ಎಸ್‌ಎಸ್‌ಕೆ ಸಮಾಜವು ಜೇನು ಗೂಡಿದ್ದಂತೆ: ರತ್ನಾಬಾಯಿ ಬದಿ

ಗದಗ 13:  ಎಸ್‌ಎಸ್‌ಕೆ ಸಮಾಜವು ಜೇನು ಗೂಡು ಇದ್ದಂತೆ ಎಲ್ಲರೂ ಒಂದಾಗಿ ಸಮಾಜವನ್ನು ಮುನ್ನೇಡೆಸೋಣ ಎಂದು  ರಾಜ್ಯ ಸರಕಾರದಿಂದ  ರಾಜ್ಯಮಟ್ಟದ  ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ರತ್ನಾಬಾಯಿ ಬದಿ ಅವರು ಹೇಳಿದರು.  

ನಗರದ ಹಳೇ ಸರಾಫ್ ಬಜಾರದ ಜಗದಂಬಾ ದೇವಸ್ಥಾನದ ಸಹಸ್ರಾರ್ಜುನ ಸಮುದಾಯ ಭವನದ ಬಾಸ್ಕರಸಾ ಪವಾರ ಸಭಾಂಗಣದ ದಸರಾ ದರಬಾರ ವೇದಿಕೆಯಲ್ಲಿ ಜರುಗಿದ  “ನಮ್ಮೂರು ದಸರಾ-2024” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು   ಅವರು  ಸನ್ಮಾನಿಸಿ ಸ್ವೀಕರಿಸಿ ಮಾತನಾಡಿ, ಈ ಬಾರಿ ಗದಗ ಎಸ್‌ಎಸ್‌ಕೆ ಸಮಾಜದ ವತಿಯಿಂದ ದಸರಾ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿರುವದನ್ನು ನೋಡಿ  ತುಂಬಾ ಸಂತೋಷವಾಯಿತು. 

ಇದೆ ರೀತಿ ಸಮಾಜದ ಎಲ್ಲ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಬೇಕು.  ಮತ್ತು ನಾನೂ ಕೂಡಾ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆಯಲು ಎಸ್‌ಎಸ್‌ಕೆ ಸಮಾಜ ಬಾಂಧವರ ಪ್ರೋತ್ಸಾಹ ಸಾಕಷ್ಟಿರುವದರಿಂದ ನನ್ನ ಪ್ರಶಸ್ತಿಯನ್ನು ಎಸ್‌ಎಸ್‌ಕೆ ಸಮಾಜಕ್ಕೆ ಅರ​‍್ಿಸುತ್ತೆನೆ  ಎಂದು ಹೇಳಿದ ಅವರು ಸಮಾಜ ನನಗೇನು ಕೊಟ್ಟಿದೆ ಎನ್ನುವು ಮೊದಲು ಸಮಾಜಕ್ಕೆ ನಾವೇನು ಕೊಟ್ಟಿದ್ದೇವೆ ಎಂದು ಆಲೋಚಿಸಿದರೆ ಸಮಾಜವನ್ನು ಇನ್ನಷ್ಟು ಸಂಘಟಾತ್ಮಕವಾಗಿ ಬೆಳೆಸಲು ಸಾದ್ಯವಿದೆ ಎಂದು ಹೇಳಿದರು.   

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೆ ರಾ​‍್ಯಂಕ್ ಹಾಗೂ ಗದಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಸಮೃದ್ದಿ ಶಿದ್ಲಿಂಗ ಅವರು  ಸನ್ಮಾನ ಸ್ವೀಕರಿಸಿ ಮಾತನಾಡಿ, ಜೀವನದಲ್ಲಿ ಶೃದ್ದೆ, ಕಠಿಣ ಪರಿಶ್ರಮ ಹಾಗೂ ಪಾಲಕರ ಸಹಕಾರದಿಂದ ನಾನು ಸಾಧನೆ ಮಾಡಲು ಸಾಧ್ಯವಾಯಿತು. ಸಮಾಜ ಬಾಂಧವರು ತಮ್ಮ ಮಕ್ಕಳ ಶಿಕ್ಷಣಕ್ಕೆ  ಪ್ರೋತ್ಸಾಹ ನೀಡಿ ಅವರ ಕನಸನ್ನು ನನಸು ಮಾಡಬೇಕು. ಮುಂದಿನ ದಿನಗಳಲ್ಲಿ  ನಾನು ಐಎಎಸ್ ಆಗಬೇಕು ಎಂದು ಕನಸು ಕಂಡು ಅದಕ್ಕಾಗಿ ಸಾಕಷ್ಟು ಪರಿಶ್ರಮ ಪಡುತ್ತಿದ್ದೆನೆ ಎಂದು ಭಾವುಕರಾಗಿ  ಹೇಳಿದರು.  

ಅಧ್ಯಕ್ಷತೆಯನ್ನು ಗದಗ ಎಸ್‌.ಎಸ್‌.ಕೆ ಸಮಾಜ ಪಂಚ ಕಮೀಟಿ ಅಧ್ಯಕ್ಷ ಫಕೀರಸಾ ಬಾಂಡಗೆ ಅವರು ವಹಿಸಿದ್ದರು. ವೇದಿಕೆ ಮೇಲೆ  ಅತಿಥಿಗಳಾಗಿ  ನಗರದ ಗಣ್ಯ ವ್ಯಾಪಾರಸ್ಥರಾದ ಮಹಾವೀರ ಸಾಳುಂಕೆ, ಅವಿನಾಶ ಜೈನ್,  ಅರವಿಂದ ಓಸ್ವಾಲ, ಪಂಚ ಕಮೀಟಿಯ ಉಪಾಧ್ಯಕ್ಷ ರಾಜು ಬದಿ,   ಗೌರವ ಕಾರ್ಯದರ್ಶಿ ವಿನೋಧ ಶಿದ್ಲಿಂಗ,  ರವಿ ಶಿದ್ಲಿಂಗ, ದಸರಾ ಕಮೀಟಿಯ ಚೇರಮನ್‌ರಾದ ವಿಷ್ಣುಸಾ ಶಿದ್ಲಿಂಗ ಅವರು ಉಪಸ್ಥಿತರಿದ್ದರು.  

ಪಂಚ ಕಮೀಟಿಯ ಸದಸ್ಯ ಸುರೇಶಕುಮಾರ ಬದಿ, ಮಾರುತಿ ಪವಾರ,  ಮೋತಿಲಾಲಸಾ ಪೂಜಾರಿ, ಪರಶುರಾಮಸಾ ಬದಿ, ಅನಿಲ್ ಖಟವಟೆ,  ವಿನೋಧ ಬಾಂಡಗೆ,   ಅಂಬಾಸಾ ಖಟವಟೆ,   ವಾಸುದೇವಸಾ ಖಟವಟೆ, ಮೋಹನಸಾ ಪವಾರ,  ವಿಶ್ವನಾಥಸಾ ಸೋಳಂಕಿ, ಸಾಗರ ಪವಾರ,                                        ಶ್ರೀಕಾಂತ ಬಾಕಳೆ,  ಸತೀಶ ದೇವಳೆ, ರಾಘವೇಂದ್ರ ಬಾಂಡಗೆ,  ನಾಗರಾಜ ಖೋಡೆ,  ಉಮಾಬಾಯಿ ಬೇವಿನಕಟ್ಟಿ, ಸ್ನೇಹಲತಾ ಕಬಾಡಿ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.  

 ಜಿ.ಎನ್‌.ಹಬೀಬ ನಿರೂಪಿಸಿದರು.  ಪ್ರಕಾಶ ಬಾಕಳೆ ವಂದಿಸಿದರು.