ಮುಂಬೈ, ನ 11 : ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ ಸೋಮವಾರದ ಬೆಳಗಿನ ವಹಿವಾಟಿಲ್ಲಿ 4 ಪೈಸೆ ಇಳಿಕೆ ಕಂಡು ಒಂದು ಡಾಲರ್ ಬೆಲೆ 71 ರೂಪಾಯಿ 33 ಪೈಸೆಯಷ್ಟಿದೆ. ರೂಪಾಯಿ ಮೌಲ್ಯದ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ 71.45 ರೂ ಮತ್ತು 71.31 ರೂ ನಷ್ಟಿದೆ. ಇತರ ಕರೆನ್ಸಿಗಳ ಎದುರು ಡಾಲರ್ ಮೌಲ್ಯ ಬಲಗೊಂಡ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.