ಕಾರ್ಮಿಕ ಮಾಹಿತಿ ನೀಡಲು ತಹಶೀಲ್ದಾರಗಳಿಗೆ ಎಸ್.ಯೋಗೇಶ್ವರ ಸೂಚನೆ

ಹಾವೇರಿ: ಮೇ 14: ಉದ್ಯೋಗ ಇತರ ಕಾರಣಗಳಿಗಾಗಿ ಜಿಲ್ಲೆಯಲ್ಲಿ ಉಳಿದುಕೊಂಡಿರುವ ಝಾರ್ಖಂಡ್, ಬಿಹಾರ, ರಾಜಸ್ಥಾನ್ ಹಾಗೂ ಉತ್ತರ ಪ್ರದೇಶ ರಾಜ್ಯಗಳ ಕಾಮರ್ಿಕರು ಪ್ರಯಾಣ ವೆಚ್ಚ ಭರಿಸಿ ಸ್ವಂತ ರಾಜ್ಯಗಳಿಗೆ ತೆರಳಲು ವಿಶೇಷ  ಶ್ರಮಿಕ ರೈಲು ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿರುವ ಈ ನಾಲ್ಕು ರಾಜ್ಯಗಳ ಕಾಮರ್ಿಕರ ವಿವರನ್ನು ಸಲ್ಲಿಸಲು ತಹಶೀಲ್ದಾರಗಳಿಗೆ ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ ಅವರು ಸೂಚನೆ ನೀಡಿದರು.

ಹೊರ ರಾಜ್ಯದ ಕಾಮರ್ಿಕರನ್ನು ಆಯಾ ರಾಜ್ಯಗಳಿಗೆ ಕಳುಹಿಸುವ ಕುರಿತಂತೆ ತಾಲೂಕಾ ಆಡಳಿತದೊಂದಿಗೆ ಗುರುವಾರ ವಿಡಿಯೋ ಸಂವಾದ ನಡೆಸಿದ ಅವರು ಈ ನಾಲ್ಕು ರಾಜ್ಯಗಳ ಕಾಮರ್ಿಕರ ಮಾಹಿತಿ ಸಂಗ್ರಹ, ಸೇವಾ ಸಿಂಧು ಆ್ಯಪ್ನಲ್ಲಿ ನೊಂದಣಿ ಹಾಗೂ ಪ್ರಯಾಣ ವ್ಯವಸ್ಥೆಯ ಉಸ್ತುವಾರಿಗಾಗಿ ತಾಲೂಕಾವಾರು ನೋಡಲ್ ಅಧಿಕಾರಿಗಳನ್ನು ನಿಯೋಜಿಸಲು ಸೂಚನೆ ನೀಡಿದರು.

ಆಯಾ ರಾಜ್ಯದ ಕಾಮರ್ಿಕರು ಈ ಜಿಲ್ಲೆಯೊಳಗಿದ್ದರೆ ಸ್ವ ಇಚ್ಛೆಮೇರೆಗೆ ಅವರ ರಾಜ್ಯಕ್ಕೆ ತೆರಳಬಹುದು. ಜಿಲ್ಲೆಯಿಂದ ಹುಬ್ಬಳ್ಳಿ ರೈಲು ನಿಲ್ದಾಣ ದವರೆಗೆ ತೆರಳುವ ಕಾಮರ್ಿಕರಿಗೆ ರಾಜ್ಯ ರಸ್ತೆ ಸಾರಿಗೆ ಬಸ್ ವ್ಯವಸ್ಥೆ ಮಾಡ ಬೇಕು ಬಸ್ ಹಾಗೂ ರೈಲಿನ ವೆಚ್ಚವನ್ನು ಕಾಮರ್ಿಕರೇ ಭರಿಸಬೇಕು. ಸೇವಾ ಸಿಂಧುವಿನಲ್ಲಿ ಅಜರ್ಿ ಸಲ್ಲಿಸಿರಬೇಕು. ಒಂದೊಮ್ಮೆ ಅಜರ್ಿ ಸಲ್ಲಿಸಿ ಅನುಮೋದನೆ ಇಲ್ಲದಿದ್ದರೂ ಇವರ ಮಾಹಿತಿ ಪಡೆಯಬೇಕು. ಈವರೆಗೆ ಅಜರ್ಿ ಸಲ್ಲಿಸದೇ ಇರುವ ಕಾಮರ್ಿಕರು ತಮ್ಮ ಸ್ವಂತ ರಾಜ್ಯಕ್ಕೆ ತೆರಳಲು ಇಚ್ಛಿಸಿದಲ್ಲಿ ಅವರ ಮಾಹಿತಿಯನ್ನು ಸೇವಾ ಸಿಂಧುವಿನಲ್ಲಿ ದಾಖಲಿಸಬೇಕು. ದಾಖಲಾತಿಯ ಆರ್.ಡಿ.ನಂಬರ್ ಪಡೆದು ಸಲ್ಲಿಸಿದರೆ ಸಾಕಾಗುತ್ತದೆ ಎಂದು ತಿಳಿಸಿದರು.

ಈ ನಾಲ್ಕು ರಾಜ್ಯಗಳ ಕಾಮರ್ಿಕರು ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೆಲಸಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ಸ್ವಯಂ ಸೇವಾ ಸಂಘಟನೆಗಳು, ಕೈಗಾರಿಕಾ ಘಟಕಗಳು, ಕ್ವಾರಂಟೈನ್ ಸೆಂಟರ್ ಸೇರಿದಂತೆ ವಿವಿಧೆಡೆ ಮಾಹಿತಿ ಸಂಗ್ರಹಿಸಬೇಕು. ಸ್ವಂತ ಗ್ರಾಮಗಳಿಗೆ ತೆರಳು ಇಚ್ಛಿಸುವವರನ್ನು ನೊಂದಾಯಿಸಿಕೊಳ್ಳಬೇಕು. ಉತ್ತರ ಪ್ರದೇಶ-235, ಬಿಹಾರ-60, ರಾಜಸ್ಥಾನ-11,  ಝಾರ್ಖಂಡ್-7 ಜನರು ಇರುವುದಾಗಿ ಮಾಹಿತಿ ಇದೆ. ಮತ್ತೊಮ್ಮೆ  ಪರಿಶೀಲಿಸಿ. ಈ ರಾಜ್ಯಗಳಿಗೆ ಯಾವ ದಿನಾಂಕ, ಯಾವ ಸಮಯದಲ್ಲಿ ಹುಬ್ಬಳ್ಳಯಿಂದ ರೈಲು ಹೊರಡಲಿದೆ ಎಂಬ ಮಾಹಿತಿಯನ್ನು ಹಾಗೂ ರೈಲು ಪ್ರಯಾಣ ವೆಚ್ಚದ ದರವನ್ನು ತಾಲೂಕಾ ಆಡಳಿತಕ್ಕೆ ರವಾನಿಸಲಾಗುವುದು. ರೈಲು ಹೊರಡುವ ವೇಳೆಗೆ ಜಿಲ್ಲೆಯಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಕರೆದುಕೊಂಡು ಹೋಗಿ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ತಲುಪಿಸಿ ರೈಲಿನಲ್ಲಿ ಕಾಮರ್ಿಕರನ್ನು ಹತ್ತಿಸಬೇಕಾಗುತ್ತದೆ ಎಂದು ತಿಳಿಸಿದರು.

ಮೊದಲ ಹಂತದಲ್ಲಿ ಮೇ 17 ರಂದು ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಬಿಹಾರ ರಾಜ್ಯಕ್ಕೆ ಹಾಗೂ ಮೇ 19 ರಂದು ಜಾರ್ಖಂಡ್ ರಾಜ್ಯಕ್ಕೆ ರೈಲು ಹೊರಡಲಿದೆ. ಹುಬ್ಬಳ್ಳಿಯಿಂದ ಬಿಹಾರಕ್ಕೆ ಹೊರಟ ರೈಲು ನೇರವಾಗಿ  ಬಿಹಾರ ರಾಜ್ಯದ ಕತೀಹಾರ ರೈಲು ನಿಲ್ದಾಣದಲ್ಲಿ  ನಿಲ್ಲಲಿದೆ. ಝಾರ್ಖಂಡ್ ರಾಜ್ಯಕ್ಕೆ ತೆರಳುವ ರೈಲು ಹುಬ್ಬಳ್ಳಿಯಿಂದ ಹೊರಟು ಝಾರ್ಖಂಡ್ ರೈಲ್ವೆ ನಿಲ್ದಾಣದಲ್ಲಿ ನಿಲ್ಲಲಿದೆ. ಮಧ್ಯ ಎಲ್ಲಿಯೂ  ನಿಲುಗಡೆ ಇರುವುದಿಲ್ಲ. ಅದೇ ರೀತಿ ಹುಬ್ಬಳ್ಳಿಯಿಂದ ಆಯಾ ರಾಜ್ಯಕ್ಕೆ ಹೊರಡುವ  ರೈಲುಗಳು ನೇರವಾಗಿ ರಾಜಸ್ಥಾನ್, ಉತ್ತರ ಪ್ರದೇಶದಲ್ಲಿ ನಿಲ್ಲಲಿವೆ. ಆಯಾ ರಾಜ್ಯಕ್ಕೆ ರೈಲು ಹೊರಡುವ ದಿನಾಂಕದ ಮಾಹಿತಿಯನ್ನು ತಾಲೂಕಾ ಆಡಳಿತಕ್ಕೆ ತಿಳಿಸಲಾಗುವುದು. ಆಯಾ ದಿನದಂದು ಆಯಾ ರಾಜ್ಯದ ಕಾಮರ್ಿಕರನ್ನು ನಿಯಮಾನುಸಾರ ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

         ಹುಬ್ಬಳ್ಳಿಯಿಂದ ಆಯಾ ರಾಜ್ಯಕ್ಕೆ ತಲುಪುವ ರೈಲು ದರವನ್ನು ಕಾಮರ್ಿಕರಿಂದ ಪಡೆದು ಮುಂಗಡವಾಗಿ ನೋಡಲ್ ಅಧಿಕಾರಿಗಳು ಟಿಕೇಟ್ ಖರೀದಿಸಬೇಕು. ಅದೇ ರೀತಿ ಆಯಾ ತಾಲೂಕಾ ಕೇಂದ್ರದಿಂದ ಹುಬ್ಬಳ್ಳಿಗೆ ಪ್ರಯಾಣಿಸುವ ದರವನ್ನು ಪಡೆದು ಅವರಿಗೆ ಅನುಕೂಲಮಾಡಿಕೊಡಬೇಕು. ಜಿಲ್ಲೆಯಿಂದ ನೇಮಕವಾದ ಅಧಿಕಾರಿಗಳು ಅವರನ್ನು ನಿಗಧಿತ ಸ್ಥಳದಲ್ಲಿ ಎಸ್.ಓ.ಪಿ. ಮಾರ್ಗಸೂಚಿಯಂತೆ ಆರೋಗ್ಯ ತಪಾಸಣೆ ನಡೆಸಬೇಕು. ಈ ಕುರಿತಂತೆ ವೈದ್ಯರಿಂದ ಪ್ರಮಾಣಪತ್ರ ಪಡೆದು ಆಯಾ ರಾಜ್ಯಗಳ ನೋಡಲ್ ಅಧಿಕಾರಿಗಳಿಗೆ ಕಳುಹಿಸಿಕೊಡಬೇಕು. ಸ್ಯಾನಿಟೈಸರ್, ಮಾಸ್ಕ್, ಊಟದ ಪ್ಯಾಕೇಟ್, ಕುಡಿಯುವ ನೀರನ ವ್ಯವಸ್ಥೆಯೊಂದಿಗೆ ಕಾಮರ್ಿಕರನ್ನು ಕಳುಹಿಸಿಕೊಡುವ ವ್ಯವಸ್ಥೆಯನ್ನು ಆಯಾ ತಹಶೀಲ್ದಾರ ನಿರ್ವಹಿಸಬೇಕು.

       ತಮ್ಮ ರಾಜ್ಯಕ್ಕೆ ತೆರಳಲು ಅನುಮತಿ ಇಲ್ಲ ಅಥವಾ ರೈಲಿನ ವ್ಯವಸ್ಥೆ ಇಲ್ಲ ಎಂದು ಯಾವುದೇ ಶ್ರಮಿಕ ತೊಂದರೆಗೊಳಗಾಗಬಾರದು.  ದುಬಾರಿ ಪ್ರಯಾಣ ವೆಚ್ಚಭರಿಸಿ ಲಾರಿ, ಟ್ರಕ್ಗಳಲ್ಲಿ ಪ್ರಯಾಣಸಿ ಅವಘಡಕ್ಕೆ ಒಳಗಾಗಬಾರದು. 

ಸಂಪಕರ್ಿಸಿ: ದೇಶದ ಬೇರೆ ಬೇರೆ ರಾಜ್ಯಗಳ ಕಾಮರ್ಿಕರು ಹಾವೇರಿ ಜಿಲ್ಲೆಯಲ್ಲಿ ಉಳಿದುಕೊಂಡಿದ್ದರೆ ತಮ್ಮ ಸ್ವಂತ ರಾಜ್ಯಕ್ಕೆ ತೆರಳು ಇಚ್ಛಿಸಿದಲ್ಲಿ ಸೇವಾ ಸಿಂಧು ಆ್ಯಪ್ಗಳಲ್ಲಿ ನೊಂದಾಯಿಸಿಕೊಳ್ಳಬಹುದು ಅಥವಾ ಆಯಾ ತಾಲೂಕು ತಹಶೀಲ್ದಾರಗಳ ಕಚೇರಿಯಲ್ಲಿ ಸಂಪಕರ್ಿಸಿ ಮಾಹಿತಿ ನೀಡಬಹುದಾಗಿದೆ ಎಂದು ತಿಳಿಸಿದರು.

ಉತ್ತಮ ಸೌಕರ್ಯ: ಕ್ವಾರಂಟೈನ್ ಕೇಂದ್ರಗಳಲ್ಲಿ ಉಳಿದುಕೊಂಡವರಿಗೆ ಉತ್ತಮವಾದ ಊಟ, ಉಪಹಾರ ನೀಡಿ. ಸ್ವಚ್ಛತೆಗೆ ಆದ್ಯತೆ ನೀಡಿ. ದಿನಕ್ಕೆರಡುಬಾರಿ ವೈದ್ಯಕೀಯ ತಪಾಸಣೆ ನಡೆಸಿ. ತೀವ್ರತರ ಇತರ ಆರೋಗ್ಯ ಸಮಸ್ಯೆ ಇರುವ ವ್ಯಕ್ತಿಗಳ ಮೇಲೆ ವಿಶೇಷ ಗಮನಹರಿಸಿ. ಕ್ವಾರಂಟೈನ್ ಸೀಲು ಅಳಿಸಿಹೋಗದಂತೆ ಚುನಾವಣೆಗೆ ಬಳಸುವ ಇಂಕ್ನ್ನು ಬಳಿಸಿ. ಕ್ವಾರಂಟೈನ್ ಕೇಂದ್ರಕ್ಕೆ ಜನರನ್ನು ಕರೆತರಲು ಬಾಡಿಗೆ ಆಧಾರದ ಮೇಲೆ ವಾಹನಗಳನ್ನು ಪಡೆಯಿರಿ ಕ್ವಾರಂಟೈನ್ ನಿರ್ವಹಣೆ ವೆಚ್ಚಕ್ಕಾಗಿ ಪ್ರತಿ ತಾಲೂಕಿಗೆ ಒಂದೊಂದು ಲಕ್ಷ ರೂ. ಅನುದಾನ  ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಕ್ವಾರಂಟೈನ್ ಕೇಂದ್ರಗಳ ಮೆಡಿಕಲ್ ವೇಸ್ಟ್ನ್ನು ವೈಜ್ಞಾನಿಕ ವಿಲೇವಾರಿ ಆಯಾ ವೈದ್ಯರ ಜವಾಬ್ದಾರಿಯಾಗಿದೆ. ಸಾಮಾನ್ಯ ಸ್ವಚ್ಛತಾ ಕಾರ್ಯವನ್ನು ಸ್ಥಳೀಯ ಸಂಸ್ಥೆಗಳ ಮೂಲಕ ನಿರ್ವಹಿಸಿ. ಹೊರ ರಾಜ್ಯಗಳಿಂದ ಬಂದು ಕ್ವಾರಂಟೈನ್ ಆಗಿರುವ ಪ್ರಯಾಣಿಕರಿಗೆ ಅವರು ಇಚ್ಛಿಸಿದಲ್ಲಿ ಅವರ ಮನೆಯ ಹಾಸಿಗೆ, ಹೊದಿಕೆ ಬಳಸಬಹುದು. ಆದರೆ ಕ್ವಾರಂಟೈನ್ ಕೇಂದ್ರದಿಂದ ಮನೆಯವರ ಸಂಪರ್ಕ ಇರಬಾರದು. ವಸ್ತುಗಳನ್ನು ತೆಗೆದುಕೊಂಡು ಹೋಗದಂತೆ ಎಚ್ಚರವಹಿಸಿ ಎಂದು ಸಲಹೆ ನೀಡಿದರು.

ವಿಡಿಯೋ ಸಂವಾದದಲ್ಲಿ ಹಾವೇರಿ ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ, ತಹಶೀಲ್ದಾರ ಶಂಕರ್, ಚುನಾವಣಾ ತಹಶೀಲ್ದಾರ ಪ್ರಶಾಂತ ನಾಲವಾರ ಹಾಗೂ ಸವಣೂರ ಉಪವಿಭಾಗಾಧಿಕಾರಿ ಶ್ರೀಮತಿ ಅನ್ನಪೂರ್ಣ ಮುದಕಮ್ಮನವರ ಒಳಗೊಂಡಂತೆ ವಿವಿಧ ತಾಲೂಕುಗಳ ತಹಶೀಲ್ದಾರ ಭಾಗವಹಿಸಿದ್ದರು.