ದೇಶದ ಅಭಿವೃದ್ಧಿಗೆ ಮೊದಲು ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಹೊಂದಬೇಕು: ಶಾಸಕ ಅರುಣಕುಮಾರ

ಲೋಕದರ್ಶನವರದಿ

ರಾಣೆಬೆನ್ನೂರ. ಜು. 02: ಮಹಾತ್ಮ ಗಾಂಧೀಜಿಯವರ ಕನಸಿನಂತೆ ಗ್ರಾಮಗಳ ಅಭಿವೃದ್ಧಿಯಾದಲ್ಲಿ ಅವರ ಕನಸು ನನಸಾಗಲಿದೆ. ಈ ದೆಶೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸಕರ್ಾರಗಳು ಶ್ರಮಿಸುತ್ತಿವೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.

 ಗುರುವಾರ ತಾಲೂಕಿನ ಹಿರೆಮಾಗನೂರ ಮತ್ತು ಚಿಕ್ಕಮಾಗನೂರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ 49 ಲಕ್ಷ ರೂ. ಅನುದಾನ ಎಸ್ಸಿಪಿ ಯೋಜನೆ ಅಡಿಯಲ್ಲಿ ರಸ್ತೆ ಹಾಗೂ ಚರಂಡಿ ನಿಮರ್ಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.  ದೇಶದ ಸಮಗ್ರ ಅಭಿವೃದ್ಧಿ ಕಾಣಬೇಕಾದರೆ, ಮೊದಲು ಗ್ರಾಮೀಣ ಪ್ರದೇಶಗಳ ರಸ್ತೆಗಳು ಅಭಿವೃದ್ಧಿ ಹೊಂದಬೇಕು.  ಆರೋಗ್ಯವಂತ ಬದುಕಿಗೆ ಗ್ರಾಮವಾಸಿಗಳು ಸ್ಥಳೀಯವಾಗಿ ಹಸಿರು ವಾತಾವರಣ ನಿಮರ್ಿಸಲು ಪರಿಸರ ವಿಫುಲವಾಗಿ ಬೆಳೆಸುವ ನಿಟ್ಟಿನಲ್ಲಿ ಸಸಿಗಳನ್ನು  ನೆಟ್ಟು ಅವುಗಳನ್ನು ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ಪೋಷಿಸಲು ಮುಂದಾಗಬೇಕು ಎಂದು ಕರೆ ನೀಡಿದರು.  

    ಗ್ರಾಮೀಣ ರಸ್ತೆಗಳು ಸಾರ್ವಜನಿಕರು ಹಾಳಾಗದಂತೆ ನೋಡಿಕೊಳ್ಳಬೇಕು. ಸಾರ್ವಜನಿಕರ ಅನುಕೂಲವಾಗುವ ದೃಷ್ಠಿಯಿಂದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಗ್ರಾಮಸ್ಥರು ಗುತ್ತಿಗೆದಾರರಿಂದ ಗುಣಮಟ್ಟದ ಕಾಮಗಾರಿಯನ್ನು ಪಡೆದು ರಸ್ತೆಗಳು ಬಹುವರ್ಷಗಳ ಕಾಲ ಉಳಿದು ಬಾಳುವಂತೆ ಕ್ರಮ ವಹಿಸಬೇಕು.  ಇದರಿಂದ ಗ್ರಾಮ ಸ್ವಚ್ಛ ಮತ್ತು ಸುಂದರವಾಗಿ ಕಾಣುವುದರ ಮೂಲಕ ಸೌಂದರ್ಯ ಹೆಚ್ಚಿಸಿಕೊಳ್ಳಲು ಸಾಧ್ಯವಾಗುವುದು ಈ ನಿಟ್ಟಿನಲ್ಲಿ ಅತ್ಯಂತ ಜವಾಬ್ದಾರಿಯುತವಾಗಿ ನಿಗಾವಹಿಸಲು ಮುಂದಾಗಬೇಕು ಎಂದರು.   

   ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಆರ್.ಶಂಕರ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ವಿಶ್ವನಾಥ ಪಾಟೀಲ, ಮಂಜುನಾಥ ಓಲೇಕಾರ, ರಾಜಣ್ಣ ಅಡಿವೆಪ್ಪನವರ, ಬಸವರಾಜ ಕೇಲಗಾರ,  ದೀಪಕ್ ಹರಪನಹಳ್ಳಿ, ರಾಘವೇಂದ್ರ ಕುಲಕಣರ್ಿ, ಜಯಣ್ಣ ಕರಡೇರ, ಸಿದ್ದಣ್ಣ ಕೆಂಚಪ್ಪನವರ, ಸಿದ್ದೇಶಕುಮಾರ ಹಾಲಿನವರ, ಲೋಕೋಪಯೋಗಿ ಇಲಾಖೆಯ ಸಕಾನಿ ಅಭಿಯಂತರ ವಿ.ಆರ್.ಹಿರೇಗೌಡ್ರ, ಅಖಿಲೇಶ ಕುಸಗೂರ, ಕರೇಗೌಡ ಲಿಂಗದಹಳ್ಳಿ, ರಮೇಶ್ ಹೊಸಗೌಡ್ರ, ರಹೀಮಾನ್ ಎರೇಶೀಮಿ, ನಾಗೇಂದ್ರಪ್ಪ ಕರಡೇರ, ವಿರೂಪಾಕ್ಷಪ್ಪ ಕರಡೇರ, ಪರಮೇಶಪ್ಪ ಬಳ್ಳಪ್ಪನವರ, ಸಂತೋಷಕುಮಾರ ಪಾಟೀಲ, ಶಿವಪ್ಪ ಹೊಸಮನಿ, ನಾಗರಾಜ ಮಕರಿ, ಗುರುರಾಜ ಅಡಿವೇರ, ಹಳ್ಳೂರಪ್ಪ, ಅಣ್ಣಪ್ಪ ಹುಚ್ಚಳ್ಳೇರ, ಮಂಜಪ್ಪ ಹುಚ್ಚಳ್ಳೆರ, ನಾಗನಗೌಡ ಪೋಲೀಸ್ಗೌಡ್ರ ರಮೇಶ್ ಎಡಚಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತ ವ್ಹಿ.ಆರ್.ಹಿರೇಗೌಡ್ರ, ಅಖಿಲೇಶ್, ಚೇತನ್ ಕುಮಾರ ನಾಯ್ಕ್, ಎಂ.ಎಸ್.ಬೊಮ್ಮನಹಳ್ಳಿ,   ಸೇರಿದಂತೆ ಮತ್ತಿತರರ ಮುಖಂಡರು, ಗ್ರಾಮಸ್ಥರು ಪಾಲ್ಗೊಂಡಿದ್ದರು.