ಮುಂಬೈ, ಅ 3: ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಗುರುವಾರ ವಹಿವಾಟು ಆರಂಭದಲ್ಲಿ ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ 14 ಪೈಸೆ ಕುಸಿತ ಕಂಡು 71.22ರಷ್ಟು ದಾಖಲಾಗಿದೆ ಎಂದು ವಿದೇಶಿ ವಿನಿಮಯ ಮಾರುಕಟ್ಟೆಯ ವಿತರಕರು ತಿಳಿಸಿದ್ದಾರೆ. ಬ್ಯಾಂಕರುಗಳು ಮತ್ತು ಆಮದುದಾರರಿಂದ ಅಮೆರಿಕದ ಡಾಲರ್ಗೆ ಬೇಡಿಕೆ ಹೆಚ್ಚಿದ್ದರಿಂದ ರೂಪಾಯಿ ಮೌಲ್ಯ ಇಳಿಕೆಯಾಗಿದೆ. ಸ್ಥಳೀಯ ಘಟಕವು ದಿನನಿತ್ಯದ ಗರಿಷ್ಠ ಮತ್ತು ಕನಿಷ್ಠ ಮೌಲ್ಯ 71.34 ಮತ್ತು 71.17 ದಾಖಲಾಗಿದೆ. ಇತರ ಕರೆನ್ಸಿಗಳ ವಿರುದ್ಧ ಡಾಲರ್ ಮೌಲ್ಯ ಹೆಚ್ಚಳ ಮತ್ತು ಷೇರು ಮಾರುಕಟ್ಟೆಯಲ್ಲಿ ನಕಾರಾತ್ಮಕ ಆರಂಭದಿಂದಾಗಿ ದೇಶೀಯ ಘಟಕದಲ್ಲಿ ಕುಸಿತ ಉಂಟಾಯಿತು ಎಂದು ವಿತರಕರು ಹೇಳಿದ್ದಾರೆ.