ರೂಪಾಯಿ ಮೌಲ್ಯ 6 ಪೈಸೆ ಏರಿಕೆ

 ಮುಂಬೈ, ಅ 17:     ವಿತ್ತೀಯ ವಿನಿಮಯ ಮಾರುಕಟ್ಟೆಯಲ್ಲಿ ಗುರುವಾರ ಬೆಳಗ್ಗೆ  ಬ್ಯಾಂಕರ್ ಹಾಗೂ ರಫ್ತುದಾರರ ಅಮೆರಿಕ ಡಾಲರ್ ಮಾರಾಟದಿಂದ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಆರು ಪೈಸೆ ಹೆಚ್ಚಳವಾಗಿದ್ದು, 71.381 ರೂ.ಗಳಷ್ಟಿದೆ.     ಸ್ಥಳೀಯ ಘಟಕಗಳು ದಿನದ ಹೆಚ್ಚಳ ಹಾಗೂ ಕುಸಿತವಾಗಿ ಕ್ರಮವಾಗಿ 71.47 ರೂ. ಹಾಗೂ 71.369 ರೂ.  ಎಂದು ದಾಖಲಿಸಿದೆ.  ವಿಶ್ವದ ಇತರ ಕರೆನ್ಸಿಗಳ ಎದುರು ಡಾಲರ್ ಬೆಲೆ ಕುಸಿತ ಕಂಡಿದ್ದರಿಂದ ರೂಪಾಯಿ ಮೌಲ್ಯ ಹೆಚ್ಚಳವಾಗಿದೆ ಎಂದು ಅದು ತಿಳಿಸಿದೆ.