಿ. ವಾರ್ಷಿಕ ಪರೀಕ್ಷೆ-1  ಮಾರ್ಚ್‌ 21 ರಿಂದ ಏಪ್ರಿಲ್ 4 ರವರೆಗೆ ಜರುಗಲಿವೆ. ಈ ಪರೀಕ್ಷೆಯಲ್ಲಿ 14,502 ಗಂಡು ಮಕ್ಕಳು ಮತ್ತು 14,164 ಹೆಣ್ಣು ಮಕ್ಕಳು ಒಟ್ಟು 28,666 ವಿದ್ಯಾರ್ಥಿಗಳು ಹಾಜರಾಗುವರು. ಜಿಲ್ಲೆಯ 106 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ಜರುಗಲಿವೆ.  

ಪರೀಕ್ಷೆಗೆ ನೊಂದಾಯಿಸಿದ ವಿದ್ಯಾರ್ಥಿಗಳ ಸಂಖ್ಯೆ: ಹುಬ್ಬಳ್ಳಿ ಶಹರ 8,492, ಧಾರವಾಡ ಶಹರ 5,343, ಧಾರವಾಡ ತಾಲೂಕು 3,871, ಹುಬ್ಬಳ್ಳಿ ತಾಲೂಕ 3,828, ಕಲಘಟಗಿ 2,577, ಕುಂದಗೋಳ 2,052 ಹಾಗೂ ನವಲಗುಂದ 2,503 ಸೇರಿದಂತೆ ಒಟ್ಟಾರೆಯಾಗಿ 28,666 ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ  ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದಾರೆ.   

ಪರೀಕ್ಷೆಗೆ ನೊಂದಾಯಿಸಿದ ಬಾಹ್ಯ ವಿದ್ಯಾರ್ಥಿಗಳ ಸಂಖ್ಯೆ: ಹುಬ್ಬಳ್ಳಿ ಶಹರ 128, ಧಾರವಾಡ ಶಹರ 128,  ಧಾರವಾಡ ತಾಲೂಕ 103, ಹುಬ್ಬಳ್ಳಿ ತಾಲೂಕ 49, ಕಲಘಟಗಿ 47, ಕುಂದಗೋಳ 20, ನವಲಗುಂದ 36, ಒಟ್ಟು 511 ಬಾಹ್ಯ ವಿದ್ಯಾರ್ಥಿಗಳು ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದಾರೆ.   

ಪರೀಕ್ಷೆಗೆ ಪುನರಾರ್ವತಿತ (ರಿಪಿಟರ​‍್ಸ‌) ನೊಂದಾಯಿಸಿದ ವಿದ್ಯಾರ್ಥಿಗಳ ಸಂಖ್ಯೆ: ಹುಬ್ಬಳ್ಳಿ ಶಹರ 728, ಧಾರವಾಡ ಶಹರ 192,  ಧಾರವಾಡ ತಾಲೂಕ 119, ಹುಬ್ಬಳ್ಳಿ ತಾಲೂಕ 117, ಕಲಘಟಗಿ 83, ಕುಂದಗೋಳ 83 ಹಾಗೂ ನವಲಗುಂದ 115 ಒಟ್ಟು 1,437 ವಿದ್ಯಾರ್ಥಿಗಳು ಪುನಃ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದಾರೆ.   

ಪರೀಕ್ಷೆಗೆ ಪುನಃ ನೊಂದಾಯಿಸಿದ ಬಾಹ್ಯ ವಿದ್ಯಾರ್ಥಿಗಳ ಸಂಖ್ಯೆ: ಹುಬ್ಬಳ್ಳಿ ಶಹರ 50, ಧಾರವಾಡ ಶಹರ 29,  ಧಾರವಾಡ ತಾಲೂಕ 24, ಹುಬ್ಬಳ್ಳಿ ತಾಲೂಕ 7, ಕಲಘಟಗಿ 14, ಕುಂದಗೋಳ 7 ಮತ್ತು ನವಲಗುಂದ 4 ಒಟ್ಟು 135 ಬಾಹ್ಯ ವಿದ್ಯಾರ್ಥಿಗಳು ಪುನಃ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದಾರೆ.  

ಒಟ್ಟಾರೆಯಾಗಿ ಮಾರ್ಚ್‌-ಏಪ್ರಿಲ್ 2025 ಎಸ್‌.ಎಸ್‌.ಎಲ್‌.ಸಿ ಪರೀಕ್ಷೆ-1 ಕ್ಕೆ 30,749 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.  

ಧಾರವಾಡ ಜಿಲ್ಲೆಯ ಶೈಕ್ಷಣಿಕ ವೈಭವ ಮತ್ತು ಸಾಧನೆಯನ್ನು ಮರು ಸ್ಥಾಪಿಸಲು ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ, ಶಿಕ್ಷಣ ಇಲಾಖೆ ಮತ್ತು ತಜ್ಞರು ಈ ವರ್ಷ ವಿಶೇಷ ಪಯತ್ನ ಮಾಡಿದ್ದಾರೆ. ಮಿಷನ್ ವಿದ್ಯಾಕಾಶಿ ಮೂಲಕ ವಿದ್ಯಾರ್ಥಿಗಳಲ್ಲಿ ಉತ್ತಮ ಫಲಿತಾಂಶ ಪಡೆಯುವ ಭರವಸೆ, ಆತ್ಮ ವಿಶ್ವಾಸ ತುಂಬಿದ್ದಾರೆ.  

ಎಸ್‌.ಎಸ್‌.ಎಲ್‌.ಸಿ ಪರೀಕ್ಷಾ ಫಲಿತಾಂಶದಲ್ಲಿ ನಮ್ಮ ಧಾರವಾಡ ಕಳೆದ ಬಾರಿಗಿಂತ ಈ ಸಲ ಉತ್ತಮ ಸಾಧನೆ ಮಾಡುತ್ತದೆ.  

-   ಸಂತೋಷ ಎಸ್‌.ಲಾಡ್  

 ಕಾರ್ಮಿಕ ಇಲಾಖೆ ಸಚಿವರು  

ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು  

ಧಾರವಾಡದ ಎಲ್ಲ ಪ್ರೌಢಶಾಲಾ ಶಿಕ್ಷಕ ಸಮೂಹಕ್ಕೆ, ಅಧಿಕಾರಿಗಳಿಗೆ ನನ್ನದೊಂದು ದೊಡ್ಡ ನಮಸ್ಕಾರ. ನೀವೆಲ್ಲ ಮಾಡುತ್ತಿರುವ ಪ್ರಯತ್ನವನ್ನು ಎಷ್ಟು ಹೊಗಳಿದರೂ ಸಾಲದು. ಮಿಷನ್ ವಿದ್ಯಕಾಶಿಗಾಗಿ ನೀವೆಲ್ಲ  ಒಕ್ಕಟ್ಟಿಂದ ನಿರಂತರವಾಗಿ ಮಾಡಿರುವ ಮಹಾ ಪ್ರಯಾಸ ಅಧ್ಭುತ. ನೀವೆಲ್ಲಾ ಮಕ್ಕಳ ಯಶಸ್ಸಿಗೆ ತೋರಿರುವ ಸಹಾನುಭೂತಿ ಹಾಗು ಕರ್ತವ್ಯ ನಿಷ್ಠೆ ಒಂದು ಮಾದರಿಯೇ ಆಗಿದೆ.  

ಈಗ ನಿಮ್ಮೆಲ್ಲರ ಭಗೀರಥ ಪ್ರಯತ್ನದ  ಸತ್ಯದ ಕ್ಷಣ ಬಂದಿದೆ. ನಿಮ್ಮೆಲ್ಲರ (ನನ್ನದೂ) ಎದೆ ಬಡಿತ ಜಿಲ್ಲೆಯನ್ನು ಆವರಿಸಿದೆ. ಎಲ್ಲರೂ ಆತಂಕದಿಂದ ಶುರುವಾಗುವ ಪರೀಕ್ಷೆಗಳ ನೀರೀಕ್ಷೆಯಲ್ಲಿ ಇದ್ದೀರಿ. ಆತಂಕ ಬೇಡ. ಫಲಿತಾಂಶ ಏನೇ ಆಗಲಿ, ನಿಮ್ಮೆಲ್ಲರ ಪ್ರಯತ್ನ ಎಲ್ಲರಿಂದ ಪ್ರಶಂಸೆ ಪಡೆದಿದೆ ಹಾಗೂ ಆಡಳಿತ ಹೇಗಿರಬೇಕೆಂಬ ಮಾದರಿಯಾಗಿದೆ.  

ಈ  ಮಿಷನಿನ ಮುಂಚೂಣಿಯಲ್ಲಿದ್ದ ಡಿಸಿ ದಿವ್ಯ ಪ್ರಭು ಅವರ ಸಾರಥ್ಯಕ್ಕಂತೂ ಎಷ್ಟು  ಪ್ರಶಂಸಿಸಿದರೂ ಸಾಲದು. ಬಹುಶಃ ಈ ಬಾರಿಯ ಎಸ್‌.ಎಸ್‌.ಎಲ್‌.ಸಿ ಫಲಿತಾಂಶದಿಂದ ನೀವೆಲ್ಲಾ ಈ ಮಿಷನ್ನನ್ನು  ಮಿಷನ್ ದಿವ್ಯ ಕಾಶಿ ಎಂದು ಮರು ನಾಮಕರಣ ಮಾಡಬೇಕಾಗುತ್ತದೆ ! ಂಐಐ ಖಿಊಇ ಃಇಖಖಿ. ....... ಙಓಗ ಂಐಐ ಂಖಇ ಖಿಊಇ ಃಇಖಖಿ ! ನಿಮ್ಮೆಲ್ಲರಿಗೂ ನನ್ನ  ಶುಭಾಶಯಗಳು. 

- ಪ್ರೊ.ಎಸ್‌.ಎಂ. ಶಿವಪ್ರಸಾದ್ 

ಡೀನ್, ಐಐಟಿ ಧಾರವಾಡ ಮತ್ತು   

ಸಲಹೆಗಾರರು, ಮಿಷನ್ ವಿದ್ಯಾಕಾಶಿ, ಧಾರವಾಡ 

ಎಸ್‌.ಎಸ್‌.ಎಲ್‌.ಸಿ., ಪಿಯುಸಿ ಪರೀಕ್ಷೆಗಳಲ್ಲಿ ರಾ​‍್ಯಂಕ್‌ಗಳ ಬ್ಯಾಂಕ ಆಗಿದ್ದ ಧಾರವಾಡ ಜಿಲ್ಲೆ, ಕಳೆದ ಕೆಲವು ವರ್ಷಗಳಿಂದ ಪರೀಕ್ಷಾ ಫಲಿತಾಂಶದಲ್ಲಿ ಸ್ವಲ್ಪಮಟ್ಟಿಗೆ ಹಿನ್ನಡೆ ಕಾಣುತ್ತಿದೆ. ಆದರೆ ಕಳೆದ ಜುಲೈದಿಂದ ನಿರಂತರವಾಗಿ 10 ತಿಂಗಳಿಂದ ಮಿಷನ್ ವಿದ್ಯಾಕಾಶಿ ಮೂಲಕ ಎಸ್‌.ಎಸ್‌.ಎಲ್‌.ಸಿ. ಮಕ್ಕಳಿಗೆ ವಿಶೇಷ ತರಗತಿ, ಸಂಜೆ ಪಾಠ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗೊಬ್ಬ ಜಾಣನ ಜೋಡು, ಯುನಿಟ್ ಟೆಸ್ಟ್‌, ಅಭ್ಯಾಸ ಹಾಳೆ, ರೂಢಿ ಪರೀಕ್ಷೆ, ಪಾಸಿಂಗ್ ಪ್ಯಾಕೇಜ್ ಮುಂತಾದ ವಿನೂತನ ಪ್ರಯೋಗ ಮತ್ತು ವಿಶೇಷ ಪ್ರಯತ್ನಗಳ ಮೂಲಕ ಜಿಲ್ಲೆಯ ಶೈಕ್ಷಣಿಕ ವಲಯದಲ್ಲಿ ಸಾಕಷ್ಟು ಬದಲಾವಣೆ ತರುವಲ್ಲಿ ಯಶಸ್ವಿ ಆಗಿದ್ದೇವೆ. 

ಈ ವರ್ಷದ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರಾ​‍್ಯಂಕ್ ಬರುವ ನಿಟ್ಟಿನಲ್ಲಿ ನಮ್ಮ ಪ್ರಯತ್ನವಾಗಿದ್ದು, ಖಂಡಿತವಾಗಿ ಅದರ ಸಮೀಪಕ್ಕಾದರೂ ಬರುತ್ತೇವೆ. ಕಳೆದ ಸಲ 23 ನೇ ರಾ​‍್ಯಂಕ್‌ನಲ್ಲಿ ಇದ್ದ ನಮ್ಮ ಜಿಲ್ಲೆ. ಈ ಸಲ ರಾಜ್ಯದಲ್ಲಿಯೇ ಉತ್ತಮ ಫಲಿತಾಂಶ ಪಡೆಯುತ್ತದೆ. ನನಗೆ ಬಲವಾದ ನಂಬಿಕೆ ಇದೆ.  

- ದಿವ್ಯ ಪ್ರಭು  

  ಧಾರವಾಡ ಜಿಲ್ಲಾಧಿಕಾರಿಗಳು 

ಜಿಲ್ಲೆಯಲ್ಲಿ ಎಸ್‌.ಎಸ್‌.ಎಲ್‌. ಸಿ. ಪರೀಕ್ಷೆಗಳು ಸರಕಾರದ ನಿರ್ದೇಶನದಂತೆ ನಿಯಮಾನುಸಾರ ಮತ್ತು ಪಾರದರ್ಶಕವಾಗಿ ಜರುಗಿಸಲು ಕ್ರಮಕೈಗೊಳ್ಳಲಾಗಿದೆ. ವಿವಿಧ ಸ್ತರಗಳಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಸಿಬ್ಬಂದಿ,ಅಧಿಕಾರಿಗಳು ವಿವಿಧ ಜವಾಬ್ದರಿಗಳನ್ನು ನಿರ್ವಹಿಸಲಿದ್ದಾರೆ. ಎಲ್ಲ ವಿದ್ಯಾರ್ಥಿಗಳು ಯಾವುದೇ ಭಯ, ಆತಂಕಗಳಿಲ್ಲದೆ ಆತ್ಮವಿಶ್ವಾಸ ಮತ್ತು ಖುಷಿಯಿಂದ ಪರೀಕ್ಷೆ ಬರೆಯಿಲಿ. ವಿಕಲಚೇತನರು ಸೇರಿದಂತೆ ಎಲ್ಲ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗಿದೆ. 

- ಭುವನೇಶ ಪಾಟೀಲ 

ಸಿಇಓ ಜಿಲ್ಲಾ ಪಂಚಾಯತ ಧಾರವಾಡ