ಬೆಳಗಾವಿ, 9: ನಗರದ ಪ್ರತಿಷ್ಠಿತ ಸಿ.ಬಿ.ಎಸ್.ಇ ಶಾಲೆಯಾದ ಲವ್ ಡೇಲ್ ಸೆಂಟ್ರಲ್ ಸ್ಕೂಲಿನಲ್ಲಿ ಕೇಂದ್ರ ಸಿಬಿಎಸ್ಸಿ ಮಂಡಳಿಯ ಸೌಥ್ ಜೋನ್ ಗಲ್ರ್ಸ ಫುಟಬಾಲ್ ಟೂನರ್ಾಮೆಂಟನ್ನು ದಿ. 10ರಿಂದ 13 ವರೆಗೆ ಆಯೋಜಿಸಲಾಗಿದೆ.
ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಎಮ್ ಸತ್ಯನಾರಾಯಣ್ (ಕಾರ್ಯದಶರ್ಿಗಳು, ಕನರ್ಾಟಕ ರಾಜ್ಯ ಫುಟಬಾಲ್ ಅಸೋಸಿಯೇಷನ್ ಮತ್ತು ಅಧ್ಯಕ್ಷರು ರಾಜ್ಯ ಮಹಿಳಾ ಫುಟಬಾಲ್ ಅಸೋಸಿಯೇಷನ್) ಆಗಮಿಸುವರು. ಮತ್ತೋರ್ವ ಮುಖ್ಯ ಅತಿಥಿಗಳಾಗಿ ಕುಮಾರಿ ತನ್ವಿ ಹನ್ಸ್ (ಅಂತರಾಷ್ಟ್ರೀಯ ಮಹಿಳಾ ಫುಟಬಾಲ್ ಆಟಗಾತರ್ಿ) ಅವರು ಆಗಮಿಸಲಿದ್ದಾರೆ.
ಈ ಮೇಗಾ ಟೂರ್ನಾ ಮೆಂಟಿನ ಅಧ್ಯಕ್ಷರಾಗಿ ಲಕ್ಷ್ಮೀ ಇಂಚಲ್ (ಪ್ರಾಚಾರ್ಯರು, ಲವ್ ಡೇಲ್ ಸೇಂಟ್ರಲ್ ಸ್ಕೂಲ್ ಬೆಳಗಾವಿ ಇವರು ವಹಿಸಿಕೊಳ್ಳುವರು.
ಈ ಮೇಗಾ ಫುಟಬಾಲ್ ಟೂರ್ನಾಮೇಂಟನಲ್ಲಿ ಕರ್ನಾಟಕ, ಮಹಾರಾಷ್ಟ್ರ, ಕೇರಳ ರಾಜ್ಯದ 36 ಸಿ ಬಿ ಎಸ್ ಇ ಶಾಲೆಗಳ ಟೀಮ್ಗಳು ಭಾಗವಹಿಸುತಿದ್ದು, ಆಟಗಳನ್ನು ಲವ್ ಡೇಲ್ ಸೇಂಟ್ರಲ್ ಸ್ಕೂಲ್, ಮತ್ತು ಗುಡ್ ಶೇಫರ್ಡ ಸೇಂಟ್ರಲ್ ಸ್ಕೂಲಿನ ಮೈದಾನಗಳಲ್ಲಿ ಆಟದ ವ್ಯವಸ್ಥೆ ಮಾಡಲಾಗಿದೆ.
ಈ ಫುಟಬಾಲ್ ಪಂದ್ಯಾವಳಿಗಳ ಸುವ್ಯವಸ್ಥಿತವಾಗಿ ನಡೆಸುವ ನೀಲನಕ್ಷೆಯ ಕುರಿತು ಶಾಲೆಯ ಸಭಾಭವನದಲ್ಲಿ ಪತ್ರಿಕಾ ಗೋಷ್ಠಿಯನ್ನು ನಡೆಸಲಾಯಿತು.
ಪತ್ರಿಕಾ ಗೋಷ್ಠಿಯಲ್ಲಿ ಶಾಲೆಯ ಪ್ರಾಚಾರ್ಯರು ಲಕ್ಷ್ಮೀ. ಇಂಚಲ್, ಸಂಸ್ಥೆಯ ಎಮ್ ಡಿ ಆದಂತಹ ಪ್ರೇರಣಾ ಘಾಟಗೆ ಹಾಗೂ ಶಾಲೆಯ ದೈಹಿಕ ಶಿಕ್ಷಕರಾದ ಬಸಲಿಂಗಪ್ಪ ಅಗಸಗಿ ಅವರು ಉಪಸ್ಥಿತರಿದ್ದರು.