ಮೆಲ್ಬೋರ್ನ್, ಮಾ 9, ಭಾನುವಾರ ಭಾರತ ವಿರುದ್ಧ 85 ರನ್‌ಗಳಿಂದ ಜಯ ಸಾಧಿಸಿ ಐದನೇ ಬಾರಿ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಮಹಿಳಾ ತಂಡವನ್ನು ಆಸೀಸ್ ಸ್ಪಿನ್‌ದಿಗ್ಗಜ ಶೇನ್‌ವಾರ್ನ್‌ಸೋಮವಾರ ಅಭಿನಂದನೆ ಸಲ್ಲಿಸಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ಅವರು,"ವೆಲ್‌ಡನ್ ಆಸ್ಟ್ರೇಲಿಯಾ ಮಹಿಳಾ ತಂಡ. ಭಾನುವಾರ ನಿಮ್ಮ ಪ್ರಯತ್ನ ಅದ್ಭುತವಾಗಿತ್ತು. ನಿಮ್ಮ ಸಾಧನೆಯು ನಮ್ಮೆಲ್ಲರಿಗೂ ಹೆಮ್ಮೆ ತರಿಸಿದೆ.ಪಂದ್ಯಕ್ಕೂ ಸಾವಿರಾರು ಕ್ರಿಕೆಟ್‌ಪ್ರೇಮಿಗಳನ್ನು ರಜಿಸಿದ ಪ್ರಖ್ಯಾತ ಗಾಯಕಿ ಕಾರ್ಟಿ ಪೆರ್ರಿ ಅವರ ಗಾಯಕ ಅದ್ಭುತವಾಗಿತ್ತು. ರಾಕ್‌ಆನ್‌ಕಾರ್ಟಿ ಪೆರ್ರಿ,'' ಎಂದು ಹೇಳಿದ್ದಾರೆ.ಇದಕ್ಕೂ ಮುನ್ನ ಆಸ್ಟ್ರೇಲಿಯಾ ವನಿತೆಯರು 2010, 2012, 2014 ಹಾಗೂ 2018 ಚುಟುಕು ವಿಶ್ವಕಪ್ ಗೆದ್ದಿದ್ದರು. ಇದೀಗ ಐದನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
185 ರನ್ ಗುರಿ ಹಿಂಬಾಲಿಸಿದ ಭಾರತ ತಂಡದ ಪರ ದೀಪ್ತಿ ಶರ್ಮಾ 33 ರನ್ ಗಳಿಸಿ ಕೊಂಚ ಪ್ರತಿರೋಧ ತೋರಿದರು.ಅವರನ್ನು ಬಿಟ್ಟರೆ ಇನ್ನುಳಿದ ಎಲ್ಲರೂ ಆಸೀಸ್ ಮಾರಕ ದಾಳಿ ಎದುರು ಮಕಾಡೆ ಮಲಗಿದರು. ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ತೋರಿದ್ದ ಶಫಾಲಿ ವರ್ಮಾ ಮೊದಲನೇ ಓವರ್‌ಮೂರನೇ ಎಸೆತದಲ್ಲಿ ವಿಕೆಟ್‌ಒಪ್ಪಿಸಿದ್ದರು.ಸ್ಮೃತಿ ಮಾಂಧನ, ಹರ್ಮನ್‌ಪ್ರೀತ್ ಕೌರ್ ಹಾಗೂ ಜೆಮಿಮಾ ರೊಡ್ರಿಗಸ್‌ಕೂಡ ಪುಟಿದೇಳುವಲ್ಲಿ ವಿಫಲರಾಗಿದ್ದರು. ಇದರ ಪರಿಣಾಮ ಭಾರತ ವನಿತೆಯರು ಕೇವಲ 99 ರನ್‌ಗಳಿಗೆ ಆಲೌಟ್‌ಆಗಿದ್ದರು. ಆ ಮೂಲಕ ಚೊಚ್ಚಲ ಚುಟುಕು ವಿಶ್ವಕಪ್ ಗೆಲ್ಲುವ ಭಾರತದ ಕನಸು ಭಗ್ನವಾಯಿತು.ಇದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡ ಅಲಿಸ್ಸಾ ಹೀಲಿ (75 ರನ್) ಹಾಗೂ ಬೆಥ್ ಮೂನಿ (ಔಟಾಗದೆ 78 ನ್ ) ಅವರ ಸ್ಫೋಟಕ ಬ್ಯಾಟಿಂಗ್‌ನೆರವಿನಿಂದ ನಿಗದಿತ 20 ಓವರ್‌ಗಳಿಗೆ ನಾಲ್ಕು ವಿಕೆಟ್‌ನಷ್ಟಕ್ಕೆ 184 ರನ್ ಗಳಿಸಿತ್ತು.