ಸಿಡಲು ಬಡಿದು ಮೃತಪಟ್ಟ ರೈತ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಗಳ ಪರಿಹಾರ ವಿತರಣೆ

ಬಾಗಲಕೋಟೆ, ಜೂ.2 , ಬಾದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮದಲ್ಲಿ ಸಿಡಿಲು ಬಡಿದು ಮೃತಪಟ್ಟ  ರೈತ ಬಸಯ್ಯ ಮುಚಖಂಡಿ ಹಾಗೂ ಹೊಸೂರ ಗ್ರಾಮದ ಮೃತ ರೈತ ಮಹಿಳೆ ಶಾಂತವ್ವ ಭೋವಿ ಕುಟುಂಬದ  ಮನೆಗೆ ಉಪ ಮುಖ್ಯಮಂತ್ರಿ  ಗೋವಿಂದ ಕಾರಜೋಳ ಭೇಟಿ ನೀಡಿ ಸಾಂತ್ವನ ಹೇಳಿ ತಲಾ 5  ಲಕ್ಷ ರೂ.ಗಳ ಪರಿಹಾರಧನ ಚೆಕ್‍ನ್ನು ವಿತರಿಸಿದರು. ಅಪಘಾತದಲ್ಲಿ ಮೃತಪಟ್ಟ ನಂದಿಕೇಶ್ವರ  ಗ್ರಾಮದ ಪ್ರಭಾವತಿ ಹಂಗರಗಿ ಮನೆಗೂ ಸಹ ಭೇಟಿ ನೀಡಿ ಸಾಂತ್ವನ ಹೇಳಿದರು.ಭೇಟಿ  ಸಂದರ್ಭದಲ್ಲಿ ಸಂಸದ  ಪಿ.ಸಿ.ಗದ್ದಿಗೌಡರ, ಜಿಲ್ಲಾಧಿಕಾರಿ ಕ್ಯಾಪ್ಟನ್  ಡಾ.ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಬಾದಾಮಿ  ತಹಶೀಲ್ದಾರ ಇಂಗಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು.