ಎಂ ಎಸ್ ಎಂ ಇ ಗಳಿಗೆ ಲಕ್ಷ ಕೋಟಿ ರೂಪಾಯಿ ನಿಧಿ; ನಿತಿನ್ ಗಡ್ಕರಿ

ನವದೆಹಲಿ, ಏ ೨೫, ಲಾಕ್ ಡೌನ್  ಹಿನ್ನಲೆಯಲ್ಲಿ   ಸೂಕ್ಷ್ಮ, ಸಣ್ಣ  ಹಾಗೂ ಮಧ್ಯಮ ಕೈಗಾರಿಕೆಗಳು  ಎದುರಿಸುತ್ತಿರುವ   ಆರ್ಥಿಕ   ಸಂಕಷ್ಟಗಳನ್ನು    ನಿವಾರಿಸಲು  ಕೇಂದ್ರ ಸರ್ಕಾರ  ೧  ಲಕ್ಷ ಕೋಟಿ ರೂಪಾಯಿ ನಿಧಿ ಸ್ಥಾಪಿಸುವ ಯೋಜನೆ  ಆರಂಭಿಸಲು  ನಿರ್ಧರಿಸಿದೆ ಕೇಂದ್ರ,  ರಾಜ್ಯ ಸರ್ಕಾರದ  ಸಂಸ್ಥೆಗಳು,  ಭಾರಿ ಕೈಗಾರಿಗಳು   ಎಂಎಸ್ ಎಂ ಇ  ಗಳಿಗೆ ಉಳಿಸಿಕೊಂಡಿರುವ ಬಾಕಿ ಹಣ ಪಾವತಿಸಲು ಸಾಧ್ಯವಾಗುವಂತೆ  ಈ ನಿಧಿಯನ್ನು  ಸ್ಥಾಪಿಸಲಾಗುತ್ತಿದೆ  ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಹಣಕಾಸು ಸಚಿವಾಲಯ   ಅನುಮೋದನೆ ನೀಡಿದ ನಂತರ  ಈ  ಪ್ರಸ್ತಾವನೆ  ಸಂಪುಟದ ಮುಂದೆ ಮಂಡಿಸಲಾಗುವುದು ಎಂದು  ಅವರು ತಿಳಿಸಿದ್ದಾರೆ.