ಸುಪ್ರೀಂ ಕೋರ್ಟ್ ನೂತನ ಮುಖ್ಯ ನ್ಯಾಯಾಧೀಶರಾಗಿ ಎಸ್ ಎ ಬೋಬ್ಡೆ ಪ್ರಮಾಣ

ನವದೆಹಲಿ, ನ 18 :    ಸುಪ್ರೀಂ ಕೋರ್ಟ್ನ 47ನೇ ನೂತನ ಮುಖ್ಯ ನ್ಯಾಯಾಧೀಶರಾಗಿ ನ್ಯಾ.ಶರದ್ ಅರವಿಂದ್ ಬೋಬ್ಡೆ ಸೋಮವಾರ  ಪ್ರಮಾಣವಚನ ಸ್ವೀಕರಿಸಿದರು.  ರಾಷ್ಟ್ರಪತಿ ರಾಂನಾಥ್ ಕೋವಿಂದ್ ಅವರು ನೂತನ ಮುಖ್ಯನ್ಯಾಯಮೂರ್ತಿಯವರಿಗೆ ಪ್ರಮಾಣ ವಚನ ಬೋಧಿಸಿದ್ದು, ಅವರ ಅಧಿಕಾರವಧಿ 18 ತಿಂಗಳಾಗಿದೆ.  ರಾಷ್ಟ್ರಪತಿ  ಭವನದಲ್ಲಿ ಜರುಗಿದ ಸರಳ  ಸಮಾರಂಭದಲ್ಲಿ ಉಪರಷ್ಠ್ರಪತಿ ಎಂ. ವೆಂಕಯ್ಯನಾಯ್ಡು ಪ್ರಧಾನಿ  ನರೇಂದ್ರ  ಮೋದಿ, ಲೋಕಸಭೆಯ ಸ್ಪೀಕರ್  ಒಂ ಬಿರ್ಲಾ, ಮಾಜಿ ಉಪರಾಷ್ಟ್ರಪತಿ ಹಮೀದ್  ಅನ್ಸಾರಿ,  ಮಾಜಿ ಪಧಾನಿ ಡಾ. ಮನ್ ಮೋಹನ್ ಸಿಂಗ್  ಸೇರಿದಂತೆ ಅನೇಕ  ಗಣ್ಯರು ಮತ್ತು ಹಲವು ಸಂಸದರು ಹಿರಿಯ ಅಧಿಕಾರಿಗಳೂ  ಭಾಗಿಯಾಗಿದ್ದರು. ಮುಖ್ಯನ್ಯಾಯಮೂರ್ತಿ ಯವರ ಅಧಿಕಾರವಧಿ  2021 ಏಪ್ರಿಲ್ ಗೆ  ಮುಕ್ತಾಯವಾಗಲಿದೆ  ಇವರ ತಂದೆ ಸಹ ಹೆಸರಾಂತ ವಕೀಲರಾಗಿದ್ದರು.  ಅಯೋಧ್ಯೆ, ರಫೇಲ್ ವಿಮಾನ ಖರೀದಿ  ವಿವಾದ ಕುರಿತು ಐತಿಹಾಸಿಕ ತೀಪು ನೀಡಿದ್ದ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಾಧೀಶ   ರಂಜನ್ ಗೋಗೊಯಿ ಅವರು ಭಾನುವಾರ ನಿವೃತ್ತಿ ಹೊಂದಿದ್ದಾರೆ.